ಕಾರ್ಮಿಕರ ಸೌಲಭ್ಯ, ನಿಯಮಗಳ ಅರಿವು ಅಗತ್ಯ
ಬೀರೂರು: ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಸಾಮಾಜಿಕ ನ್ಯಾಯದಡಿಯಲ್ಲಿ ದೊರಕುವ ಕಾನೂನಿನ ಸೌಲಭ್ಯಗಳು ಮತ್ತು ಪಾಲಿಸಬೇಕಾದ ನಿಯಮಗಳ ಕುರಿತ ಅರಿವು ಮೂಡಿಸುವ ಕಾರ್ಯಕ್ರಮ ಇಲ್ಲಿನ ಮಾರ್ಗದ ಮಲ್ಲಪ್ಪ ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಹಾಗೂ ಜೆ.ಎಮ್.ಎಫ್.ಸಿ. ಹಿರಿಯ ಸಿವಿಲ್ ನ್ಯಾಯಾಧೀಶ ರುಢೋಲ್ಫ್ ಪಿರೇರಾ ಮಾತನಾಡಿ, ದೇಶದಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇದಕ್ಕಾಗಿ ಸಾಧ್ಯವಾದ ಎಲ್ಲಾ ಕಾನೂನುಗಳನ್ನು ಕಾಲಕಾಲಕ್ಕೆ ತಿದ್ದುಪಡಿಮಾಡಿಕೊಂಡು ಬರುವುದರ ಮೂಲಕ ಬಡ ವರ್ಗದವರ ಹಿತ ಸಂರಕ್ಷಣೆಗೆ ಕಾಳಜಿ ವಹಿಸಿದೆ ಎಂಬುದನ್ನು ತಿಳಿಸಿ ಕಟ್ಟಡ ಕಾರ್ಮಿಕರು ದೇಶದ ಪ್ರಗತಿ ಹಾಗೂ ಅಭ್ಯುದಯಕ್ಕಾಗಿ
ಹೆಚ್ಚಿನ ಸಹಕಾರ ನೀಡುತ್ತಿದ್ದು ಅಸಂಘಟಿತ ವಲಯದಲ್ಲಿ ಬರುವ ನಿಮ್ಮ ಭವಿಷ್ಯಕ್ಕಾಗಿ ತಂದಿರುವ ಕಾನೂನಿನ ಬಗ್ಗೆ ಅರಿತು ಹೆಚ್ಚಿನ ಪ್ರಯೋಜನ ಪಡೆಯಬೇಕೆಂದರು.
ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ಸಿ. ಶ್ರೀನಿವಾಸಗೌಡ ಮಾತನಾಡಿ, ಕಾನೂನಿನ ಅರಿವಿನಿಂದ ಸಮಸ್ಯೆಗಳ ಪರಿಹಾರ ಸುಲಭ ಸಾಧ್ಯ. ಕಾನೂನಿನ ಮೂಲಕ ಪಡೆಯಬಹುದಾದ ಹಲವು ಸೌಲಭ್ಯಗಳು ಹಾಗೂ ಜನನ ಮರಣ ಪ್ರಮಾಣ ಪತ್ರ ಪಡೆಯುವ ಬಗೆ ಕಾಲಮಿತಿ, ಮೋಟಾರು ವಾಹನ ಕಾಯ್ದೆ, ಜೀವನಾಂಶ ಕುರಿತಂತೆ ಮಾಹಿತಿ ನೀಡಿದರು.
ವಕೀಲ ತಾಲೂಕು ಕಾನೂನು ಸೇವಾ ಸಮಿತಿ ಉಪಾಧ್ಯಕ್ಷ ಕೆ.ಎನ್. ಬೊಮ್ಮಣ್ಣ ಮಾತನಾಡಿದರು. ವಕೀಲ ತಿಪ್ಪೇಶ್ ಕಾರ್ಮಿಕ ಕಾನೂನುಗಳ ಕುರಿತಂತೆ ಪ್ರಧಾನ ಉಪನ್ಯಾಸ ನೀಡಿ, ಅಸಂಘಟಿತ ವಲಯದ ಕಾರ್ಮಿಕರು ಸಂಘದ ಅಡಿ ಬಂದಾಗ ಹೆಚ್ಚಿನ ಗೌರವ ಹಾಗೂ ಸೌಲಭ್ಯ ದೊರಕುತ್ತದೆ. ಕಾರ್ಮಿಕರಿಗಾಗಿ ಸಾಮಾಜಿಕ ಭದ್ರತಾ ಮಂಡಳಿ ರಚನೆಯಾಗಿದ್ದು, ಕಾರ್ಮಿಕರು ಸದಸ್ಯತ್ವದ ಅವಧಿಯನ್ನು ಅವಲಂಭಿಸಿ ಸಿಗುವ ಸವಲತ್ತುಗಳ ಕುರಿತಂತೆ ಸಮಗ್ರ ಮಾಹಿತಿ ನೀಡಿದರು.
ಆದಿಶಕ್ತಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ತಿಮ್ಮರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಮೇಶ್ ಸ್ವಾಗತಿಸಿ. ರಮೇಶ್ ನೀರೂಪಿಸಿ, ಜಯಣ್ಣ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

