ಸಮಾಜಕ್ಕೆ ಹಿತವೆನಿಸುವ ಸಾಹಿತ್ಯ ರಚಿಸಿ
ಕ.ಪ್ರ.ವಾರ್ತೆ, ಬಾಳೆಹೊನ್ನೂರು, ಮಾ. 6
ಬೆಳೆಯುತ್ತಿರುವ ಯುವ ಕವಿಗಳು ಪ್ರಕೃತಿ ಆರಾಧನೆ ಮಾಡಿ ಕವನ ರಚಿಸಲು ಮಹತ್ವ ನೀಡಬೇಕು ಎಂದು ಸಾಹಿತಿ ಕರಗುಂದ ರಾಮಣ್ಣ ಹೇಳಿದ್ದಾರೆ.
ಇಲ್ಲಿನ ಕಲಾರಂಗ ಕ್ರೀಡಾಂಗಣದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮಹಾಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಏಳನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಯುವ ಕವಿಗಳಿಗೆ ಪ್ರಸ್ತುತ ವಿಷಯ ಸ್ಥಿತಿ ಅರಿತು ಬರೆಯುವ ಶಕ್ತಿ, ಕಲ್ಪನಾಶಕ್ತಿ ಇರಬೇಕು. ಸಮಾಜಕ್ಕೆ ಹಿತವೆನಿಸುವ ಸಾಹಿತ್ಯವನ್ನು ಅವರು ನೀಡಬೇಕು ಎಂದು ಸಲಹೆ ನೀಡಿದರು.
ಕವಿಗೋಷ್ಠಿಯಲ್ಲಿ ತಾಲೂಕಿನ ಸುಮಾರು 11 ಜನ ಯುವಕವಿಗಳು ಕವನ ವಾಚಿಸಿದ್ದು, ಅದರಲ್ಲಿ ಪ್ರಮುಖವಾಗಿ ವಿಜಯ್ಕುಮಾರ್ ಅವರು ತಾಯಿಯ ಸೇವೆಯ ಕುರಿತು, ಜಿ.ಎಸ್. ರತ್ನಾಕರ ರೈತನ ಕುರಿತು, ಹೆನ್ನಂಗಿ ವಿಜಯ್ ಮಳೆಯ ಕುರಿತು, ಹೊನ್ನೇಗೌಡ ಜೀವನದ ಕುರಿತು, ಕಾವ್ಯಶ್ರೀ ತಾಯಿಯ ಹುಡುಕಾಟದ ಕುರಿತು, ಜೆ. ವಿನುತ ಕಲ್ಪವೃಕ್ಷದ ಕುರಿತು, ಯಜ್ಞಪುರುಷಭಟ್ ಅಧ್ಯಾತ್ಮದ ಕುರಿತು, ಕೃಷ್ಣಭಟ್ ಪ್ರಸ್ತುತ ಜೀವನದ ಕುರಿತು, ಜಾನ್ ವಿಲ್ಸನ್, ಕೆ. ವೆಂಕಟೇಶ್, ಪರಶುರಾಮ, ಇಲಿಯಾಸ್ ಪಾಶಾ ಸಾಮಾಜಿಕ ಕವನಗಳನ್ನು ವಾಚಿಸಿದರು.
