ಚಿಕ್ಕಮಗಳೂರು

ರಸ್ತೆ ಸುಗಮಗೊಳಿಸಿದ ಗುತ್ತಿಗೆದಾರರು

Published On :

ನರಸಿಂಹರಾಜಪುರ: ಬಕ್ರಿಹಳ್ಳ ಕಡಹಿನಬೈಲು ಏತ ನೀರಾವರಿ ಯೋಜನೆಗಾಗಿ ರಸ್ತೆ ಪಕ್ಕದಲ್ಲಿ ತೆಗೆದ ಕಾಲುವೆ ಮಣ್ಣನ್ನು ರಸ್ತೆಗೆ ಹಾಕಿರುವ ಬಗ್ಗೆ ಕನ್ನಡಪ್ರಭ ಮಾಡಿದ ವರದಿಗೆ 24 ಗಂಟೆಗಳಲ್ಲೇ ಸ್ಪಂದಿಸಿದ ಗುತ್ತಿಗೆದಾರರು ರಸ್ತೆಗೆ ಹಾಕಿರುವ ಮಣ್ಣನ್ನು ತೆಗೆದು ವಾಹನ ಸಂಚಾರಕ್ಕೆ ಸುಗಮ ಹಾದಿ ಮಾಡಿಕೊಟ್ಟಿದ್ದಾರೆ.
ಬಕ್ರಿಹಳ್ಳ ಕಡಹಿನಬೈಲು ಏತ ನೀರಾವರಿ ಯೋಜನೆಗೆ ಸೂಸಲವಾನಿ ಹಳ್ಳದಿಂದ ನೀರು ತರಲು ರಸ್ತೆ ಪಕ್ಕದಲ್ಲಿ ಕಾಲುವೆ ನಿರ್ಮಿಸಿ, ಕಾಲುವೆಯಿಂದ ತೆಗೆದ ಮಣ್ಣನ್ನು ರಸ್ತೆಯಲ್ಲೇ ಹಾಕಿರುವ ಪರಿಣಾಮ ಸೂಸಲವಾನಿ ಮತ್ತು ಗೇರ್ ಬೈಲ್ ಭಾಗದ ಗ್ರಾಮಸ್ಥರಿಗೆ ರಸ್ತೆಯಲ್ಲಿ ಸುಗಮವಾಗಿ ಓಡಾಡಲು ತೊಂದರೆಯಾಗುತ್ತಿರುವ  ಬಗ್ಗೆ  ಮಾರ್ಚ್ 12 ರ ಕನ್ನಡಪ್ರಭದಲ್ಲಿ ಪೈಪ್ ಲೈನ್‌ಗೆ ತೆಗೆದ ಮಣ್ಣು ರಸ್ತೆಗೆ ಎಂದು ವರದಿ ಮಾಡಿತ್ತು. ಮಾ. 12 ರ ರ ರಾತ್ರಿಯೇ ರಸ್ತೆಯಲ್ಲಿ ಹಾಕಿದ್ದ ಎಲ್ಲಾ ಮಣ್ಣನ್ನು ತೆಗೆದು ಕಾಲುವೆಗೆ ತುಂಬಿಸಿ ವಾಹನ ಸಂಚಾರಕ್ಕೆ ಸುಗಮ ಮಾಡಿಕೊಡಲಾಯಿತು. ಈ ಬಗ್ಗೆ ಸೂಸಲವಾನಿ ಗ್ರಾಮದ ಮುಖಂಡ  ಬಿನು ಮತ್ತಿತರ ಗ್ರಾಮಸ್ಥರು ಕನ್ನಡಪ್ರಭ ಪತ್ರಿಕೆಗೆ ಮತ್ತು ಗುತ್ತಿಗೆದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


ಬೀರೂರು ಪುರಸಭೆ ಅಧ್ಯಕ್ಷೆ ಗೀತಾ
ಬೀರೂರು: ಪುರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಗೀತಾ ಹೇಮಂತ್, ಉಪಾಧ್ಯಕ್ಷರಾಗಿ ಲೋಕೇಶಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 11ಸ್ಥಾನ ಗಳಿಸಿದ್ದು, ಜೆಡಿಎಸ್ ಇಬ್ಬರು ಹಾಗೂ ಪಕ್ಷೇತರ ಸದಸ್ಯರೊಬ್ಬರ ಬೆಂಬಲದೊಂದಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಗುರುವಾರ ನಡೆಯಿತು.
ಚುನಾವಣಾಧಿಕಾರಿ ತಿಮ್ಮಾಬೋವಿ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕಟಿಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಗೀತಾ ಹೇಮಂತ್ ಮಾತನಾಡಿ, ಪಟ್ಟಣದ ಎಲ್ಲಾ ನಾಗರಿಕರ ಹಾಗೂ ಪುರಸಭಾ ಸದಸ್ಯರ, ಅಧಿಕಾರಿಗಳ ಸಲಹೆ ಸಹಕಾರದಿಂದ ಪಟ್ಟಣದ ಮೂಲ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವುದರ ಜತೆ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಮಾತನಾಡಿ, ಪುರಸಭಾ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಕಾಳಜಿ ವಹಿಸಬೇಕು, ಕುಡಿಯುವ ನೀರು, ಸ್ವಚ್ಛತೆ ಕಡೆಗೆ ಗಮನಹರಿಸಿ ಬೇಸಿಗೆ ಸಮೀಪಿಸುವುದರಿಂದ ತೊಂದರೆಯಾಗದಂತೆ ನಿಗಾ ವಹಿಸಬೇಕು.
ಭದ್ರಾ ಕುಡಿಯುವ ನೀರು ಪೂರೈಕೆಯಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚು ಕಾಳಜಿ ವಹಿಸಿದೆ ಎಂಬುದನ್ನು ತಿಳಿಸಿ, ಶಾಸಕ ದತ್ತಾ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದು, ಎಸ್.ಆರ್. ಲಕ್ಷ್ಮಯ್ಯ ಆಶ್ರಯ ಬಡಾವಣೆ ನಿವೇಶನ ಮುಂದಿನ ಜಾಗ 5 ಎಕರೆ ತಾಯಿ- ಮಗು ಆಸ್ಪತ್ರೆಗೆ ಮೀಸಲಿಟ್ಟು ಇನ್ನುಳಿದ 10 ಎಕರೆ ಜಾಗವನ್ನು ಶೀಘ್ರವೇ ಅರ್ಹ ಫಲಾನುಭವಿಗಳಿಗೆ ವಿತರಿಸುವಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ವಿನಾಯಕ್, ಕಡೂರು ಬ್ಲಾಕ್ ಅಧ್ಯಕ್ಷ ಚಂದ್ರಪ್ಪ, ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಮಹೇಶ್ ಒಡೆಯರ್, ವಕ್ತಾರ ಆನಂದ್, ಚಂದ್ರಮೌಳಿ, ಮಾಜಿ ಪುರಸಭಾಧ್ಯಕ್ಷರಾದ ಜಯರಾಂ, ಯತೀಶ್ ಹಾಗೂ ಪುರಸಭಾ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.