ದಕ್ಷಿಣ ಕನ್ನಡ

ಸೋದೆಶ್ರೀಗಳ ಪೂರ್ವಾಶ್ರಮದ ಸಹೋದರ ನಿಧನ

Published On :

ಉಡುಪಿ: ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರ ಪೂರ್ವಾಶ್ರಮದ ಸಹೋದರ ಮಂಗಳವಾರ ಅಸ್ವಾಭಾವಿಕ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮೃತ ತ್ರಿವಿಕ್ರಮ ತಂತ್ರಿ (15) ಕೃಷ್ಣಮಠದ ರಥಬೀದಿಯ ಹೊರಭಾಗದಲ್ಲಿರುವ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಯಾಗಿದ್ದ. ಈತ ಪಿತ್ತಕೋಶದ ತೊಂದರೆಯಿಂದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಇತ್ತೀಚೆಗೆ ಪ್ರಥಮ ಪಿಯು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ವಿಷಯದ ವಿದ್ಯಾರ್ಥಿಯಾಗಿದ್ದ ತ್ರಿವಿಕ್ರಮ 5 ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ. ಅಲ್ಲದೇ ಕಾಮಾಲೆ ಕಾಯಿಲೆಯಿಂದ ಬಳಲುತ್ತಿದ್ದು ಅನೇಕ ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದ.
  ಮ್ಯಾಂಡೋಲಿನ್ ವಾದನ ಅಭ್ಯಾಸ ಮಾಡುತ್ತಿದ್ದ ತ್ರಿವಿಕ್ರಮ ಶಾಲೆ ಕಾಲೇಜುಗಳಲ್ಲಿ ಕಚೇರಿಯನ್ನೂ ನೀಡಿದ್ದ. ಈತನ ತಂದೆ ಪಾಡಿಗಾರು ಶ್ರೀನಿವಾಸ ತಂತ್ರಿ ಪರ್ಯಾಯ ಸೋದೆ ಮಠದ ದಿವಾಣರಾಗಿದ್ದಾರೆ.

ಮಂಗಳೂರು: 24ರಿಂದ ಉಚಿತ ಶಿಬಿರ
ಮಂಗಳೂರು:
ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ವತಿಯಿಂದ ಏ. 24ರಿಂದ 30ವರೆಗೆ ಶ್ರೀ ಕ್ಷೇತ್ರದಲ್ಲಿ ಮಕ್ಕಳಿಗೆ ಉಚಿತ 'ನೈತಿಕ-ಧಾರ್ಮಿಕ' ಶಿಬಿರ ನಡೆಯಲಿದೆ. ಶಿಬಿರದಲ್ಲಿ 6ರಿಂದ 15ವರ್ಷ ವಯೋವುತಿಯ ಬಾಲಕ-ಬಾಲಕಿಯರು ಪಾಲ್ಗೊಳ್ಳಬಹುದು. ಆಸಕ್ತರು ದೇವಸ್ಥಾದ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದು.

6ರಂದು ತರಬೇತಿ
ಮಂಗಳೂರು:
ಯೆಯ್ಯಾಡಿ ಜಿಲ್ಲಾ ಸಣ್ಣ ಕೈಗಾರಿಕಾ ವಸಾಹತು ಮಹಿಳಾ ವಿಭಾಗದ ವತಿಯಿಂದ ಏ. 6ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ 'ಸ್ಮೋಕ್ಡ್ ರೌಂಡ್ ಕುಷನ್,' ಕುರಿತು ತರಬೇತಿ ನಡೆಯಲಿದೆ. ಮೊದಲು ಬಂದ ಅಭ್ಯರ್ಥಿಗಳಿಗೆ ಆದ್ಯತೆ.
 ಹೆಚ್ಚಿನ ಮಾಹಿತಿಗಾಗಿ 8123521989 ಸಂಪರ್ಕಿಸಬಹುದು ಎಂದು ಸಂಘದ ಅಧ್ಯಕ್ಷೆ ಕುಸುಮಾ ಎಚ್. ದೇವಾಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.