ನಾಳೆ ಮಡಬೂರಲ್ಲಿ ಸಾಮೂಹಿಕ ವಿವಾಹ
ನರಸಿಂಹರಾಜಪುರ: ಮಡಬೂರಿನ ದಾನಿವಾಸ ದುರ್ಗಾಂಬಾ ದೇವಸ್ಥಾನದಲ್ಲಿ ಮಾ.14 ರ ಶುಕ್ರವಾರ ಬೆಳಗ್ಗೆ 9.30 ಗಂಟೆಗೆ ಸಾಮೂಹಿಕ ವಿವಾಹ ಹಾಗೂ ಮಧ್ಯಾಹ್ನ 12.30 ಕ್ಕೆ ಅಮ್ಮನವವರ ರಥೋತ್ಸವ ನಡೆಯಲಿದೆ.
ಮಾ.15ರ ಶನಿವಾರ ಸಾಮೂಹಿಕ ಸತ್ಯನಾರಾಯಣ ವ್ರತ, ರಾಜಬೀದಿಯಲ್ಲಿ ಅಮ್ಮನರ ಪಲ್ಲಕ್ಕಿ ಮೆರವಣಿಗೆ ಮತ್ತು ರಾತ್ರಿ ಕೆಂಡಾರ್ಚನೆ ನಡೆಯಲಿದೆ. ಮಾ.16 ರ ಭಾನುವಾರ ಅಮ್ಮನವರಿಗೆ ವಿಶೇಷ ಪೂಜೆ ಹಾಗೂ ರಾತ್ರಿ ಪಂಜರವಳ್ಳಿ ಕೋಲ ನಡೆಯಲಿದೆ.
ಪಕ್ಷಿ ಸಂಕುಲ ರಕ್ಷಣೆ
ಅವಶ್ಯ: ನಾಗೇಶರಾವ್
ಶೃಂಗೇರಿ: ಪಕ್ಷಿ ಸಂಕುಲಗಳು ಇತ್ತೀಚಿನ ದಿನಗಳಲ್ಲಿ ವಿನಾಶದ ಅಂಚಿನಲ್ಲಿವೆ. ಪ್ರಕೃತಿ ಅಸಮತೋಲನ, ಮಾನವ ದುರಾಸೆಯಿಂದ ಅರಣ್ಯಗಳ ನಾಶ ಇತ್ಯಾದಿ ಕಾರಣಗಳ ಪಕ್ಷಿಗಳ ಜೀವಕ್ಕೆ ಕುತ್ತು ತಂದಿವೆ. ಪಕ್ಷಿಗಳನ್ನು ಉಳಿಸಿ ಸಂರಕ್ಷಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ ಎಂದು ಅಗಲಿ ನಾಗೇಶ್ ರಾವ್ ಅಬಿಪ್ರಾಯಪಟ್ಟರು.
ಪಟ್ಟಣದ ಶ್ರೀಜೆಸಿಬಿಎಂ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಜಿಲ್ಲಾಮಟ್ಟದ ಎನ್ಎಸ್ಎಸ್ ಶಿಬಿರದಲ್ಲಿ ಆಯೋಜಿಸಿ ಪಕ್ಷಿಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಡೈಕ್ಲೋಫಿನಾಕ್ ಸೋಡಿಯಂ ಎಂಬ ನೋವು ನಿವಾರಕ ಔಷಧಿಯು ರಣಹದ್ದುಗಳ ಸಂತತಿಯ ವಿನಾಶಕ್ಕೆ ಕಾರಣವಾಯಿತು ಎಂದರು.
ಕಾರ್ಯಕ್ರಮದಲ್ಲಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ರಮೇಶ್, ರೇಖಾ ಬಾಲಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

