ದಕ್ಷಿಣ ಕನ್ನಡ

ಏನೆಕಲ್: ಬಚ್ಚನಾಯಕ ದೈವದ ನೇಮೋತ್ಸವ

Published On :

ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಏನೆಕಲ್ ಗ್ರಾಮದ ಶ್ರೀ ಉಳ್ಳಾಕುಲು, ಉಳ್ಳಾಳ್ತಿ ಬಚ್ಚನಾಯಕ ದೈವಸ್ಥಾನದಲ್ಲಿ ಸೋಮವಾರ ಪ್ರಾತಃಕಾಲ ಶ್ರೀ ಬಚ್ಚನಾಯಕ ದೈವದ ನೇಮೋತ್ಸವ ಜರುಗಿತು.
ಶುಕ್ರವಾರ ಉಳ್ಳಾಕುಲು, ಉಳ್ಳಾಳ್ತಿ ಬಚ್ಚನಾಯಕ ದೈವಸ್ಥಾನದಲ್ಲಿ ಉಗ್ರಾಣ ತುಂಬಿಸವ ಕಾರ್ಯ ನೆರವೇರಿತು.ಬಳಿಕ ಮುಹೂರ್ತ ತೋರಣ ಹಾಗೂ ಉಳ್ಳಾಕುಲು ವಗೈರೆ ದೈವಗಳ ನೇಮ ನೆರವೇರಿತು. ಶನಿವಾರ ಉಳ್ಳಾಳ್ತಿ ವಗೈರೆ ದೈವಗಳ ನೇಮ ನಡಾವಳಿಗಳು ಸಮಾಪನಗೊಂಡಿತು. ಭಾನುವಾರ ಭಂಡಾರ ಬಂದು, ಉಡ್ಡೋತ್ತಾರುಟ  ಕುಮಾರ ದೈವಗಳ ನೇಮ ಮತ್ತು ಪ್ರಧಾನಿ ವಗೈರೆ ದೈವಗಳ ನೇಮ ನಡೆಯಿತು. ಸೋಮವಾರ ಬೆಳಗ್ಗೆ  ಶ್ರೀ ಬಚ್ಚನಾಯಕ ದೈವದ ನೇಮೋತ್ಸವ ನೆರವೇರಿತು.
ಏನೆಕಲ್ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಈ ಮೊದಲ ದಿನಗಳಲ್ಲಿ ವಾರ್ಷಿಕ ಜಾತ್ರೋತ್ಸವವು ನೆರವೇರಿತು. ಗೊನೆ ಕಡಿಯುವುದರೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ದೊರಕಿತ್ತು. ನಂತರ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ರಂಗಪೂಜೆ, ರಾತ್ರಿ ಶ್ರೀ ಭೂತ ಬಲಿ ಉತ್ಸವ, ವಸಂತ ಕಟ್ಟೆಪೂಜೆ, ಗಣಪತಿ ಹೋಮ, ಕಲಶ ಪೂಜೆ, ದೇವರ ಬಲಿ ಉತ್ಸವ, ದರ್ಶನ ಬಲಿ,  ಬಟ್ಟಲು ಕಾಣಿಕೆ ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.