'ಸ್ವಪ್ರಯತ್ನ ನಂಬಿದ್ದ ಭಗವಾನ್ ಬುದ್ಧ'
ಕ.ಪ್ರ.ವಾರ್ತೆ ್ಣ ಹೊಳಲ್ಕೆರೆ ್ಣ ಮೇ 14
ಮನುಷ್ಯ ತನ್ನನ್ನು ತಾನೇ ಸಂರಕ್ಷಿಸಿಕೊಳ್ಳಬೇಕು. ತನ್ನ ಉದ್ಧಾರದ ದಾರಿ ತಾನೇ ಕಂಡುಕೊಳ್ಳಬೇಕು. ಜಗತ್ತಿನ ಯಾವ ಶಕ್ತಿಯೂ ಅಥವಾ ದೇವರು ಸಂರಕ್ಷಿಸಲು ಮೇಲಿಂದ ಇಳಿದು ಬರುವುದಿಲ್ಲ ಎಂದು ಸಾರಿದ ಪ್ರಥಮ ವಿಚಾರವಾದಿ ಭಗವಾನ್ ಬುದ್ಧ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಡಿ.ಆರ್.ಪಾಂಡುರಂಗಸ್ವಾಮಿ ಹೇಳಿದರು.
ಪಟ್ಟಣದ ದಲಿತ ಸಂಘರ್ಷ ಸಮಿತಿ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಾನ್ ಬುದ್ಧ ಈ ಜಗತ್ತಿನ ಕತ್ತಲನ್ನು ಹೋಗಲಾಡಿಸಲು ಹುಟ್ಟಿ ಬಂದ ಸುದಿನ ವೈಶಾಖ ಬುದ್ಧ ಪೌರ್ಣಿಮಿ ದಿನ. ಇದೇ ಪೌರ್ಣಿಮೆಯಂದು ಬುದ್ಧ ಮಹಾಪರಿನಿರ್ವಾಣ ಹೊಂದಿದರು ಎಂದರು.
ಬುದ್ಧ ಆಸೆಯೇ ದುಃಖಕ್ಕೆ ಮೂಲ, ಅಹಿಂಸೆಯೇ ಪರಮಧರ್ಮ ಎಂದು ಜಗತ್ತಿಗೆ ಸಾರಿದ ಧೀಮಂತ ಜ್ಞಾನಿ. ಅದೃಷ್ಟ, ದುರಾದೃಷ್ಟ, ಪೂರ್ವಜನ್ಮದ ಕರ್ಮ ಎಂದು ಕೈಕಟ್ಟಿ ಕುಳಿತುಕೊಳ್ಳಬಾರದು. ಸ್ವಪ್ರಯತ್ನದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ. ಆ ಮೂಲಕ ಮಾನವ ದೈವತ್ವಕ್ಕೆ ಏರಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂತಹ ಮಹಾತ್ಮರ ಪುಣ್ಯ ದಿನದಂದು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಲೂಕು ಸಂಚಾಲಕರಾದ ಆರ್.ಶಿವಕುಮಾರ್, ದಿವಾಕರ್, ಅಬ್ದುಲ್ ವಹೀದ್, ಅಲಿಮುಲ್ಲಾ ಷರೀಫ್, ಜಬೀ, ಅಲ್ತಾಫ್ ಹುಸೇನ್, ಮಂಜು, ಪ್ರಸನ್ನ, ಧನಂಜಯ್, ಹಾಲೇಶ್, ಶ್ರೀನಿವಾಸ್, ಅಂಜನಪ್ಪ, ಸ್ವಾಮಿ, ಕೃಷ್ಣ ಇತರರು ಹಾಜರಿದ್ದರು. ಸಭೆ ನಂತರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಬಡ ರೋಗಿಗಳಿಗೆ ಹಾಲು, ಹಣ್ಣು ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

