ದಕ್ಷಿಣ ಕನ್ನಡ

ಮೀನುಗಾರರಿಗೆ ಸ್ಮಾರ್ಟ್ ಕಾರ್ಡ್

Published On :

ಮಂಗಳೂರು: ಬೋಳೂರು ಮೊಗವೀರ ಸಹಕಾರಿ ಸಂಘದ ವತಿಯಿಂದ ಮಹಿಳೆಯರಿಗೆ ಮತ್ತು ಪುರುಷರಿಗೆ ಮೀನುಗಾರರ ಗುರುತಿನ ಚೀಟಿ, 500 ಸ್ಮಾರ್ಟ್.ಕಾರ್ಡ್.ನ್ನು ಶನಿವಾರ ಸಂಘದ ಕಾರ್ಯಲಾಯದಲ್ಲಿ ರಾಷ್ಟ್ರೀಯ ಮೀನುಗಾರರ ವೇದಿಕೆ ಕಾರ್ಯದರ್ಶಿ ವಾಸುದೇವ ಬೋಳೂರು ವಿತರಿಸಿದರು. ನಂತರ ಮಾತನಾಡಿದ ಅವರು, ಈ ಕಾರ್ಡು ಹೊಂದಿದವರು ದೇಶದ ಕರಾವಳಿ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೀನುಗಾರರೆಂದು ಗುರುತಿಸಲ್ಪಡುತ್ತಾರೆ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ ಎಂದರು. ಸಹಕಾರಿ ಸಂಘದ ನಿರ್ದೇಶಕರಾದ ಚಂದ್ರಹಾಸ್ ಪುತ್ರನ್, ವಾರಿಜ ಎಸ್ ಕರ್ಕೇರ ಇದ್ದರು.

ಧರಣಿ ಸತ್ಯಾಗ್ರಹ 18ನೇ ದಿನಕ್ಕೆ
ಸುಳ್ಯ:
ತಮಿಳು ಜನಾಂಗದವರು ಜಾತಿ ಸರ್ಟಿಫಿಕೇಟ್ ಹಾಗೂ 3ನೇ ತಲೆ ಮಾರಿಗೆ ಕೆಲಸಕ್ಕೆ ಒತ್ತಾಯಿಸಿ ಸುಳ್ಯ ತಾಲೂಕು ಕಚೇರಿಯ ಮುಂದೆ ನಡೆಸುತ್ತಿರುವ ಧರಣಿ ಸತ್ಯಾಗ್ರಹ 18ನೇ ದಿನಕ್ಕೆ ಕಾಲಿರಿಸಿದೆ. ಮಾ. 15ರಂದು ಇದು ಆರಂಭಗೊಂಡಿತ್ತು.

ಇಂದು ಶ್ರದ್ಧಾಂಜಲಿ
ಮಂಗಳೂರು:
ಶ್ರೀ ಗಣೇಶ ನಾಟಕ ಸಭಾ ವತಿಯಿಂದ ಏ. 2ರಂದು ಬೆಳಗ್ಗೆ 11ಕ್ಕೆ ಡಾನ್.ಬಾಸ್ಕೋ ಸಭಾಂಗಣದಲ್ಲಿ ಇತ್ತೀಚೆಗೆ ನಿಧನಹೊಂದಿದ ಕನ್ನಡ ಮತ್ತು ತುಳು ರಂಗಭೂಮಿ ಕಲಾವಿದ ಯು. ತಾರಾನಾಥ ನಾಯಕ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ಕಳೆದ ಆರು ದಶಕದಿಂದ ರಂಗಭೂಮಿಯಲ್ಲಿ ದುಡಿದ ಇವರು ಅನೇಕ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಇವರು ಅಭಿನಯಿಸಿದ 'ತಮ್ಮಲೆ ಅರ್ವತ್ತನ ಕೋಲ', 'ಕಂಡನಿಟ ಬುಡೆದಿ', 'ಏರೆನ್ಲಾ ನಂಬೋಡ್ಚಿ' ಖ್ಯಾತಿ ನಾಟಕಗಳಾಗಿದೆ.

ಕರಸೇವೆಗೆ ಹೆಸರು ನೋಂದಾಯಿಸಿ
ಪುತ್ತೂರು:
ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದಂತೆ ಕಳೆದ 211 ದಿನಗಳಲ್ಲಿ 919 ಸಂಘ ಸಂಸ್ಥೆಗಳು ಹಾಗೂ 38579 ಕರಸೇವಕರು ಸಹಕಾರ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಕರಸೇವಾ ಪ್ರಮುಖ ರಾಜೇಶ್ ಬನ್ನೂರು ತಿಳಿಸಿದ್ದಾರೆ. ಕರಸೇವೆ ಬಗ್ಗೆ ದೇವಳದ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡು ದಿನಾಂಕ ನಿಗದಿಪಡಿಸಿಕೊಳ್ಳುವಂತೆ ಮತ್ತು ದೇವರ ಕೆಲಸ ಕಾರ್ಯದಲ್ಲಿ ಭಾಗವಹಿಸುವ ಕರಸೇವಕರಿಗೆ ಊಟ ಉಪಚಾರ ನೀಡುವವರು ದಿವೊಂದಕ್ಕೆ ಕನಿಷ್ಠ ರು.  5 ಸಾವಿರ ನೀಡಿ ಸಹಕರಿಸುವಂತೆ ಅವರು ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.