ಗ್ರಾಪಂ ಅಧ್ಯಕ್ಷ, ಪಿಡಿಒ ಅಧಿಕಾರಿಗಳ ವಿಳಂಬ ಅರಣ್ಯವಾಸಿಗಳಿಗೆ ಅನ್ಯಾಯ
ಮೂಡಿಗೆರೆ: ಪಾರಂಪರಿಕ ಅರಣ್ಯವಾಸಿಗಳ ಅರ್ಜಿಗಳನ್ನು ಇತ್ಯರ್ಥ ಮಾಡದೇ ಇರುವುದನ್ನು ಖಂಡಿಸಿ ಅರಣ್ಯ ವಾಸಿಗಳ ಕಾನೂನಿನಡಿಯಲ್ಲಿ ಗ್ರಾಪಂ ಅಧ್ಯಕ್ಷ ಮತ್ತು ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಭಾರತ ಕಮ್ಯುನಿಸ್ಟ್ ಪಕ್ಷ ತೀರ್ಮಾನಿಸಿದೆ ಎಂದು ಸಿಪಿಐ ಸಹ ಕಾರ್ಯದರ್ಶಿ ಸ್ವಾತಿ ಸುಂದರೇಶ್ ಹೇಳಿದರು.
ಕಳಸದಲ್ಲಿ ನಡೆದ ಪಾರಂಪರಿಕ ಅರಣ್ಯವಾಸಿಗಳ ಅರ್ಜಿದಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಮ್ಯೂನಿಸ್ಟ್ ಪಕ್ಷ 2012ರಲ್ಲಿ ಪಾರಂಪರಿಕ ಅರಣ್ಯವಾಸಿಗಳನ್ನು ಸಂಘಟಿಸಿ, ಕಾನೂನಿನಡಿಯಲ್ಲಿ ಹಕ್ಕು ಪತ್ರಕ್ಕೆ 150 ಕ್ಕೂ ಹೆಚ್ಚು ಅರಣ್ಯವಾಸಿಗಳು ಕೊಟ್ಟ ಅರ್ಜಿ ಇತ್ಯರ್ಥವಾಗಿರುವುದಿಲ್ಲ.
ಅಲ್ಲದೆ ಕಳಸ ನಾಡ ಕಚೇರಿ ಮುಂಬಾಗ ಇನಾಂ ನಿರಾಶ್ರಿತರ ಧರಣಿ ನಡೆಯುತ್ತಿದ್ದು, ಈ ಹೋರಾಟ ಇನಾಂ ನಿರಾಶ್ರಿತರ ಬದುಕಿನ ಅಳಿವು ಉಳಿವಿನ ಹೋರಾಟವಾಗಿದೆ. 10 ಎಕರೆ ಒಳಪಟ್ಟ ಎಲ್ಲಾ ಕೃಷಿ ಭೂಮಿ ಉಳಿಸಿಕೊಡುವ ಹೋರಾಟವಾಗಿದ್ದು, ಇದನ್ನು ಕಮ್ಯೂನಿಸ್ಟ್ ಬೆಂಬಲಿಸುತ್ತದೆ.
ಅಲ್ಲದೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಎಲ್ಲಾ ರಾಜಕೀಯ ಪಕ್ಷ ಮತ್ತು ಎಲ್ಲಾ ಸಂಘ ಸಂಸ್ಥೆಗಳು ಒಗ್ಗೂಡಿಸಿ ನಡೆಸುತ್ತಿರುವ ಇನಾಂ ಕೃಷಿಕರ ಹೋರಾಟ ಬೆಂಬಲಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ತಾಲೂಕು ಕಾರ್ಯದರ್ಶಿ ಗೋಪಾಲ ಶೆಟ್ಟಿ, ಜಿಲ್ಲಾ ಮಂಡಳಿ ಸದಸ್ಯ ಲಕ್ಷ್ಮಣಾಚಾರ್, ಅರಣ್ಯ ಸಮಿತಿ ಕಾರ್ಯದರ್ಶಿ ಸತೀಶ್ ಕಾರಗದ್ದೆ, ಸುರೇಶ್ಗೌಡ ನೂಜಿ, ಅಣ್ಣಪ್ಪ, ಗೋಪಾಲ ಹಡ್ಲು, ಬೇಬಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

