ಚಳವಳಿ ದಮನಕ್ಕೆ ಯತ್ನ: ಆರೋಪ
ಹಿರಿಯೂರು: ಶಿವನಗರದ ಅಸಹಾಯಕ ದಲಿತ ಕುಟುಂಬಗಳ ಭವಿಷ್ಯದ ಹಿತದೃಷ್ಟಿಯಿಂದ ಕಳೆದ 92 ದಿನಗಳಿಂದ ನಿರಂತರವಾಗಿ ತಾಲೂಕು ಕಚೇರಿ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ನಡೆಸುತ್ತಿದ್ದ ಧರಣಿಯನ್ನು ಇನ್ನೆರಡು ದಿನದೊಳಗಾಗಿ ಶಿವನಗರ ಗ್ರಾಮಕ್ಕೆ ಸ್ಥಳಾಂತರಿಸಲಾಗುವುದೆಂದು ದಸಂಸ ರಾಜ್ಯಾಧ್ಯಕ್ಷ ಟಿ.ಡಿ. ರಾಜಗಿರಿ ತಿಳಿಸಿದರು.
ಸಾಮಾಜಿಕ ಸಾಮರಸ್ಯ ಕಾಯ್ದುಕೊಳ್ಳಬೇಕೆಂಬ ಒಂದೇ ಕಾರಣಕ್ಕೆ ಜಾತಿ ದೌರ್ಜನ್ಯ ಮತ್ತು ಸಾಮಾಜಿಕ ಬಹಿಷ್ಕಾರಗಳು ನಡೆದಿದ್ದರೂ ಸಂಯಮ ಉಳಿಸಿಕೊಂಡು ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮತ್ತು ಸಾಂವಿಧಾನಿಕ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡು ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸುವ ಕಾರಣಕ್ಕೆ ಪೊಲೀಸ್ ದೂರು ದಾಖಲಿಸಲು ಹೋಗಲಿಲ್ಲವೆಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರಮ ಹಾಕಿ ಕೆಲಸ: ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೇರಸಾಲ ಮಂಜೂರಾತಿಯಾಗಲಿ, ಶಿವನಗರದಲ್ಲಿ ದಲಿತರ ನಿವೇಶನಗಳಿಗೆ ಭೂಮಿ ಹುಡುಕಿ ಮಾಲಿಕರನ್ನು ಮನವೊಲಿಸುವ ಕಾರ್ಯವನ್ನಾಗಿ ಸ್ವಯಂ ಸಂಘಟನೆಯವರೇ ಶ್ರಮ ಹಾಕಿ ಕೆಲಸ ಮಾಡಿರುವ ಕಾರಣಕ್ಕೆ ಇದರಲ್ಲಿ ಇಲಾಖೆಗಳ ಹೆಚ್ಚುಗಾರಿಕೆಯೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ತಾಲೂಕು ದಸಂಸ ಅಧ್ಯಕ್ಷ ಕೆ. ನಾಗರಾಜ್, ನರಸಪ್ಪ, ಜಗದೀಶ್, ಹನುಮಂತಪ್ಪ, ಗೌರಮ್ಮ, ತಿಪ್ಪಮ್ಮ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

