ದಕ್ಷಿಣ ಕನ್ನಡ

ಡಿಸಿ ಕಚೇರಿ ಶೀಘ್ರ ಹೊಸ ಝಲಕ್!

Published On :

ಮಂಗಳೂರು: ವಿಧಾನಸಭಾ ಚುನಾವಣೆ ಭರಾಟೆ ಶುರುವಾಗುವ ಹೊತ್ತಿಗೆ ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಹೊಸ ಝಲಕ್ ಸಿಗಲಿದೆ.
ಜಿಲ್ಲಾಡಳಿತ ಕಚೇರಿಗೆ ಬರುವುದೆಂದರೆ ಮೂಗು ಮುರಿಯುವ ಪರಿಸ್ಥಿತಿಯನ್ನು ಬದಲಾಯಿಸಲು ರು. 40 ಲಕ್ಷದ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಈವರೆಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುವವರಿಗೆ ನಿರ್ದಿಷ್ಟ ಪಾರ್ಕಿಂಗ್ ಸ್ಥಳ ಇರಲಿಲ್ಲ. ಯಾವುದೋ ಹಳೆ ಕಟ್ಟಡಕ್ಕೆ ಬಂದಂತಾಗುತ್ತಿತ್ತು. ಜಿಲ್ಲಾಧಿಕಾರಿ ಕಚೇರಿ ಎಂದರೆ ಬಂದುಹೋಗುವವರಿಗೆ ಉತ್ತಮ ಪರಿಸರದಂತೆ ಕಾಣಬೇಕು. ಕಚೇರಿ ಒಳಗಿಂತ ಹೊರ ಆವರಣ ಮೊದಲು ಒಪ್ಪಓರಣವಾಗಿರಬೇಕು ಎಂಬುದು ಹಿಂದಿನ ಜಿಲ್ಲಾಧಿಕಾರಿ ಪ್ರಕಾಶ್‌ರ ನಿಲವಾಗಿತ್ತು. ಪಾಲಿಕೆಯ ಆಡಳಿತಾಧಿಕಾರಿಯಾಗಿದ್ದು ಇದಕ್ಕೆ ವರದಾನವಾಯಿತು.
40 ಲಕ್ಷ ಪಾಲಿಕೆ ನಿಧಿ ಬಳಕೆ: ಜಿಲ್ಲಾಧಿಕಾರಿ ಆವರಣ ಸುಂದರಗೊಳಿಸಲು ಪಾಲಿಕೆಯ ನಿಧಿಯನ್ನು ಬಳಸಲಾಗುತ್ತಿದೆ. ರು. 40 ಲಕ್ಷ ವೆಚ್ಚದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಹೊಸ ಗೇಟು ಅಳವಡಿಕೆಯಾಗಲಿದೆ. ಈ ಗೇಟನ್ನು ಜಿಲ್ಲಾಧಿಕಾರಿ ಕಚೇರಿಗೆ ನೇರವಾಗಿ ಧಾವಿಸುವ ದಿಕ್ಕಿನಲ್ಲಿ ಹಾಕಲಾಗುತ್ತದೆ. ಇದುವರೆಗೆ ಗೇಟಿನಿಂದ ನೇರವಾಗಿ ತಹಸೀಲ್ದಾರ್ ಕಚೇರಿಗೆ ತೆರಳುವುದು ಸುಲಭವಿತ್ತು.
ಗೇಟಿನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ದಾರಿಯುದ್ದಕ್ಕೂ ರಸ್ತೆಗೆ ಹೋಲೋಬ್ಲಾಕ್ ಅಳವಡಿಸಲಾಗುತ್ತದೆ. ಈಗಾಗಲೇ ಎರಡು ಕಡೆ ಚರಂಡಿ ನಿರ್ಮಾಣ, ರಸ್ತೆ ವಿಭಾಜಕ ರಚಿಸಲಾಗುತ್ತಿದೆ. ಆವರಣವನ್ನು ಕಸಕಡ್ಡಿ, ದಿಣ್ಣೆಯಿಂದ ಮುಕ್ತಗೊಳಿಸಿದ್ದು, ಅಲ್ಲಿ ಪಾರ್ಕಿಂಗ್ ಸೌಲಭ್ಯ ಇರಲಿದೆ. ಸರ್ಕಾರಿ ಹಾಗೂ ಖಾಸಗಿ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್, ಆವರಣ ಸುತ್ತ ಪುಟ್ಟ ಉದ್ಯಾನ ತಲೆ ಎತ್ತಲಿದೆ. ಧರ್ಮರಾಜ್ ವಿನ್ಯಾಸ ಮಾಡಿದ್ದು, ನಿರ್ಮಿತಿ ಕೇಂದ್ರ ಕಾಮಗಾರಿ ಉಸ್ತುವಾರಿ ನಡೆಸುತ್ತಿದೆ. ಈಗಾಗಲೇ ಕಾಮಗಾರಿ ಶುರುವಾಗಿ ಒಂದು ವಾರ ಕಳೆದಿದೆ. ಇನ್ನು ಮೂರು ವಾರದಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ. ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಜಿಲ್ಲಾಧಿಕಾರಿ ಸಂಕೀರ್ಣಕ್ಕೆ ಹೊಸ ರೂಪ ಬರಲಿದೆ ಎನ್ನುತ್ತಾರೆ ನಿರ್ಮಿತಿ ಕೇಂದ್ರ ಎಂಜಿನಿಯರ್ ರವಿ.

-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.