ಚಿಕ್ಕಮಗಳೂರು

ಕಾಫಿ ಬೋರ್ಡ್ ಮುಚ್ಚಲು ಆಗ್ರಹ

Published On :

ಮೂಡಿಗೆರೆ:  ಕಾಫಿ ಬೋರ್ಡ್ ಅನ್ನು ಸ್ಥಗಿತಗೊಳಿಸುವಂತೆ ಯುವ ಜನತಾದಳ ಅಧ್ಯಕ್ಷ ಬಿದರಹಳ್ಳಿ ಲೋಹಿತ್ ಆಗ್ರಹಿಸಿದ್ದಾರೆ.
ಕಾಫಿ ಬೋರ್ಡ್ ನಮಗೆ ಬೇಕಾಗಿಲ್ಲ. ಇದರಿಂದ ಕಾಫಿ ಬೆಳೆಗಾರರಿಗೆ ಯಾವುದೇ ಪ್ರಯೋಜನವಿಲ್ಲ. ಈ ಬೋರ್ಡ್ ಶ್ರೀಮಂತ ವರ್ಗಕ್ಕೆ ಮಾತ್ರ ಸೀಮಿತವಾಗಿದೆ. ಮಧ್ಯಮ ವರ್ಗ ಮತ್ತು ಬಡಜನರ ವಿರುದ್ಧವಾಗಿದೆ ಎಂದಿದ್ದಾರೆ.
ಕಾಫಿ ತೋಟದೊಳಗೆ 1 ಎಕರೆ 1200 ಅರೇಬಿಕಾ ಗಿಡ ಬೆಳೆಯಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಬೋರರ್ ಹುಳ ಕಾಫಿ ತೋಟವನ್ನು ಆವರಿಸಿಕೊಂಡಿದೆ. ಇದರಿಂದ ಕಾಫಿ ಗಿಡಗಳು ಸಂಪೂರ್ಣವಾಗಿ ನಾಶಗೊಳ್ಳುತ್ತಿವೆ. ಈಗಿನ ಪರಿಸ್ಥಿತಿಯಲ್ಲಿ ಬೋರರ್ ಹುಳ ಹಾವಳಿಯಿಂದ 1 ಎಕರೆಯಲ್ಲಿ 800 ಕಾಫಿ ಗಿಡಗಳನ್ನು ಕಡಿತಗೊಳಿಸುವಂತಹ ಪರಿಸ್ಥಿತಿ ಉಂಟಾಗಿದೆ. ಇದರಂದ ಕಾಫಿ ಬೆಳೆಗಾರರಿಗೆ ತೀವ್ರ ತೊಂದರೆ ಎದುರಾಗಿದೆ ಎಂದಿದ್ದಾರೆ.
ಬೋರರ್ ಹುಳುವನ್ನು ನಾಶಪಡಿಸುವ ಬಗ್ಗೆ ಇಂದಿಗೂ ಕಾಫಿ ಬೋರ್ಡ್ ವಿಜ್ಞಾನಿಗಳು ಪರಿಹಾರ ಕಂಡುಹಿಡಿದಿಲ್ಲ. ಇದರಿಂದಾಗಿ ಕಾಫಿ ಬೋರ್ಡ್ ಬೇಕು, ಬೇಡ ಎನ್ನುವ ಗೊಂದಲದಲ್ಲಿ ಬೆಳೆಗಾರರು ಮುಳುಗಿದ್ದಾರೆ.
ಆದ್ದರಿಂದ  ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಲೋಕಾಸಭಾ ಸದಸ್ಯರು ಈ ಬಗ್ಗೆ ಗಂಭೀರವಾಗಿ ಅವಲೋಕಿಸಬೇಕು. ಈ ನಿಗಮವನ್ನು ರದ್ದುಪಡಿಸಲು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವಂತೆ ಲೋಹಿತ್ ಒತ್ತಾಯಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.