ಮತದಾನದ ಹಕ್ಕು ಸದುಪಯೋಗವಾಗಲಿ
ತರೀಕೆರೆ: ಮತದಾನದ ಹಕ್ಕು ಸದುಪಯೋಗವಾಗುವುದರೊಂದಿಗೆ ಸಂವಿಧಾನವನ್ನು ಬಲಗೊಳಿಸಲು ಪ್ರತಿಯೊಬ್ಬರ ಪ್ರಯತ್ನವೂ ಅತೀ ಅಗತ್ಯ ಎಂದು ಕಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಿ. ಜಯಲಕ್ಷ್ಮಿ ತಿಳಿಸಿದರು.
ಅವರು ಸ.ಪ್ರ.ದ. ಕಾಲೇಜಿನ ರಾಜ್ಯಶಾಸ್ತ್ರ ವೇದಿಕೆ, ರೋಟರಿ ಸಂಸ್ಥೆ ವತಿಯಿಂದ ರೋಟರಿ ಕ್ಲಬ್ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕಾಲೇಜು ಪ್ರಾಧ್ಯಾಪಕ ಎನ್.ಎಸ್. ಪಂಕಜ, ಡಾ.ಎ.ಬಿ. ಜಗದೀಶ್, ಮತ್ತು ರೇಷ್ಮಾ ಅವರು ಸಿದ್ಧಗೊಳಿಸಿದ ದಿ ಕಾನ್ಸ್ಟಿಟ್ಯೂಷನ್ ಆಫ್ ಇಂಡಿಯಾ ಪುಸ್ತಕ ಬಿಡುಗಡೆ ಸಮಾರಂಭ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಚಿಕ್ಕ ಪ್ರಯತ್ನ: ಪುಸ್ತಕದ ಕರ್ತೃಲೇಖಕ, ಪ್ರಾಧ್ಯಾಪಕ ಡಾ. ಜಗದೀಶ್ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗ, ವಿದ್ಯಾರ್ಥಿಗಳನ್ನು ಹೇಗೆ ತಯಾರು ಮಾಡಬೇಕು, ಕಾಲೇಜಿನಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಮಾಡಬೇಕು ಎಂಬುದರ ಬಗ್ಗೆ ಈ ಪುಸ್ತಕ ಒಂದು ಚಿಕ್ಕ ಪ್ರಯತ್ನ, ಪಠ್ಯಾಧಾರಿತ ದೃಷ್ಟಿಯಿಂದ ಬರೆದಿದ್ದಲ್ಲ, ಅದು ಎಲ್ಲರಿಗೂ ಉಪಯುಕ್ತ ಗ್ರಂಥವಾಗಲಿ ಎಂಬ ಆಶಯದಿಂದ ಪುಸ್ತಕವನ್ನು ಸಿದ್ಧಗೊಳಿಸಲಾಗಿದೆ ಎಂದು ತಿಳಿಸಿದರು.
ಎಸ್ಜೆಎಂ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಪ್ರೊ. ಕೆ.ಆರ್. ವಿರೇಶ್ ಮತದಾನ ಮತ್ತು ನಾಗರಿಕರ ಹಕ್ಕು ಕುರಿತು ಮಾತನಾಡಿ, ಇದು ಒಂದು ಉತ್ತಮ ಕಾರ್ಯಕ್ರಮ. ಭಾರತೀಯ ಸಂವಿಧಾನ ಪುಸ್ತಕ ಉತ್ತಮವಾಗಿ ಮೂಡಿಬಂದಿದೆ ಎಂದರು.
ಲೇಖಕರಾದ ಎನ್.ಎಸ್. ಪಂಕಜ ಅವರು ಮಾತನಾಡಿದರು. ರೋಟರಿ ಸಹಾಯಕ ರಾಜ್ಯಪಾಲ ಡಾ.ಜಿ.ಸಿ. ಶರತ್, ದಿ ಕಾನ್ಸ್ಟಿಟ್ಯೂಷನ್ ಆಫ್ ಇಂಡಿಯಾ ಪುಸ್ತಕ ಬಿಡುಗಡೆ ನೆರವೇರಿಸಿದರು.
ರೇಷ್ಮ, ರೋಟರಿ ಕ್ಲಬ್ ಆಧ್ಯಕ್ಷ ಕೆ.ಜಿ. ತಿಪ್ಪೇಶ್, ಗಂಗರಾಜ್, ಕಾಲೇಜು ಪ್ರಾಧ್ಯಾಪಕರು ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

