ಭಾರಿ ಅಂತರದ ಗೆಲವು
ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು 1,81,643 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ನಿರೀಕ್ಷೆಯಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಶೋಭಾ ಕರಂದ್ಲಾಜೆ ಅವರು ಬಹಳ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 13,86,516 ಮತದಾರರಿದ್ದು, ಈ ಪೈಕಿ 10,32,871 ಮತ ಚಲಾವಣೆಯಾಗಿದ್ದು, ಶೇ. 74.71 ರಷ್ಟು ಮತದಾನವಾಗಿತ್ತು. ಅಂದರೆ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ ಹೆಚ್ಚು ಮತದಾನವಾಗಿತ್ತು.
ಚಲಾವಣೆಯಾಗಿರುವ 10,32,871 ಮತಗಳ ಪೈಕಿ ಶೋಭಾ ಕರಂದ್ಲಾಜೆ ಅವರು 5,81,168 ಮತ ಪಡೆದುಕೊಂಡಿದ್ದರೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಕೆ. ಜಯಪ್ರಕಾಶ್ ಹೆಗ್ಡೆ ಅವರು 3,99,525 ಮತ ಪಡೆದುಕೊಂಡಿದ್ದಾರೆ. ಅಂದರೆ ಶೋಭಾ ಕರಂದ್ಲಾಜೆ ಅವರು 1,81,643 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. 2012ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರು 3,98,723 ಮತ ಪಡೆದುಕೊಂಡಿದ್ದರು. ಅಂದರೆ, ಈ ಬಾರಿಯ ಚುನಾವಣೆಯಲ್ಲಿ ಅವರು ಹೆಚ್ಚುವರಿ ಪಡೆದಿರುವ ಮತಗಳು ಕೇವಲ 802 ಮಾತ್ರ. ಆದರೆ, ಬಿಜೆಪಿ ಹೆಚ್ಚು ಮತಗಳನ್ನು ತನ್ನ ಬುಟ್ಟಿಯಲ್ಲಿ ತುಂಬಿಸಿಕೊಂಡಿದೆ.
ಕಳೆದ ಲೋಕಸಭೆಯ ಉಪ ಚುನಾವಣೆಯಲ್ಲಿ ಜೆಡಿಎಸ್ 72,080 ಮತಗಳನ್ನು ಪಡೆದುಕೊಂಡಿತ್ತು. ಈ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದ ಕೇಂದ್ರದ ಮಾಜಿ ಸಚಿವ ವಿ. ಧನಂಜಯಕುಮಾರ್ ಪಡೆದುಕೊಂಡಿರುವ ಮತಗಳು 14,895 ಮಾತ್ರ. ಅಂದರೆ ಜೆಡಿಎಸ್ ತನ್ನ ಪಾಲಿನ ಮತಗಳನ್ನು ಕಳೆದುಕೊಂಡಿದೆ. ಬಿಎಸ್ಪಿಯ ಜಾಕೀರ್ಹುಸೇನ್- 7449, ಸಿಪಿಐನ ವಿಜಯಕುಮಾರ್- 9691, ಅಮ್ ಆದ್ಮಿ ಪಾರ್ಟಿಯ ಎಸ್.ಎಚ್. ಗುರುದೇವ್- 6049, ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ ಪೂಜಾರಿ- 1899, ಸುಧೀರ್ ಕಾಂಚಾನ್- 1689, ಸಿಪಿಐ (ಎಂ.ಎಲ್.) ಪಕ್ಷದ ಸಿ.ಜೆ. ಜಗನ್ನಾಥ್- 1612, ಪಕ್ಷೇತರ ಅಭ್ಯರ್ಥಿ ಎಂ.ಡಿ. ಮೇನುದ್ದೀನ್ ಖಾನ್ ಆಲಿಯಾಸ್ ಆಸ್ಫೀಯಾ- 1214, ಇನ್ನೊರ್ವ ಪಕ್ಷೇತರ ಅಭ್ಯರ್ಥಿ ಜಿ. ಮಂಜುನಾಥ 1089 ಮತ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

