ಚಿಕ್ಕಮಗಳೂರು

'ಮೋದಿ ಅಲೆಗೆ ಕಾಂಗ್ರೆಸ್ ಮುಳುಗುವ ಹಡಗು'

Published On :

ಕ.ಪ್ರ.ವಾರ್ತೆ, ಕೊಪ್ಪ, ಮಾ.21
ಲೋಕಸಭಾ ಚುನಾವಣೆ ಸಾಗರದಲ್ಲಿ ಮೋದಿ ಎಂಬ ದೊಡ್ಡ ಅಲೆಗೆ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗಾಗಿದ್ದು, ಅದರಲ್ಲಿರುವ ಘಟಾನುಘಟಿ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್. ಜೀವರಾಜ್ ವ್ಯಂಗ್ಯವಾಡಿದರು.
ಶುಕ್ರವಾರ ಪಟ್ಟಣದ ಪುರಭವನದ ಹೊರಾಂಗಣದಲ್ಲಿ ಹಮ್ಮಿಕೊಂಡಿದ್ದ ಶೃಂಗೇರಿ ಕ್ಷೇತ್ರಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ಸೋಲುವ ವಿಶ್ವಾಸ: ಕಾಂಗ್ರೆಸ್ ಪಕ್ಷದ ಚಿದಂಬರಂ ಸಹಿತ, ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕೂಡಿ ಕ್ಷೇತ್ರದಿಂದ 74 ಸಾವಿರ ಬಹುಮತ ಪಡೆದ ಪ್ರಕಾಶ್ ಹುಕ್ಕೇರಿಯವರೂ ಸಹಾ ಲೋಕಸಭಾ ಚುನಾವಣೆಗೆ ಟಿಕೇಟ್ ಬೇಡ ಎಂದು ಹಿಂದೆ ಸರಿಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದರೆ ಕಾಂಗ್ರೆಸ್ ಸೋಲುವ ಬಗ್ಗೆ ವಿಶ್ವಾಸ ಎಷ್ಟಿದೆ ಎಂದು ತಿಳಿಯುತ್ತದೆ ಎಂದರು.
ಕಳೆದ 10 ವರ್ಷದಿಂದ ಅರಾಜಕತೆ ಮತ್ತು ಭ್ರಷ್ಟಾಚಾರ ಆಡಳಿತದಿಂದ ಬೆಲೆ ಏರಿಸಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಕಾಂಗ್ರೆಸ್ ವಿರುದ್ಧ ದೇಶದ ಮತದರಾರು ತಿರುಗಿ ನಿಂತ ಪರಿಣಾಮ ಯುದ್ದವನ್ನು ಸೋಲುವ ಸಮಯದಲ್ಲಿ ಸೈನಿಕರು ಶಸ್ತ್ರಪರಿತ್ಯಾಗ ಮಾಡುತ್ತರೋ, ಅದೇ ರೀತಿ ಕಾಂಗ್ರೆಸ್ ಮುಖಂಡರು ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕಾರಂದ್ಲಾಜೆ ಸಭೆ ಉದ್ದೇಶಿ ಮಾತನಾಡಿದರು.
ಮೆರವಣಿಗೆ: ಸಭೆಯ ಆರಂಭಕ್ಕೂ ಮುನ್ನ ಪಟ್ಟಣದ ಮಾರ್ಕೆಟ್ ರಸ್ತೆ ದುರ್ಗಾ-ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಟ್ಟಣದಲ್ಲಿ ಕಾಂಗ್ರೆಸ್ ಹಾಠವೋ ದೇಶ ಬಚಾವೋ ಎಂಬ ಘೋಷಣೆ ಹಾಕುತ್ತಾ ಬೃಹತ್ ಮೆರವಣಿಗೆ ನಡೆಯಿತು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎನ್. ರಾಮಸ್ವಾಮಿ, ಮುಖಂಡ ಕುಕ್ಕಡಿಗೆ ರವೀಂದ್ರ, ಸುಚಿತಾನರೇಂದ್ರ, ಅನ್ನಪೂರ್ಣ ಚನ್ನಕೇಶವ, ಶೃಂಗೇರಿ ಶಿವಣ್ಣ, ಬಿ.ಎನ್. ಭಾಸ್ಕರ್, ವೆನಿಲ್ಲಾ ಭಾಸ್ಕರ್, ಪದ್ಮಾವತಿ ರಮೇಶ್ ಮೊದಲಾದವರು ಪಾಲ್ಗೊಂಡಿದ್ದರು.
ಬಂಧನ: ಜಾಥಕ್ಕೆ ರಕ್ಷಣೆ ನೀಡುತ್ತಿದ್ದ  ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ನಡಿಸಿ ಅವ್ಯಚ್ಯಾಶಬ್ದಗಳಿಂದ ನಿಂಧಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
 ಮಾರ್ಕೇಟ್ ರಸ್ತೆಯ ಬಳಿಯಲ್ಲಿ ಗುಣವಂತೆ ರವಿ ಎಂಬುವರು ಪೊಲೀಸರ ಕರ್ತವ್ಯ ನಿರ್ವಹಿಸುವುದಕ್ಕೆ ಅಡ್ಡಿಪಡಿಸಿ ಅವರುಗಳನ್ನು ಅವ್ಯಾಚ್ಯಾ ಶಬದ್ದಗಳಿಂದ ನಿಂಧಿಸಿ ಪೊಲೀಸ್ ಅಧಿಕಾರಿಗಳಿಗೆ ಹಲ್ಲೆ ನಡೆಸಿದ್ದರಿಂದ ಸ್ಥಳದಲ್ಲಿ ಆತನನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.