ಚಿಕ್ಕಮಗಳೂರು

ಶ್ರೀವತ್ಸ ಭಜನಾ ಮಂಡಳಿ ದಶಮಾನೋತ್ಸವ

Published On :

ಕ.ಪ್ರ.ವಾರ್ತೆ, ತರೀಕೆರೆ, ಮಾ. 6
ಶ್ರೀವತ್ಸ ಭಜನಾ ಮಂಡಳಿ ವತಿಯಿಂದ ಗುರುವಾರ ಪಟ್ಟಣದ ಅನ್ನಪೂರ್ಣ ಭವನದಲ್ಲಿ ಶ್ರೀವತ್ಸ ಭಜನಾ ಮಂಡಳಿಗೆ ಹತ್ತು ವರ್ಷಗಳು ತುಂಬಿದ ಪ್ರಯುಕ್ತ ಮಂಡಳಿಯ ದಶಮಾನೋತ್ಸವ ಆಚರಣೆಯನ್ನು ವಿಜೃಂಭಣೆಯಿಂದ ಏರ್ಪಡಿಸಲಾಗಿತ್ತು.
ಟಿಟಿಡಿಯ ದಾಸ ಸಾಹಿತ್ಯ ಪ್ರಾಜೆಕ್ಟ್ ವಿಶೇಷ ಅಧಿಕಾರಿ ಆನಂದ ತೀರ್ಥಾಚಾರ್ ಪೆಗಡಾಲ ಇವರ ಉಪಸ್ಥಿತಿಯಲ್ಲಿ ತಿರುಪತಿ ತಿರುಮಲ ಶ್ರೀನಿವಾಸ ದೇವರಿಗೆ ವಿಶೇಷ ಪುಷ್ಪಾಲಂಕಾರ, ಸಂಕಲ್ಪ ಅಭಿಷೇಕ, ಮಹಾ ಮಂಗಳಾರತಿ ಏರ್ಪಡಿಸಲಾಗಿತ್ತು.
ಶ್ರೀವತ್ಸ ಭಜನಾ ಮಂಡಳಿಯ ಪರವಾಗಿ ಅಧ್ಯಕ್ಷೆ ಲತಾ ಗೋಪಾಲಕೃಷ್ಣ, ಎಚ್.ಸಿ. ಗೋಪಾಲಕೃಷ್ಣ ಪೂಜಾ ಸಂಕಲ್ಪ ಸ್ವೀಕರಿಸಿದರು.
ಮಂಡಳಿ ಅಧ್ಯಕ್ಷೆ ಲತಾ ಗೋಪಾಲಕೃಷ್ಣ, ಮಂಡಳಿ ಸದಸ್ಯೆ ರಾಜಲಕ್ಷ್ಮಿ ನಾಗಭೂಷಣ್ ಮಾತನಾಡಿದರು.  
ಶ್ರೀವತ್ಸ, ಶ್ರೀನಿಧಿ, ಶ್ರೀವಾರಿ ಭಜನಾ ಮಂಡಳಿ ಸದಸ್ಯೆಯರು, ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ.ನಾಗಭೂಷಣ್, ಉಪಾಧ್ಯಕ್ಷ ಎಚ್.ವಿ. ಗೋಪಾಲಕೃಷ್ಣ, ಎಚ್.ವಿ. ಸತ್ಯನಾರಾಯಣ್, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎನ್. ಮಂಜುನಾಥ್, ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ, ಭದ್ರಾವತಿ ಆಕಾಶವಾಣಿ ಮುಖ್ಯ ಕಾರ್ಯನಿರ್ವಾಹಕ ಡಾ.ಎ,.ಎಸ್. ಶಂಕರನಾರಾಯಣ್, ಶಿಶುನಾಳ ಷರೀಫ್ ಪ್ರಶಸ್ತಿ ಪುರಸ್ಕೃತ ಗಾಯಕ ಗರ್ತಿಕೆರೆ ರಾಘಣ್ಣ, ಕಲಾವಿದ ಗುಂಡಣ್ಣ, ಕನ್ನಡಶ್ರೀ ಬಿ.ಎಸ್. ಭಗವಾನ್, ಕಸಾಪ ಅಧ್ಯಕ್ಷ ಜಿ. ಸುಬ್ರಹ್ಮಣ್ಯ ಮತ್ತು ತಾಲೂಕಿನಾದ್ಯಂತ ಆಗಮಿಸಿದ್ದ ಭಕ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸುಪ್ರಭಾತ ಸೇವೆ, ನಗರ ಸಂಕೀರ್ತನೆ, ದೇವರನಾಮ, ಹರಿಭಜನೆ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.