ಚಿಕ್ಕಮಗಳೂರು

ಬರ: ದಾಸ್ತಾನಿದ್ದ ಮೇವು ವಿಲೇವಾರಿ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.13
ಬರ ನಿರ್ವಹಣೆಯಲ್ಲಿ ಸರ್ಕಾರದ ಅನುದಾನದಲ್ಲಿ ತರೀಕೆರೆ ತಾಲೂಕಿನಲ್ಲಿ ಖರೀದಿ ಮಾಡಿದ್ದ ಜಾನುವಾರುಗಳ ಮೇವು ಇತ್ತೀಚೆಗೆ ವಿಲೇವಾರಿಯಾಗಿದೆ. ಈ ಮೇವನ್ನು ಅಮೃತ ಮಹಲ್ ಕಾವಲ್ ಗಳಲ್ಲಿನ ಜಾನುವಾರುಗಳಿಗೆ ಬಳಕೆ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದ ಮೇರೆಗೆ ಹುಲ್ಲನ್ನು ವಿಲೇವಾರಿ ಮಾಡಲಾಗಿದೆ. ಖರೀದಿ ಮಾಡಿದ್ದ ಮೇವು ಈ ವರ್ಷದಲ್ಲಿ ಬಳಕೆ ಮಾಡಿಕೊಳ್ಳಲು ಬರ ನಿರ್ವಹಣೆಯ ಮಾರ್ಗಸೂಚಿ ಅಡ್ಡಿಯಾಗಿತ್ತು. ಈ ಕುರಿತು “OÚ«Ú­sÚ®Úúڒ¥ÚÆÇ ಮೇ 9ರಂದು “ÈæßÞÈÚâ ವಿತರಣೆಗೆ ಮಾರ್ಗಸೂಚಿ @tu’ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಸರ್ಕಾರದ ಅನುಮತಿ ಪಡೆದು ಅಮೃತ ಮಹಲ್ ಕಾವಲ್‌ನಲ್ಲಿರುವ ಜಾನುವಾರುಗಳಿಗೆ ಬಳಕೆ ಮಾಡುವಂತೆ ಸೂಚನೆ ನೀಡಿದ ಮೇರೆಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಹಾಗೂ ಚಳ್ಳಕೆರೆಯಲ್ಲಿನ ಅಮೃತ ಮಹಲ್ ಕಾವಲ್ ಹಾಗೂ ತರೀಕೆರೆ ತಾಲೂಕಿನ ಅಜ್ಜಂಪುರ ಹಾಗೂ ಲಿಂಗದಹಳ್ಳಿಯಲ್ಲಿ ಇರುವ ಅಮೃತ ಮಹಲ್ ಕಾವಲ್‌ಗಳ ಜಾನುವಾರುಗಳಿಗೆ ಬಳಕೆ ಮಾಡಿಕೊಳ್ಳಲು ಸರಬರಾಜು ಮಾಡಲಾಗಿದೆ.
ಏನಾಗಿತ್ತು?:  2012-13ನೇ ಸಾಲಿನಲ್ಲಿ ತರೀಕೆರೆ ತಾಲೂಕು ಬರಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಇದರಡಿಯಲ್ಲಿ ಜಾನುವಾರುಗಳ ಮೇವು ಖರೀದಿಗೆ 20 ಲಕ್ಷ ಬಿಡುಗಡೆ ಮಾಡಲಾಗಿತ್ತು.
