ಚಿಕ್ಕಮಗಳೂರು

ಅಧ್ಯಕ್ಷರಾಗಿ ರವಿ ಅಧಿಕಾರ ಸ್ವೀಕಾರ

Published On :

ಕಡೂರು: ಇಲ್ಲಿನ ಕಡೂರು ಟೌನ್ ಕೋಆಪರೇಟೀವ್ ಸೊಸೈಟಿಯನ್ನು ಪಟ್ಟಣದ ಜನ ಸಾಮಾನ್ಯರ ಬ್ಯಾಂಕಾಗಿ ಪರಿವರ್ತಿಸಿ ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡಲಾಗುವುದು ಎಂದು ಸೊಸೈಟಿಯ ನೂತನ ಅಧ್ಯಕ್ಷ ಕೆ.ಎಚ್.ರವಿ ಹೇಳಿದರು.
ಬಹಳಷ್ಟು ಕುತೂಹಲ ಕೆರಳಿಸಿ ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ ನಡೆದ ಕಡೂರು ಟೌನ್ ಕೋಆಪರೇಟೀವ್ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಉತ್ತಮ ಸೇವೆಯ ಭರವಸೆ:  115 ವರ್ಷಗಳ ಇತಿಹಾಸದ ಈ ಕೋಆಪರೇಟೀವ್ ಸೊಸೈಟಿಯನ್ನು ಸಹಕಾರಿ ನಿಯಮಾನುಸಾರ ಪರಿವರ್ತನೆ ಸೇರಿದಂತೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಗೆ ಸಾಲ ಮರುಪಾವತಿಸುವಂತೆ ಮನವೊಲಿಸಲಾಗುವುದು. ಎಲ್ಲ ನಿರ್ದೇಶಕರ ಸಲಹೆ ಸಹಕಾರ ಪಡೆದು ಸೊಸೈಟಿಯ ಅಭಿವೃದ್ಧಿಗೆ ತಮಗೆ ಸಿಕ್ಕಿರುವ ಕಾಲಾವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಜನರಿಗೆ ಉತ್ತಮ ಸೇವೆ ಸಲ್ಲಿಸಲಾಗುವುದು ಎಂದರು.
ಉಪಾಧ್ಯಕ್ಷ ವಿ.ಎಂ.ಪ್ರಸಾದ್ ಮಾತನಾಡಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸಹಕರಿಸಿದ ಮತದಾರರು ಹಾಗೂ ಸೊಸೈಟಿಯ ನಿರ್ದೇಶಕರು ಮತ್ತು ಚುನಾವಣೆ ನಡೆಸಿಕೊಟ್ಟ ಸಹಾಯ ನಿಬಂಧಕರಿಗೆ ಕೃತಜ್ಞತೆಗಳು ಎಂದರು.
ನಿರ್ದೇಶಕರ ಪರವಾಗಿ ನಿರ್ದೇಶಕ ಸೋಮೇಶ್ ಮಾತನಾಡಿದರು.  ನಿರ್ದೇಶಕರಾದ ಕೆ.ಜಿ.ಶ್ರೀನಿವಾಸಮೂರ್ತಿ, ಕೃಷ್ಣಮೂರ್ತಿಜೋಷಿ, ಟಿ.ಆರ್. ಸುರೇಶ್, ಕೆ.ಕೆ. ಮಂಜು, ಕೆ.ಜಿ. ಲೋಕೇಶ್ವರ್,ಬಿ.ಎಸ್. ಅನಿತಾ, ಕಲ್ಪನ ಲವ, ಚನ್ನಕೇಶವ, ರವಿ, ಸುರೇಶ್, ಸೊಸೈಟಿ ಮಂಜುನಾಥ್, ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.