ಮತ್ತೊಂದು ರಾಯಬಾಗ ರೇಪ್ ಕೇಸ್: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಬೆಳಗಾವಿ/ರಾಯಬಾಗ: ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಮರೆಯುವ ಮುನ್ನವೇ ಅದೇ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಗುರುವಾರ ಸಂಜೆ 8 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ವಿಠಲ್ ಭೀಮಾ ಅವರಾದಿ ಅಲಿಯಾಸ್ ಡೊಂಬರ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಂಕಣವಾಡಿ ಗ್ರಾಮದ ಆರೋಪಿ ವಿಠಲ ಅವರಾದಿ ಗುರುವಾರ ಸಂಜೆ ಬಾಲಕಿ ಮನೆಯಲ್ಲಿ ಒಂಟಿಯಾಗಿರುವುದನ್ನು ತಿಳಿದು, ಮನೆಗೆ ನುಗ್ಗಿ ಅವಳನ್ನು ಅಡುಗೆ ಮನೆಗೆ ಬಲವಂತವಾಗಿ ಕರೆದೊಯ್ದು ಅವಳ ಬಾಯಿ ಮುಚ್ಚಿ ಅತ್ಯಾಚಾರ ನಡೆಸಿದ್ದಾನೆ ಎಂದು ಅತ್ಯಾಚಾರಕ್ಕಿಡಾಗಿರುವ ಬಾಲಕಿಯ ತಂದೆ ದೂರಿದ್ದಾರೆ.
ಈ ಕಾಮಾಂಧ ಅತ್ಯಾಚಾರಕ್ಕೂ ಮುನ್ನ ಬಾಲಕಿಯನ್ನು ವಿವಸ್ತ್ರಗೊಳಿಸಿ, ತಾನೂ ವಿವಸ್ತ್ರನಾಗಿದ್ದ. ತನ್ನ ಮನೆಯ ಬಾಗಿಲು ಬಳಿ ಪಾದರಕ್ಷೆಗಳನ್ನು ನೋಡಿ ಸಂಶಯಗೊಂಡು ಒಳ ಹೋದ ತಂದೆಗೆ ಈ ಅಮಾನುಷ ಕೃತ್ಯ ಕಣ್ಣಿಗೆ ಬಿದ್ದಿದೆ. ತಕ್ಷಣ ಆತನನ್ನು ಹೊರಗೆ ಎಳೆದುಕೊಂಡು ಬಂದು ಸಾರ್ವಜನಿಕರಿಗೆ ತಿಳಿಸಿದ್ದಾಗಿ ಬಾಲಕಿಯ ತಂದೆ ಶುಕ್ರವಾರ ಸಂಜೆ ಕಣ್ಣೀರಿಡುತ್ತಾ ಬೆಳಗಾವಿಯಲ್ಲಿ ಮಾಧ್ಯಮದವರ ಮುಂದೆ ನಡೆದ ಅಮಾನುಷ ಘಟನೆ ವಿವರಿಸಿದ. ಘಟನೆ ತಿಳಿಯುತ್ತಿದ್ದಂತೆ ಸೇರಿದ ಗ್ರಾಮಸ್ಥರು ಕಾಮುಕನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಬಳಿಕ ಗ್ರಾಮದ ಮುಖಂಡರು ಪಂಚಾಯ್ತಿ ನಡೆಸಿ ಆರೋಪಿಯನ್ನು ರಾಯಬಾಗ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ರಾಯಬಾಗ ಸಿಪಿಐ ಶ್ರೀಪಾದ ಜಲ್ದೆ, ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಶುಕ್ರವಾರ ಬಾಲಕಿಯನ್ನು ವೈದ್ಯಕೀಯ ತಪಾಸಣೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆ ತರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

