ಚಿಕ್ಕಮಗಳೂರು

ಅಕ್ರಮ-ಸಕ್ರಮ ಯೋಜನೆ ಬಡವರಿಗೆ ವರದಾನ

Published On :

ಬಾಳೆಹೊನ್ನೂರು: ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದು ರಾಜ್ಯಪಾಲರ ಅಸಹಕಾರದಿಂದ ತಿರಸ್ಕೃತಗೊಂಡ ಕರ್ನಾಟಕ ಭೂ ಕಂದಾಯ ಕಾಯ್ದೆ 64(ಸಿ) ತಿದ್ದುಪಡಿ ಗ್ರಾಮೀಣ ನಿವೇಶನ ರಹಿತರ ಅಕ್ರಮ-ಸಕ್ರಮ ಯೋಜನೆಯನ್ನು ಪ್ರಸ್ತುತ ಸರ್ಕಾರ ಜಾರಿಗೆ ತಂದಿದ್ದು, ಗ್ರಾಮೀಣ ಭಾಗದ ನಿವೇಶನ ರಹಿತ ಬಡಜನತೆಗೆ ವರದಾನವಾಗಿದೆ ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯ ನಾಗೇಶ್ ಆಂಗೀರಸ ಹೇಳಿದರು.
ಈ ಕಾನೂನನ್ನು ಜಾರಿಗೆ ತಂದಿರುವುದು ಬಡವರನ್ನು ಮುಂದಿಟ್ಟುಕೊಂಡು ಭೂ ಮಾಫಿಯಾಗಳು ಆಡುವ ಆಟಗಳಿಗೆ ದೊಡ್ಡಮಟ್ಟದ ಕಡಿವಾಣ ಬೀಳಲಿದೆ. ಫಲಾನುಭವಿಗಳು ಫಾರಂ ನಂ.3ಎ ನಲ್ಲಿ ಸ್ಥಳೀಯ ಅಟಲ್ ಜೀ ಕೇಂದ್ರದಲ್ಲಿ ಅರ್ಜಿಯನ್ನು ತಹಸೀಲ್ದಾರರಿಗೆ ಸಲ್ಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಶುಲ್ಕವಾಗಿ ರು. 50 ಗಳನ್ನು ಪಾವತಿಸಿ ದೃಢೀಕರಣ ಪಡೆಯಬೇಕು. ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಈ ಕಾನೂನನ್ನು ಅಭಿಯಾನವಾಗಿಸಬೇಕೆಂದು ಪಣತೊಟ್ಟು, ಯೋಜನೆಯ ಕುರಿತು ಸಮಗ್ರ ಮಾಹಿತಿ ನೀಡಲು ತಯಾರಾಗಿದೆ. ಯಾರೇ ಅಪೇಕ್ಷಿಸಿದರೂ ಸಂಬಂಧಿಸಿದ ಅರ್ಜಿ ನಮೂನೆ, ವಿವರಗಳನ್ನು ಇ-ಮೇಲ್, ಅಂಚೆ ಮತ್ತಿತರರ ಮೂಲಗಳ ಮೂಲಕ ತಲುಪಿಸಲು ಶ್ರಮಿಸಿದೆ. ಮಾಹಿತಿಗಾಗಿ 9448972033 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.