ಛತ್ರಪತಿ ಶಿವಾಜಿ ಶೌರ್ಯದ ಪ್ರತೀಕ
ಬೀರೂರು: ಧೈರ್ಯ, ಸಾಹಸ, ಕೆಚ್ಚೆದೆ ನಾಡಿನ ಇತಿಹಾಸದ ಮಹಾನ್ ಪುರುಷರ ಸಂಕೇತವಾಗಿದ್ದು, ಅಂಥವರ ಸಾಲಿನಲ್ಲಿ ಛತ್ರಪತಿ ಶಿವಾಜಿ ಒಬ್ಬರಾಗಿದ್ದು, ಅವರು ನಾಡಿನ ಶೌರ್ಯದ ಪ್ರತೀಕ ಎಂದು ಕಡೂರು ಕ್ಷೇತ್ರದ ಶಾಸಕ ವೈಎಸ್ವಿ ದತ್ತ ಹೇಳಿದರು.
ಇಲ್ಲಿನ ಮಾರನವಮಿ ಬಯಲಿನಲ್ಲಿ ಸೋಮವಾರ ನಡೆದ ಛತ್ರಪತಿ ಶಿವಾಜಿಯವರ 387ನೇ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವಾಜಿಯ ತಾಯಿ ಜೀಜಾಬಾಯಿ ತನ್ನ ಮಗನು ಜಗದ್ವಿಖ್ಯಾತನಾಗಬೇಕು ಎಂಬ ಹಂಬಲದಿಂದ ಮಗು ಗರ್ಭದಲ್ಲಿರುವಾಗಲೇ ದೇಶದ ಮಹಾನ್ ಧರ್ಮ ಗ್ರಂಥಗಳಾದ ರಾಮಾಯಣ ಮಹಾಭಾರತ ಅಧ್ಯಯನ ಮಾಡಿದ್ದರು ಎಂದರು.
ಯುವಜನಾಂಗಕ್ಕೆ ಆದರ್ಶ: ಬಾಲ್ಯದಲ್ಲಿಯೇ ಕತ್ತಿ ವರಸೆ, ಕುದುರೆ ಸವಾರಿ ತರಬೇತಿ ಕೊಡಿಸುವ ಮೂಲಕ ರಕ್ತದಲ್ಲಿಯೇ ಶೌರ್ಯ ಸಾಹಸ ಪರಾಕ್ರಮ ಧಾರೆಯರೆದರು. ತಾಯಿಯ ಆಶಯದಂತೆಯೇ ಸಾಹಸ ಕೆಚ್ಚೆದೆ ಸ್ವಾಭಿಮಾನ, ಶೌರ್ಯದ ಪ್ರತೀಕವಾಗಿದ್ದ ಶಿವಾಜಿ ಬದುಕು ಇಂದಿನ ಯುವ ಜನಾಂಗಕ್ಕೆ ಆದರ್ಶವಾಗಿದೆ. ಇಂತಹ ಮಹಾನ್ ಪುರುಷರನ್ನು ಯಾವುದೇ ಒಂದು ಜಾತಿ, ವರ್ಗ, ಧರ್ಮದಲ್ಲಿ ಗುರುತಿಸುವುದು ತಪ್ಪು. ಇಂತಹ ಮಹಾನ್ ಪುರುಷರ ಜಯಂತಿಯನ್ನು ಎಲ್ಲರೂ ಒಗ್ಗಟ್ಟಿನಿಂದ ಆಚರಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್ ಮಾತನಾಡಿ, ಶಿವಾಜಿ ಬದುಕೆ ಆದರ್ಶ, ಅವರ ಜೀವನದ ಆದರ್ಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಶಿವಾಜಿ ಹೆಸರಿನಲ್ಲಿ ಒಂದುಗೂಡಿಸುವ ಸಣ್ಣ ಸಮುದಾಯದ ಆತ್ಮಾವಲೋಕನದ ವೇದಿಕೆ ಇದಾಗಬೇಕಿದೆ. ಸಣ್ಣ ಸಮುದಾಯಗಳು ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಿದಾಗ ಮಾತ್ರ ಹಿಂದುಳಿದ ವರ್ಗ ಪ್ರಗತಿಯಾದಂತೆ ಸಣ್ಣ ಸಮುದಾಯಗಳು ಸಂಘಟಿತರಾಗದಿದ್ದರೆ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಿಲ್ಲವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಮರಾಠ ಸಮಾಜದ ವತಿಯಿಂದ ಸಮುದಾಯ ಭವನಕ್ಕೆ ಆರ್ಥಿಕ ನೆರವು ದೊರಕಿಸಿಕೊಡುವಂತೆ ದತ್ತಾರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಶಿವಾಜಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯರಾದ ವಿಜಯೇಂದ್ರಬಾಬು, ರಂಗಪ್ಪ, ಸಿದ್ದೋಜಿರಾವ್, ಈರೋಜಿ ರಾವ್, ಘೋರ್ಪಡೆ, ಕೋಡಿಹಳ್ಳಿ ಮಹೇಶ್ವರಪ್ಪ, ಪ್ರಕಾಶ್ರಾವ್, ಪರಶುರಾಮ್ ಪಾಲ್ಗೊಂಡಿದ್ದರು. ಸಂಜೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

