ದಕ್ಷಿಣ ಕನ್ನಡ

ಆಸ್ತಿ ತೆರಿಗೆ ಪಾವತಿಸಲು ಸೂಚನೆ

Published On :

ಮೂಲ್ಕಿ: ನಗರ ಪಂಚಾಯಿತಿ  ವ್ಯಾಪ್ತಿಯ ಎಲ್ಲಾ ಕಟ್ಟಡಗಳ ಹಾಗೂ ಕೃಷಿಯೇತರ ನಿವೇಶನಗಳ ಮಾಲೀಕರು ಮತ್ತು ಅನುಭೋಗದಾರರು 2013- 14ರ ಸಾಲಿನ ಆಸ್ತಿ ತೆರಿಗೆಯನ್ನು ಏ.30ರ ಒಳಗೆ ಪಾವತಿಸಿದ್ದಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಂತೆ ಶೇ.5 ರಿಯಾಯಿತಿ ದೊರೆಯಲಿದ್ದು ಎಲ್ಲಾ ತೆರಿಗೆದಾರರು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಿ ರಿಯಾಯಿತಿ ಪಡೆಯುವಂತೆ, 2012- 13 ಸಾಲಿನ ತೆರಿಗೆಯನ್ನು ಪಾವತಿಸುವಂತೆ ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಂಗಮನೆಯಲ್ಲಿ 11 ರಿಂದ ಚಿಣ್ಣರಮೇಳ
ಸುಳ್ಯ: ಸುಳ್ಯ ಹಳೆಗೇಟಿನ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ಏ. 11ರಿಂದ 21ರ ತನಕ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರ ಮೇಳವು ನಡೆಯಲಿದೆ. ರಂಗಾಯಣ ಶಿವಮೊಗ್ಗ ಇದರ ಸಹಯೋಗದಲ್ಲಿ ನಡೆಯುವ ಈ ಶಿಬಿರದಲ್ಲಿ 8ರಿಂದ 15 ವರ್ಷದೊಳಗಿನ 100 ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಶಿಬಿರ ಸಂಪೂರ್ಣ ಉಚಿತವಾಗಿರುತ್ತದೆ.  ಆಸಕ್ತರು ಏ. 7ರೊಳಗೆ ಮೊ. 9448215946 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಎಂದು ರಂಗನಿರ್ದೇಶಕ ಜೀವನ್ ರಾಮ್ ತಿಳಿಸಿದ್ದಾರೆ.

6ರಿಂದ ಸಸಿಹಿತ್ಲಿನಲ್ಲಿ ವಿವಿಧ ಸ್ಪರ್ಧೆ
ಮಂಗಳೂರು:
ಸುರತ್ಕಲ್‌ನ ಸಸಿಹಿತ್ಲು ಶ್ರೀಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಸುವರ್ಣ ಮಹೋತ್ಸವ 25, 26ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ದೈಹಿಕ ಕಸರತ್ತಿನ ಕ್ರೀಡೆ, ಸಾಂಸ್ಕೃತಿಕ ಮನೋರಂಜನಾ ಸ್ಪರ್ಧೆ ಎ.6 ಮತ್ತು 7ರಂದು ಸಸಿಹಿತ್ಲು ಕಡಲ ಕಿನಾರೆಯಲ್ಲಿ ನಡೆಯಲಿದೆ ಎಂದು  ಸಮಿತಿ ಸದಸ್ಯ ಪರಮಾನಂದ ಸಾಲ್ಯಾನ್  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಕುಸ್ತಿ ಸ್ಪರ್ಧೆ, ಹಗ್ಗಜಗ್ಗಾಟ, ದೋಣಿ ಸ್ಪರ್ಧೆ, ಈಜು ಸ್ಪರ್ಧೆ ನಡೆಯಲಿದೆ. 6ರಂದು ಸಂಜೆ ಆಹ್ವಾನಿತ ನೃತ್ಯ ತಂಡಗಳಿಂದ ನೃತ್ಯ ಸ್ಪರ್ಧೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.