ಚಿಕ್ಕಮಗಳೂರು

ವಿದ್ಯುತ್ ಪರಿವರ್ತಕಕ್ಕೆ ನೂತನ ಕಂಬ ಅಳವಡಿಸಲು ಒತ್ತಾಯ

Published On :

ತರೀಕೆರೆ: ಸಮೀಪದ ಗೊಣಗಿಲಕಟ್ಟೆಯ ಮುಖ್ಯ ದ್ವಾರದ ರಸ್ತೆ ಬಳಿ ಇರುವ ವಿದ್ಯುತ್ ಪರಿವರ್ತಕವಿರುವ ಎರಡು ಕಂಬಗಳೂ  ಸಂಪೂರ್ಣ ಹಾಳಾಗಿದ್ದು, ಬೇರೆ ಕಂಬ ಅಳವಡಿಸುವಂತೆ ತಾಪಂ ಮಾಜಿ ಸದಸ್ಯ ಎಸ್.ಎ. ಕೃಷ್ಣಪ್ಪ ಮೆಸ್ಕಾಂ ಅಧಿಕಾರಿಗಳನ್ನು  ಒತ್ತಾಯಿಸಿದ್ದಾರೆ.
ಮುಖ್ಯರಸ್ತೆಯಲ್ಲಿರುವ ಈ ವಿದ್ಯುತ್ ಪರಿವರ್ತಕದ ಎರಡೂ ಕಂಬಗಳು ತುಂಬಾ ಹಳೆಯದಾಗಿದ್ದು, ಕಂಬದ ಸೀಮೆಂಟು ಉದುರಿಹೋಗಿದೆ. ಕಬ್ಬಿಣದ ತಂತಿಗಳು ಮಾತ್ರ ಉಳಿದಿದ್ದು, ವಿದ್ಯುತ್ ಪರಿವರ್ತಕಕ್ಕೆ ಇವೇ ಆಸರೆಯಾಗಿದೆ. ಯಾವ ಕ್ಷಣದಲ್ಲಾದರೂ ಇದು ಬೀಳುವ ಸಂಭವ ಇರುತ್ತದೆ ಹಾಗೂ ತೊಟ್ಟಿಗೆ ನೀರು ಕುಡಿಯಲು ಬರುವ ದನಗಳು ಈ ಕಂಬಗಳನ್ನು ಉಜ್ಜಿದರೂ ಬೀಳುವ ಸಂಭವವಿರುವುದರಿಂದ ಮೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ವಿದ್ಯುತ್ ಪರಿವರ್ತಕಕ್ಕೆ ನೂತನ ಕಂಬ ಅಳವಡಿಸುವ ಮೂಲಕ ಮುಂದಾಗಬಹುದಾದ ಅಪಘಾತ ತಪ್ಪಿಸಲು ಮುಂದಾಗಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.