ಕಸಾಪ ಕಾರ್ಯದರ್ಶಿ ಭಾಗ್ಯ ನಂಜುಂಡಸ್ವಾಮಿ, ಲೇಖಕಿ ಎಸ್.ಎನ್. ಚಂದ್ರಕಲಾ, ಸಾಹಿತಿಗಳಾದ ಶೃಂಗೇರಿ ಸುಬ್ಬಣ್ಣ, ಬಿ. ಶಿವಶಂಕರ್ ಶೃಂಗೇರಿ, ಕಿಗ್ಗಾ ರಾಘವೇಂದ್ರ, ಗೋವಿಂದಸ್ವಾಮಿ, ಚೈತನ್ಯ ವೆಂಕಿ, ನಾರಾಯಣಸ್ವಾಮಿ, ಬಿ.ಬಿ. ಉಮಾ, ಕೊಪ್ಪ ತಾಲೂಕು ಕಸಾಪ ಅಧ್ಯಕ್ಷ ಜಿ.ಎಸ್. ನಟರಾಜ್, ಹೋಬಳಿ ಕಸಾಪ ಅಧ್ಯಕ್ಷ ರಾ. ವೆಂಕಟೇಶ್, ಶಮೀಮುನ್ನಿಸಾ ಉಪಸ್ಥಿತರಿದ್ದರು.
ರತ್ನಾಕರವರ್ಣಿಗೆ ಆಶ್ರಯ ಕೊಟ್ಟಿದ್ದು ಬಾಳೆಹೊನ್ನೂರು
ಬಾಳೆಹೊನ್ನೂರು: ಕವಿ ರತ್ನಾಕರವರ್ಣಿಯು ಅಮೂಲ್ಯ ಭರತೇಶ ವೈಭವ ಕೃತಿ ರಚಿಸಿದಾಗ ಆತನನ್ನು ಮೂಡಬಿದಿರೆಯಿಂದ ಬಹಿಷ್ಕಾರ ಹಾಕಿದಾಗ ಆತನಿಗೆ ಆಶ್ರಯ ಕೊಟ್ಟ ನೆಲ ಬಾಳೆಹೊನ್ನೂರು ಪಟ್ಟಣವಾಗಿದೆ ಎಂದು ಸಾಹಿತಿ ಮುನಿರಾಜ ರೆಂಜಾಳ ಹೇಳಿದ್ದಾರೆ.
ನರಸಿಂಹರಾಜಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇಲ್ಲಿನ ಕಲಾರಂಗ ಕ್ರೀಡಾಂಗಣದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮಹಾಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಏಳನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ರತ್ನಾಕರವರ್ಣಿ ಜನ್ಮಶತಾಬ್ಧಿ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆತನು ಭರತೇಶ ವೈಭವ ರಚಿಸಿದಾಗ ಅಲ್ಲಿ ಆತನಿಗೆ ಬಹಿಷ್ಕಾರ ಹಾಕಿ ಸೆರೆಮನೆಗೆ ಹಾಕಲಾಗುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ಹೊಂಬುಜ, ಶ್ರವಣಬೆಳಗೊಳಕ್ಕೆ ಆತ ಹೋದಾಗ ಬಾಳೆಹೊನ್ನೂರಿನ ರಂಭಾಪುರಿ ಪೀಠ ಆತನಿಗೆ ನೆನಪಾಗುತ್ತದೆ. ಅಲ್ಲಿ ಆತನ ನೆರೆಮನೆಯ ವೀರಶೈವ ಜನಾಂಗದ ಗಿರಿಜೆ ಇರುವುದರಿಂದ ಇಲ್ಲಿ ಬಂದು ನೆಲೆಸುತ್ತಾನೆ. ಪತ್ರಕರ್ತ ಪ್ರಭಾಕರ ಕಾರಂತ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಬ್ರಹ್ಮಾವರದ ಚಂದ್ರಶೇಖರ ಕೆದಿಲಾಯ, ಕಸಾಪ ಕೋಶಾಧ್ಯಕ್ಷ ಸುಬ್ರಹ್ಮಣ್ಯ, ಜೇಸಿ ಅಧ್ಯಕ್ಷ ಜಗದೀಶ್, ಬಿ.ಎಂ. ಶಿವಣ್ಣಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಟಿ. ಗೋವಿಂದೇಗೌಡ, ಚಕ್ರಪಾಣಿ, ಯಜ್ಞಪುರುಷಭಟ್, ಸುರೇಂದ್ರ ಮಾಸ್ತರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

