'ನರೇಂದ್ರ ಮೋದಿ ಅಲೆ ಗೆಲವಿಗೆ ಪೂರಕ'
ಕಡೂರು: ದೇಶದ ಅಭಿವೃದ್ಧಿಗಾಗಿ ಮೋದಿಯವರು 60 ತಿಂಗಳ ಕಾಲಾವಕಾಶ ಕೇಳಿದ್ದು, ಮತದಾರರು ತಮನ್ನೂ ಕೂಡ ಆಯ್ಕೆಮಾಡಿ ಅವಕಾಶ ನೀಡಿದರೆ ಹಾಸನ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಚಿತ್ರಣ ಬದಲಾಯಿಸಿ ತೋರಿಸುತ್ತೇನೆ ಎಂದು ಬಿಜೆಪಿ ಹಾಸನ ಕ್ಷೇತ್ರದ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಹೇಳಿದರು.
ಅವರು ಕಡೂರು ಪಟ್ಟಣದಲ್ಲಿ ಮತಯಾಚನೆ ನಡೆಸಿದ ನಂತರ ಬಿಜೆಪಿ ಮುಖಂಡ ಬೆಳ್ಳಿಪ್ರಕಾಶ್ ಅವರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೆಜೆಪಿ- ಬಿಜೆಪಿ ವಿಲೀನವಾಗಿರುವುದರಿಂದ ಮತದಾರರು ಬಿಜೆಪಿ ಬೆಂಬಲಿಸುವ ಮೂಲಕ ಮೋದಿ ಅಲೆಯೂ ಕೂಡ ನನ್ನ ಗೆಲುವಿಗೆ ಪೂರಕವಾಗಲಿದೆ ಎಂದರು.
ಮುಖಂಡರ ಭೇಟಿ: ಹಾಸನ ಲೋಕಸಭಾ ಕ್ಷೇತ್ರದಲ್ಲೂ ಬದಲಾವಣೆ ಗಾಳಿ ಬೀಸುತ್ತಿದೆ. ನಾನು ನಾಮಪತ್ರ ಸಲ್ಲಿಸಿದ ನಂತರ ನೂರಾರು ಪ್ರಮುಖರು ಹಾಗೂ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದು, ಎಲ್ಲೆಡೆ ಬಿಜೆಪಿ ಗಾಳಿ ಬೀಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ದೇಶದ ಭವಿಷ್ಯದ ಹಿತದೃಷ್ಟಿಯಿಂದ ದೇಶದ ಜನತೆಗೆ ಬಿಜೆಪಿ ಅನಿವಾರ್ಯವಾಗಿದೆ ಎಂದವರು ಹೇಳಿದರು.
ಆಶಾದಾಯ ವಾತಾವರಣ: ಕಳೆದ ಚುನಾವಣೆಯಲ್ಲಿ ಕೆಜೆಪಿ ಬಿಜೆಪಿ ಬೇರೆ ಬೇರೆಯಾದ್ದರಿಂದ ಸಮಸ್ಯೆ ಉಂಟಾಗುವ ಮೂಲಕ ಬಿಜೆಪಿಗೆ ತೊಂದರೆ ಯಾದದ್ದು ಸತ್ಯ. ಆದರೆ ಇದೀಗ ಅಂತಹ ಯಾವುದೇ ಅಡ್ಡಗಾಲು ಇಲ್ಲ. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಡಾ. ವೈ.ಸಿ. ವಿಶ್ವನಾಥ್, ಬೆಳ್ಳಿಪ್ರಕಾಶ್, ಕೆ.ಎಚ್. ಶಂಕರ್, ಎಸ್.ವಿ.ಉಮಾಪತಿ,ಪಿ.ಕೆ. ರೇವಣ್ಣಯ್ಯನವರಂತಹ ಜೊತೆ ನಗರ ಘಟಕ ಸೇರಿದಂತೆ ಎಲ್ಲಾ ಶಕ್ತಿ ಕೇಂದ್ರಗಳೂ ಹೆಚ್ಚಿನ ಶ್ರಮ ಹಾಕುವ ಮೂಲಕ ಸಂಘಟನೆ ಪ್ರಬಲವಾಗಿದೆ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎ. ಮಣಿ,ಕೆ.ಬಿ. ಸೋಮೇಶ್,ಬಂಕ್ ಮಂಜು, ಶಿವಶಂಕರ್, ಕೆ.ಜಿ. ಲೋಕೇಶ್ವರ್ ಮೊದಲಾದ ಮುಖಂಡರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

