ಚಿಕ್ಕಮಗಳೂರು

'ಕಾನೂನು ಅರಿವಿನಿಂದ ಅಪರಾಧ ನಿಯಂತ್ರಣ'

Published On :

ಶೃಂಗೇರಿ: ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇವುಗಳನ್ನು ಕೇವಲ ಪೊಲೀಸ್, ಕಾನೂನು ಕಾಯ್ದೆಗಳಿಂದ ತಡೆಗಟ್ಟಲು ಸಾಧ್ಯವಿಲ್ಲ. ಬದಲಿಗೆ ಜನಸಾಮಾನ್ಯರಲ್ಲಿ ಕಾನೂನು ಕಾಯ್ದೆ ಬಗ್ಗೆ ಅರಿವು ಮೂಡಿಸುವುದರಿಂದ ನಿಯಂತ್ರಿಸಬಹುದಾಗಿದೆ ಎಂದು ನೋಟರಿ ಹಾಗೂ ನ್ಯಾಯವಾದಿ ವಿ.ಆರ್. ನಟಶೇಖರ್ ತಿಳಿಸಿದರು.
ಅವರು ಪಟ್ಟಣದ ಸ.ಪ್ರ.ದ. ಕಾಲೇಜು ಆವರಣದಲ್ಲಿ ಕಲಾ ಸಂಘದ ಆಶ್ರಯದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ಎರಡನೇ ದಿನದ ವಿಚಾರ ಸಂಕಿರಣ ಸಂವಾದ  ಕಾನೂನು ಅರಿವು ನೆರವು ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಾರ್ಗದರ್ಶನದ ಕೊರತೆ: ವಾಹನ ಚಾಲನೆ, ರಸ್ತೆ ಸಂಚಾರ ನಿಯಮ ಪಾಲನೆಯಂತಹ ಮಾಹಿತಿ, ಅರಿವು ನೀಡುವುದರಿಂದ ಸಾಧ್ಯವಾದಷ್ಟು ರಸ್ತೆ ಅಪಘಾತ ನಿಯಂತ್ರಿಸಬಹುದಾಗಿದೆ. ಇತ್ತೀಚಿಗೆ ನಡೆಯುತ್ತಿರುವ ರಸ್ತೆ ಅಪಘಾತ ಪ್ರಕರಣಗಳಲ್ಲಿ ಯುವಕರೇ ಹೆಚ್ಚು ಬಲಿಯಾಗುತ್ತಿದ್ದು, ಇದಕ್ಕೆ ಮಾಹಿತಿ, ಮಾರ್ಗದರ್ಶನದ ಕೊರತೆಯೇ ಕಾರಣ ಎಂದರು.
ಕಾನೂನು ಕಾಯ್ದೆ ಬಗ್ಗೆ ಜನರಲ್ಲಿ ಜನಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದ್ದು, ಇದು ಜನ ಸಾಮಾನ್ಯರಿಗೆ ತಲುಪಬೇಕು. ಕಾನೂನು ಕಾಯ್ದೆ ಸದ್ಬಳಕೆಯಾಗಬೇಕು. ಆದರೆ ಇವುಗಳ ದುರ್ಬಳಕೆಯಾಗಬಾರದು. ಸರ್ಕಾರ ಉಚಿತ ಕಾನೂನು ಅರಿವು ನೆರವು ಮೂಲಕ ದುರ್ಬಲರಿಗೆ, ಬಡವರಿಗೆ ಉಚಿತ ಕಾನೂನು ನೆರವು ನೀಡುತ್ತಿದೆ ಂದರು.
ಕಾಲೇಜು ಪ್ರಾಚಾರ್ಯ ಪ್ರೊ. ಕೆ.ಜಿ. ಸಿದ್ದಲಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗದ ಆಶಾಲತಾ, ಕಲಾಸಂಘದ ಅಧ್ಯಕ್ಷ ಪ್ರತಾಪ್, ಲೇಖಕ ಸೂರ್ಗೋಡು ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳೊಡನೆ ಪ್ರಶ್ನೋತ್ತರ ಸಂವಾದ ಕಾರ್ಯಕ್ರಮ ನಡೆಯಿತು. ದರ್ಶಿನಿ, ಆಕಾಶ ದೀಪ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.