ಚಿಕ್ಕಮಗಳೂರು

'ಅಪೂರ್ಣ ಕಟ್ಟಡದಲ್ಲಿ ಸಭೆ ನಡೆಸದಿರಿ'

Published On :

ಮೂಡಿಗೆರೆ: ತಾಲೂಕಿನ ಹಂತೂರು ಗ್ರಾಪಂ ವ್ಯಾಪ್ತಿಯ ಉಗ್ಗೇಹಳ್ಳಿಯಲ್ಲಿ ಸುವರ್ಣ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದ ಕಾಮಗಾರಿ ಇನ್ನೂ ಪ್ರಗತಿಯಲ್ಲಿದ್ದು, ಈ ಅಪೂರ್ಣ ಕಟ್ಟಡದಲ್ಲಿ   ಗ್ರಾಪಂ ಆಡಳಿತದವರು ಗ್ರಾಮಸಭೆಯನ್ನು ಕಾಮಗಾರಿ ನಡೆಯುತ್ತಿರುವ ಸಮುದಾಯ ಭವನದಲ್ಲೇ ನಡೆಸಲು ಉದ್ದೇಶಿಸಿ  ಒತ್ತಡ ಹೇರುತ್ತಿದ್ದಾರೆ. ಒಂದು ವೇಳೆ ಸಮುದಾಯ ಭವನದಲ್ಲಿ ಗ್ರಾಮ ಸಭೆ ನಡೆಸಿದರೆ ಅದು ಸರ್ಕಾರಿ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಹಂತೂರು ಗ್ರಾಪಂ ಮಾಜಿ ಅಧ್ಯಕ್ಷ ಯು.ಪಿ.ಜಗದೀಶ್ ಉಗ್ಗೇಹಳ್ಳಿ ತಿಳಿಸಿದ್ದಾರೆ.   
  ಹಂತೂರು ಗ್ರಾಪಂನಲ್ಲಿ ಇದುವರೆಗೆ ಗ್ರಾಮ ಸಭೆ ಗಾಪಂ ಕಚೇರಿಯಲ್ಲೇ ನಡೆಯುತ್ತ ಬಂದಿವೆ.
 ಗ್ರಾಮಸಭೆ ನಡೆಸಲು ತೀರ್ಮಾನಿಸುವಾಗ ಸದಸ್ಯರನ್ನು ಆಹ್ವಾನಿಸಿ ಚರ್ಚಿಸಿಲ್ಲ.
 ಗ್ರಾಮಸ್ಥರನ್ನೂ ಆಹ್ವಾನಿಸಿಲ್ಲ. ಹೀಗಿರುವಾಗ ಏಕಾಏಕಿ ತೀರ್ಮಾನ ಕೈಗೊಳ್ಳುವ ಮೂಲಕ ಕಾಮಗಾರಿ ಪೂರ್ಣಗೊಳ್ಳದ ಸಮುದಾಯ ಭವನದಲ್ಲೇ ಗ್ರಾಮಸಭೆ ನಡೆಸುವುದಾಗಿ ಗುತ್ತಿಗೆದಾರರ ಮತ್ತು ಉಗ್ಗೆಹಳ್ಳಿ ವಿದ್ಯಾಗಣಪತಿ ಯುವಕ ರೈತ ಸಂಘದವರ ಮೇಲೆ ವಿನಾಕಾರಣ ಒತ್ತಡ ಹೇರುತ್ತಿರುವುದು ಸಮಂಜಸವಲ್ಲ.
   ಒಂದು ವೇಳೆ ಉಗ್ಗೆಹಳ್ಳಿ ಸಮುದಾಯ ಭವನದಲ್ಲಿ ಗ್ರಾಮಸಭೆ ನಡೆಸಲು ಮುಂದಾದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.