ಚಿಕ್ಕಮಗಳೂರು

ಬಸವ ವಸತಿ ಯೋಜನೆಯಡಿ 500 ಮನೆ ಮಂಜೂರು

Published On :

ಕ.ಪ್ರ.ವಾರ್ತೆ ್ಣ ತರೀಕೆರೆ ್ಣ ಮಾ. 4
ಬಸವ ವಸತಿ ಯೋಜನೆಯಡಿ ತಾಲೂಕಿಗೆ 500 ಮನೆ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿದೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದರು.
ಅವರು, ಮಂಗಳವಾರ ಸಮೀಪದ ಬಾವಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ರು. 15 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಮೇಲ್ತೊಟ್ಟಿ ನಿರ್ಮಾಣ, ರು. 6 ಲಕ್ಷದಲ್ಲಿ ಅರಸಿಕೆರೆ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ  ಗ್ರಾಪಂ ಕಾರ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು.
500 ಮನೆ ನಿರ್ಮಾಣ: ಬಸವ ವಸತಿ ಯೋಜನೆಯಡಿ ತಾಲೂಕಿಗೆ 1000 ಮನೆ ಮಂಜೂರು ಮಾಡುವಂತೆ ತಾವು ಸರ್ಕಾರಕ್ಕೆ ಮನವಿ ಮಾಡಿದ್ದು, ಇದೀಗ 500 ಮನೆ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಉಳಿದ 500 ಮನೆ ಮಂಜೂರಾತಿಗೂ ತಾವು ಪ್ರಯತ್ನಿಸುವುದಾಗಿ ತಿಳಿಸಿದರು.
ರು. 45 ಲಕ್ಷದಲ್ಲಿ ಬೊಂಬುಸರದಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲಾಗುವುದು. ಗಂಜಿಗೆರೆಯಲ್ಲಿ ಸೇವಾಲಾಲ್ ಸಮುದಾಯ ಭವನ ಮತ್ತು ಜಟಾಧರಸ್ವಾಮಿ ಸಮುದಾಯ ಭವನಕ್ಕೆ ತಲಾ ರು. 1 ಲಕ್ಷ ಅನುದಾನ ನೀಡಲಾಗುವುದು ಎಂದು ಅವರು ತಿಳಿಸಿದರು.
ಮೂಡಲಗಿರಿಯಪ್ಪ  ಮಾತನಾಡಿ,  ಬಾವಿಕೆರೆ ಗ್ರಾಪಂನ್ನು ಸುವರ್ಣ ಗ್ರಾಮ ಪಟ್ಟಿಗೆ ಸೇರಿಸಬೇಕು, ಬಾವಿಕೆರೆ ಗ್ರಾಮಕ್ಕೆ ಕಾಲೇಜು ಅಗತ್ಯವಿದೆ ಎಂದು ತಿಳಿಸಿದರು.
ಮಹಾಬಲ, ತಾಪಂ ಕಾರ್ಯನಿರ್ವಾಹಕ ದೇವರಾಜಪ್ಪ ಮಾತನಾಡಿದರು. ಜಿಪಂ ಸದಸ್ಯೆ ಸುಧಾ ಅಮೃತೇಶ್, ಗ್ರಾಪಂ ಅಧ್ಯಕ್ಷ ಜ್ಯೋತಿಲಕ್ಷ್ಮಿ, ಉಪಾಧ್ಯಕ್ಷ ರಮೇಶ್, ಗ್ರಾಪಂ ಸದಸ್ಯ ವಸಂತಕುಮಾರ್ ಶೆಟ್ಟಿ, ಲತಾ, ಗೌರಿಬಾಯಿ, ಗ್ರಾಮಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.