ಚಿಕ್ಕಮಗಳೂರು

ಧರ್ಮದ ಹೆಸರಲ್ಲಿ ಚುನಾವಣೆ ಅಸಾಧ್ಯ

Published On :

ಕಡೂರು: ಧರ್ಮದ ಆಧಾರದ ಮೇಲೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಅನಕ್ಷರತೆ ಮತ್ತು ಬಡತನವು ದೇಶದ ಶತ್ರುಗಳಾಗಿದ್ದು ಇವನ್ನು ಹೊಡೆದೋಡಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂಬುದನ್ನು ಈಗಾಗಾಲೇ ಯುಪಿಎ ಸರ್ಕಾರ ತೋರಿಸಿದ್ದು ಯಾವ ಮೋದಿ ಅಲೆಯ ಆಟವು ನಡೆಯುವುದಿಲ್ಲ ಎಂದು ವಿಧಾನ ಪರಿಷತ್ತಿನ ಮಾಜಿ ವಿರೋಧ ಪಕ್ಷದ  ನಾಯಕಿ ಡಾ. ಮೋಟಮ್ಮ ಹೇಳಿದರು.
ಅವರು ಹಾಸನ ಕ್ಷೇತ್ರದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಡೂರು ಪಟ್ಟಣದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆಯಲ್ಲಿ ಭಾಗವಹಿಸಿ,   ಬನಶಂಕರಿ ಸಮುದಾಯಭವನದಲ್ಲಿ ನಡೆದ ಭಾರತ ನಿರ್ಮಾಣ ಯಾತ್ರೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ದತ್ತಪೀಠದಂತಹ ಅಸ್ತ್ರವನ್ನು ರಾಜಕೀಯ ಲಾಭಕ್ಕಾಗಿ ಮಾಡಿಕೊಂಡ ಬಿಜೆಪಿಯು ಉಗ್ರಗಾಮಿಗಳ ರೀತಿ ವರ್ತಿಸುತ್ತಾ ರಾಜಕಾರಣ ಮಾಡಲು ಹೊರಟಲ್ಲಿ ಗೆಲುವು ಸಾದ್ಯವಿಲ್ಲ. ಗೋಧ್ರಾ ಹತ್ಯಾಕಾಂಡವನ್ನು ಜನರು ನೆನೆಪಿಸಿಕೊಂಡು ಬಿಜೆಪಿಯ ಕೋಮವಾದಿತನಕ್ಕೆ ಕಾಂಗ್ರೆಸನ್ನು ಬೆಂಬಲಿಸಬೇಕು. ಈ ನಿಟ್ಟಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರಿಗೆ ಸಿಂಹ ಗರ್ಜನೆ ಹಾಕಲು ಕಾಂಗ್ರೆಸ್ ಎ.ಮಂಜುರಂತಹ ಸಿಂಹವನ್ನು ಕಣಕ್ಕಿಳಿಸಿದ್ದು ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಸಾಮೂಹಿಕ ಹೋರಾಟ ಮಾಡಿ ಮಂಜುರವರನ್ನು ಗೆಲ್ಲಿಸಬೇಕು ಎಂದರು.
ಮನವಿ: ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ ಮಾತನಾಡಿ, ಕಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತನೂ ಮಂಜುರವರ ಗೆಲುವಿಗೆ ಶತಾಯಗತಾಯ ಹೋರಾಟ ಮಾಡಬೇಕು ಎಂದರು.
ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಮಾತನಾಡಿ, ದೇವೇಗೌಡರಿಗೆ ಅಭಿವೃದ್ದಿ ಎಂದರೆ ಕೇವಲ ಹಾಸನದ ಹೊಳೆನರಸೀಪುರವೇ ಹೊರತು ಬೇರೆ ಕ್ಷೇತ್ರದ ಅಭಿವೃದ್ದಿಯ ಚಿಂತನೆಯು ಮುಖ್ಯವಲ್ಲಎಂದರು.
ಸಭೆಯಲ್ಲಿ ಹಿರಿಯ ಮುಖಂಡರಾದ ನಂಜೇಗೌಡ, ಜವರೇಗೌಡ, ವಿಧಾನಪರಿಷತ್ತಿನ ಮಾಜಿ ಸದಸ್ಯ ಎನ್.ಎಸ್. ಆನಂದ್,ಜವರೇಗೌಡ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಕಡೂರು ಸಿ.ನಂಜಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್, ರಾಜ್ಯ ಯುವ ಕಾರ್ಯದರ್ಶಿ ಕೆ.ಎಸ್.ಆನಂದ್, ಮುಖಂಡರಾದ ಎಂ.ಹೆಚ್. ಚಂದ್ರಪ್ಪ, ಕೆ.ಎಂ. ವಿನಾಯಕ, ಕೆ.ಜಿ. ಶ್ರೀನಿವಾಸಮೂರ್ತಿ,ಸರಸ್ವತಿ ಕೃಷ್ಣಮೂರ್ತಿ, ಜಯಣ್ಮ, ರೇಣುಕಾರಾಧ್ಯ, ಸಾವಿತ್ರಿ ಗಂಗಪ್ಪ, ಬಾಸೂರು ಚಂದ್ರಮೌಳಿ, ಬಳ್ಳೇಕೆರೆ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.