ವಿದ್ಯಾರ್ಥಿಗಳ ನಿರ್ಮಾಣದ 'ಪಾಠಶಾಲೆ' ಸಾಕ್ಷ್ಯಚಿತ್ರ ಬಿಡುಗಡೆ
ಮಂಗಳೂರು: ಖಾಸಗಿ ಶಾಲೆಗಳ ಅಬ್ಬರದಲ್ಲಿ ಇತ್ತೀಚೆಗೆ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು, ಸರ್ಕಾರಿ ಶಾಲೆಗಳ ಸೌಲಭ್ಯ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಂತೆ ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಮಕ್ಕಳು ಸ್ವಚ್ಛಂದವಾಗಿ ಇಂಗ್ಲಿಷ್, ಕನ್ನಡ ಕಲಿಕೆಯ ಜತೆ ಪ್ರತಿಭೆಗಳನ್ನು ಅನಾವರಣಗೊಳಿಸುವ ಪ್ರತಿಭಾ ಕಾರಂಜಿಯಲ್ಲೂ ಭಾಗವಹಿಸುತ್ತಿದ್ದಾರೆ.
ಇವೆಲ್ಲಾ ಇತ್ತೀಚೆಗೆ ಸಂತ ಅಲೋಶಿಯಸ್ ಕಾಲೇಜಿನ ಟೆಲಿಸಭಾಂಗಣದಲ್ಲಿ ನಡೆದ ಸ್ಪಂದನ ಕಾರ್ಯಕ್ರಮದಲ್ಲಿ ಪಾತ್ವೇ ಟು ಹೈಯರ್ ಎಜುಕೇಶನ್ ವಿದ್ಯಾರ್ಥಿಗಳು ರಚಿಸಿದ 'ಪಾಠಶಾಲೆ' ಸಾಕ್ಷ್ಯಚಿತ್ರದಲ್ಲಿ ಕಂಡುಬಂದ ದೃಶ್ಯಗಳು.
ಈ ಸಂದರ್ಭ ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಸಂಯೋಜಕ ಎನ್. ಶಿವಪ್ರಕಾಶ್ ಮಾತನಾಡಿ, ಸರ್ಕಾರಿ ಶಾಲೆಯಿಂದ ಮಕ್ಕಳು ಕಡಿಮೆಯಾಗದಂತೆ ತಡೆಗಟ್ಟುವಲ್ಲಿ ಮತ್ತು ಅವರಿಗೆ ಉತ್ತಮ ಶಿಕ್ಷಣ ನೀಡಿ ಪ್ರೋತ್ಸಾಹಿಸುವಲ್ಲಿ ಶಿಕ್ಷಕ ಪಾತ್ರ ಹಿರಿದಾಗಿದೆ ಎಂದು ಶ್ಲಾಘಿಸಿದರು.
ನಾಡೋಜ ಪ್ರಶಸ್ತಿ ಪುರಸೃತ ಕೆ.ಪಿ. ರಾವ್ ಸರ್ಕಾರಿ ಶಾಲಾ ಶಿಕ್ಷಕರಿಗೆ ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕ ಪಾತ್ರದ ಕುರಿತು ಕಾರ್ಯಾಗಾರ ನಡೆಸಿದರು.
ಜಿಲ್ಲೆಯ ಜ್ಯೋತಿ, ಪರಪಾದೆ, ಮುಲ್ಲಕಾಡು, ಕಾವೂರು, ವಾಮಂಜೂರು ಸೇರಿದಂತೆ ಒಟ್ಟು 8 ಸರ್ಕಾರಿ ಶಾಲೆಯ ಸೌಲಭ್ಯಗಳು, ಶಿಕ್ಷಣ ವ್ಯವಸ್ಥೆ ಕುರಿತು ತಿಳಿಸಲಾಗಿದೆ. ಇದಕ್ಕಾಗಿ 6 ತಿಂಗಳಿನಿಂದ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಿದ್ದಾರೆ.
ಎಂಟು ಶಾಲೆಯಿಂದ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಟಿವಿ ಪರದೆಯಲ್ಲಿ ಮೂಡಿಬರುವ ವಾರ್ತಾವಾಚನ, ಚಿತ್ರಗಳು, ಮಾತನಾಡುವ ಶೈಲಿಯನ್ನು ತಿಳಿಸಿಕೊಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

