ಓದುವ ಹವ್ಯಾಸ ಬೆಳೆಸಲು ಸಲಹೆ
ಚಳ್ಳಕೆರೆ: ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ಮೂಲಕ ಯುವ ಲೇಖಕರಿಗೆ ಪ್ರೇರಣೆ ನೀಡಬೇಕಿದೆ ಎಂದು ಪ್ರಾಧ್ಯಾಪಕ ಚಂದ್ರಶೇಖರ ಕರೆ ನೀಡಿದರು.
ತಾಲೂಕಿನ ಪರಶುರಾಮಪುರದ ಸರ್ಕಾರಿ ಪ್ರಧಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಮಾಲೆ ಕಾರ್ಯಕ್ರದ ಸಮರೋಪ ಸಮಾರಂಭ ಮತ್ತು ಸಮಗ್ರ ಅರ್ಥಶಾಸ್ತ್ರ ಪುಸಕ್ತ ಬಿಡುಗಡೆಯಲ್ಲಿ ಮಾತನಾಡಿದರು.ಪರಶುರಾಮಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ. ಶೋಭ ಮಾತನಾಡಿ, ವಿದ್ಯಾರ್ಥಿಗಳು ಉಪನ್ಯಾಸಗಳನ್ನು ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಪ್ರಾಧ್ಯಾಪಕ ಶ್ರೀರಾಮ ರೆಡ್ಡಿ ಮಾತನಾಡಿದರು. ಚಳ್ಳಕೆರೆ ಕಾಲೇಜಿನ ಪ್ರಾಧ್ಯಾಪಕ ಎಚ್,ಅಜ್ಜಯ್ಯ, ಸುರೇಶ್ ಸಾಮಾಜಿಕ ಸಂಶೊಧನೆ ಹಾಗೂ ಹಿಂದೂಳಿದ ವರ್ಗಗಳ ಚಳವಳಿ ಬಗ್ಗೆ ಉಪನ್ಯಾಸ ನೀಡಿದರು. ಜಗದೀಶ್, ಉಮೇಶ್, ಸಮಜಶಾಸ್ತ್ರ ಪ್ರಾಧ್ಯಾಪಕ ಟಿ. ನಾಗರಾಜು, ತಮ್ಮಣ್ಣ, ಜೋತಿ, ವೀಣಾ, ಡಾ. ಸತೀಶ್, ರಾಜಕುಮಾರ್, ಶರತ್, ಪ್ರಕಾಶ್, ಲಕ್ಷ್ಮೀ, ಅಶೋಕ, ದಿನೇಶ್, ನಾಗಭೂಷಣ್, ಚಂದ್ರಪ್ಪ, ರಾಂಘವೇಂದ್ರ, ನಾಗೇಶ್, ಅಜ್ಜಯ್ಯ, ತಿಮ್ಮಣ್ಣ, ವೀರೇಶ್, ತಿಪ್ಪೇಸ್ವಾಮಿ ಇದ್ದರು.
ಸಹಕಾರ ಸಂಘಗಳ ಸಮಾಪನೆ
ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಮೂರು ಸಹಕಾರ ಸಂಘಗಳು ಬೈಲಾ ರೀತ್ಯ ಕಾರ್ಯ ನಿರ್ವಹಿಸದೆ ಸ್ಥಗಿತಗೊಂಡಿರುತ್ತವೆ. ಮತ್ತು ಸದಸ್ಯರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಸಮಾಪನೆ ಮಾಡಿ ಸಹಕಾರಿ ಅಭಿವೃದ್ಧಿ ಅಧಿಕಾರಿಯವರನ್ನು ಸಮಾಪನಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಸರ್ಕಾರಿ ನೌಕರರ ಸಹಕಾರ ಸಂಘ, ಹೊಳಲ್ಕೆರೆ, ಗುಂಡಿನ ವೀರಭದ್ರಸ್ವಾಮಿ ಕುಂಬಾರಿಕಾ ಸಹಕಾರ ಸಂಘ, ಬಿ.ದುರ್ಗ ಹಾಗೂ ಲಕ್ಷ್ಮಿನರಸಿಂಹಸ್ವಾಮಿ ಸಣ್ಣ ನೀರು ಬಳಕೆದಾರರ ಸಹಕಾರ ಸಂಘ ಹೊರಕೆರೆದೇವರಪುರ ಈ ಸಂಘಗಳ ನೊಂದಣಿ ರದ್ದತಿಗೆ ಪ್ರಸ್ತಾವನೆ ಸಲ್ಲಿಸಬೇಕಾಗಿರುವುದರಿಂದ ಸಂಘಗಳ ಸದಸ್ಯರು ಸಂಘ ರದ್ದು ಮಾಡುವ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ವಾರದೊಳಗಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ, ಹೊಳಲ್ಕೆರೆ ಇಲ್ಲಿಗೆ ಸಲ್ಲಿಸಲು ಸಮಾಪನಾಧಿಕಾರಿ ಎ. ಬಾಲಚಂದ್ರರೆಡ್ಡಿ ತಿಳಿಸಿದ್ದಾರೆ.
ನೇತ್ರ ಚಿಕಿತ್ಸಾ ಶಿಬಿರ
ಚಿತ್ರದುರ್ಗ: ಜಿಲ್ಲಾ ಅಂಧತ್ವ ನಿಯಂತ್ರಣಾ ಸಮಿತಿ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನೇತ್ರಜ್ಯೋತಿ ಕಣ್ಣಿನ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆ, ಜಿಲ್ಲಾ ಸರ್ವೋದಯ ಮಿತ್ರ ಮಂಡಳಿ ಸಂಯುಕ್ತಾಶ್ರಯದಲ್ಲಿ 22 ರಿಂದ 24 ರವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ನೇತ್ರಾ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ನೇತ್ರ ತಜ್ಞ ಡಾ.ಆರ್. ಕೃಷ್ಣಮೂರ್ತಿ ಶಿಬಿರದಲ್ಲಿ ಚಿಕಿತ್ಸೆ ನಡೆಸಿಕೊಡುವರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

