ಮರುಟೆಂಡರ್ಗೆ ಪುರಸಭೆ ವಿಶೇಷ ಸಭೆ ಒಪ್ಪಿಗೆ
ಕಡೂರು: ಇಲ್ಲಿನ ಪುರಸಭೆಯ ವಿವಿಧ ಯೋಜನೆಗಳು ಮತ್ತು ಕಾಮಗಾರಿಗಳ ಕುರಿತ 1.43 ಕೋಟಿ ಕ್ರಿಯಾಯೋಜನೆ ಕುರಿತಂತೆ ಪೂರ್ವಭಾವಿ ವಿಶೇಷ ಸಭೆ ನಡೆಯಿತು. ಕನಕ ಸಭಾಂಗಣದಲ್ಲಿ ಪುರಸಭಾಧ್ಯಕ್ಷೆ ಸರಸ್ವತಿ ಕೃಷ್ಣಮೂರ್ತಿಅವರ ಅಧ್ಯಕ್ಷತೆಯಲ್ಲಿ, ಉಪಾಧ್ಯಕ್ಷ ಜಯಣ್ಣ ಮತ್ತು ಮುಖ್ಯಾಧಿಕಾರಿ ಕುಮಾರನಾಯ್ಕ ಅವರ ಸಮ್ಮುಖದಲ್ಲಿ ವಿಶೇಷ ಸಭೆ ನಡೆಯಿತು. 13ನೇ ಹಣಕಾಸು ಯೋಜನೆ ಅಡಿ ಕ್ರಿಯಾಯೋಜನೆ ತಯಾರಿಸುವ ಕುರಿತು ಮತ್ತು ಬದಲಿ ಕಾಮಗಾರಿ ನಡೆಸುವ ಹಿನ್ನೆಲೆಯಲ್ಲಿ ಸದಸ್ಯರ ಅಭಿಪ್ರಾಯ ಪಡೆಯಲಾಯಿತು. 13ನೇ ಹಣಕಾಸು ಯೋಜನೆಯಲ್ಲಿ ಘನತ್ಯಾಜ್ಯ ವಿಲೇವಾರಿ, ಚರಂಡಿ ನಿರ್ಮಾಣ, ಪಾರ್ಕ್ ಅಭಿವೃದ್ಧಿ, ಪುರಸಭಾ ಕಟ್ಟಡ, ವಿದ್ಯುತ್ ಸೇರಿದಂತೆ ಒಟ್ಟು 88.18 ಲಕ್ಷ ಮತ್ತು 2013-14ರ 13ನೇ ಹಣಕಾಸು ಪ್ರೋತ್ಸಾಹಧನ ಯೋಜನೆಯಡಿಯಲ್ಲಿ 35.87 ಲಕ್ಷ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲಾಯಿತು. ರಾಜ್ಯ ಹಣಕಾಸು ಯೋಜನೆಯಡಿಯಲ್ಲಿ ಪ್ರೋತ್ಸಾಹಧನ ಅನುದಾನ ನೀಡಿಕೆಯ ಕ್ರಿಯಾಯೋಜನೆಯಲ್ಲಿ 11.94 ಲಕ್ಷದ ಕಾಮಗಾರಿ ಮತ್ತು ಫಲಾನುಭವಿಗಳ ಆಯ್ಕೆ ಕುರಿತಂತೆ ಸದಸ್ಯರ ಅಭಿಪ್ರಾಯ ಪಡೆದು ಕ್ರಿಯಾಯೋಜನೆಗೆ ಅನುಮತಿ ಪಡೆಯಲಾಯಿತು. ಅಲ್ಲದೆ, 7.13 ಲಕ್ಷ ಕ್ರಿಯಾಯೋಜನೆಗೂ ಸಭೆ ಅನುಮೋದನೆನ ನೀಡಿತು. ವಿವಿಧ ಯೋಜನೆಯಡಿ ಮಂಜೂರಾಗಿ ಪಡೆಯಲಾಗಿರುವ ಕಾಮಗಾರಿಗಳ ಅಂದಾಜು ಪಟ್ಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಈಗಾಗಲೇ ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆಗೆ ಕೇವಲ ಒಬ್ಬರೆ ಟೆಂಡರ್ ಹಾಕಿದ್ದಾರೆ. ಇದಕ್ಕೆ ಸದಸ್ಯರಾದ ಎಂ. ಸೋಮಶೇಖರ್, ಕೋಳಿ ಲೋಕೇಶ್, ಈರಳ್ಳಿ ರಮೇಶ್, ತೋಟದ ಮನೆ ಮೋಹನ್ ಸೇರಿದಂತೆ ಸರ್ವ ಸದಸ್ಯರು ಮರು ಟೆಂಡರ್ ಕರೆಯುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಸಭೆಯು ಮರು ಟೆಂಡರ್ಗೆ ಸಭೆ ಒಪ್ಪಿಗೆ ನೀಡಿತು. ಸದಸ್ಯರಾದ ಸೋಮಶೇಖರ್, ರವಿಕುಮಾರ್, ರುಕ್ಸಾನ ಪರ್ವೀನ್, ಜಿ. ಸೋಮಯ್ಯ, ಹಾಜಿರಾಬಾನು, ಜಯಮ್ಮ, ಸಿಬ್ಬಂದಿಗಳಾದ ಯೋಗೀಶ್, ಸುಬ್ರಹ್ಮಣ್ಯ, ಹರೀಶ್, ಈಶ್ವರ್ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