   ಈ ಹಣ ಕೈ ಸೇರಿ, ಮೇವು ಖರೀದಿ ಮಾಡಿ ದಾಸ್ತಾನು ಮಾಡುತ್ತಿದ್ದಂತೆ ಮಳೆಗಾಲ ಆರಂಭಗೊಂಡಿತು. ಆಗ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಜಾನುವಾರುಗಳ ಮೇವನ್ನು ಬೆಳೆಸಿ, ಬಳಕೆ ಮಾಡಿಕೊಂಡರು. ಈ ಅವಧಿಯೊಳಗೆ ತರೀಕೆರೆ ತಾಲೂಕಿನಲ್ಲಿ ಸುಮಾರು 360 ಟನ್ ಮೇವು ಖರೀದಿ ಮಾಡಲಾಗಿತ್ತು. ಮೇವಿನ ಅಭಾವ ಇಲ್ಲದಿರುವುದರಿಂದ ಬೀರೂರು, ಅಜ್ಜಂಪುರದ ಅಮೃತ ಮಹಲ್ ಕಾವಲಿನಲ್ಲಿ ಮೇವನ್ನು ದಾಸ್ತಾನು ಮಾಡಲಾಯಿತು.
ಈ ವರ್ಷದಲ್ಲಿ ತರೀಕೆರೆ ತಾಲೂಕಿನ ಕೆಲವು ಪ್ರದೇಶದಲ್ಲಿ ಸಮರ್ಪಕವಾಗಿ ಮಳೆ ಬಾರದೆ ಬರದ ಪರಿಸ್ಥಿತಿ ಇದ್ದರೂ ಸಹ ಈ ತಾಲೂಕು ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಣೆ ಮಾಡಲಿಲ್ಲ, ಸರ್ಕಾರ ಈ ಘೋಷಣೆ ಮಾಡಿದ್ದರೆ ಈ ವರ್ಷದಲ್ಲಿ ಮೇವಿನ ಕೊರತೆ ಇದ್ದ ಲಿಂಗದಹಳ್ಳಿ ಹೋಬಳಿಯಲ್ಲಿ ಜಾನುವಾರುಗಳಿಗೆ ಈ ಮೇವು ಬಳಕೆ ಮಾಡಿಕೊಳ್ಳಬಹುದಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ, ಸರ್ಕಾರದ ಮಾರ್ಗಸೂಚಿ. ಅಂದರೆ, ಬರ ನಿರ್ವಹಣೆಗೆ ಬಿಡುಗಡೆ ಮಾಡಿರುವ ಅನುದಾನ ಅದೇ ಉದ್ದೇಶಕ್ಕೆ ಬಳಸಬೇಕು. ಈ ವರ್ಷದಲ್ಲಿ ಘೋಷಣೆ ಮಾಡಿದ್ದರೆ, ಈ ಮೇವು ಬಳಸಲು ಅಡ್ಡಿ ಇರುತ್ತಿರಲಿಲ್ಲ.
ವಿತರಣೆ:  ಕಳೆದೊಂದು ವರ್ಷದಿಂದ ಅಜ್ಜಂಪುರ, ಬೀರೂರಿನ ಅಮೃತ ಮಹಲ್ ಕಾವಲ್‌ನಲ್ಲಿದ್ದ ಮೇವನ್ನು ಇತ್ತೀಚೆಗೆ ವಿಲೇವಾರಿ ಮಾಡಲಾಗಿದೆ. ಬೀರೂರಿನ ಅಮೃತ ಮಹಲ್ ಕಾವಲ್ ನಲ್ಲಿದ್ದ 160.23 ಟನ್ ಮೇವನ್ನು ಮೊಳಕಾಲ್ಮುರು ಹಾಗೂ ಚಳ್ಳಕೆರೆಗೆ ಮೇ 12 ರಿಂದ ಜೂ.3 ರವರೆಗೆ ಸರಬರಾಜು ಮಾಡಲಾಗಿದೆ. ಅಜ್ಜಂಪುರದಲ್ಲಿದ್ದ ಮೇವನ್ನು ಲಿಂಗದಹಳ್ಳಿಯಲ್ಲಿನ ಅಮೃತ ಮಹಲ್ ಕಾವಲ್ ಮತ್ತು ಅಜ್ಜಂಪುರದ ಅಮೃತ ಮಹಲ್ ಕಾವಲ್‌ಗೆ ಬಳಕೆ ಮಾಡಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.