ದಕ್ಷಿಣ ಕನ್ನಡ

'ಒಗ್ಗಟ್ಟಿನ ದುಡಿಮೆಯಿಂದ ಸಮಾಜದ ಏಳ್ಗೆ'

Published On :

ಪುತ್ತೂರು: ಸಮಾಜದ ಏಳಿಗೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ದುಡಿದಾಗ ಮಾತ್ರ ಯಶಸ್ವಿ ಕಾಣಲು ಸಾಧ್ಯವಿದ್ದು, ಬಂಟ ಸಮಾಜದ ಮಂದಿ  ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿಯೂ ಮಂಚೂಣಿಯಲ್ಲಿ ನಿಲ್ಲುವ ಅವಕಾಶಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಪುತ್ತೂರು ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಅವರು ಹೇಳಿದರು.
ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ  ಭಾನುವಾರ ನಡೆದ ಸಂಘದ ಮಾಹಾಸಭೆಯಲ್ಲಿ  ಅವರು ಮಾತನಾಡಿದರು. ಬಂಟರ ಸಂಘ ಪ್ರಸ್ತುತ ರು. 21 ಲಕ್ಷ ಸಾಲದಲ್ಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡುವ ಉದ್ದೇಶವಿದೆ. ಭವನದ ಹೊರಭಾಗದಲ್ಲಿ ಇಂಟರ್‌ಲಾಕ್ ವ್ಯವಸ್ಥೆ ಮಾಡುವುದು ಹಾಗೂ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.  ನಮ್ಮೊಳಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಸಂಘದ ಅಭಿವೃದ್ಧಿಯ ದೃಷ್ಟಿಯಿಂದ ಅದನ್ನು ಜಗಳಿಗೆ ತರದೆ ತಮ್ಮೊಳಗೆ ಸೌಹಾರ್ಧಯುತವಾಗಿ ಮುಗಿಸುವ ಮೂಲಕ ಸಂಘವನ್ನು ಸಮಾಜದ ಶಕ್ತಿಯಾಗಿ ಬೆಳೆಸಲು ನಾವೆಲ್ಲರೂ ಶ್ರಮಿಸಬೇಕು ಎಂದು ಅವರು ತಿಳಿಸಿದರು.
ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ರೈ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಯೋಧರಾದ ಡಿ. ಅಮ್ಮಣ್ಣ ರೈ ಪಾಪೆಮಜಲು, ಪುರುಷೋತ್ತಮ ಶೆಟ್ಟಿ ಬನ್ನೂರು, ರಮಾನಾಥ ರೈ ಪುತ್ತೂರು, ಕರುಣಾಕರ ರೈ ನೆಲ್ಲಿಕಟ್ಟೆ, ಶ್ರೀನಿವಾಸ ರೈ ಆರ್ಯಾಪು, ಕಿಟ್ಟಣ್ಣ ಶೆಟ್ಟಿ ಮಾತೃಶೀ ನಿಲಯ, ನಿತ್ಯಾನಂದ ರೈ ಕಂಪ ಮಂಗಳೂರು, ಪುಷ್ಪರಾಜ ಶೆಟ್ಟಿ ಪಟ್ಟೆಮನೆ ಪಾಣಾಜೆ, ಜಗನ್ನಾಥ ರೈ ತೆಂಕಿಲ, ವಸಂತಕುಮಾರ್ ರೈ ಇರ್ದೆ, ಹರೀಶ್ ಶೆಟ್ಟಿ ಅಳಿಕೆ, ಹಾಗೂ ಗಿರೀಶ್ ಶೆಟ್ಟಿ ನಡುಬೈಲು ಸವಣೂರು ಅವರನ್ನು ಸನ್ಮಾನಿಸಲಾಯಿತು. ಉದಯಶಂಕರ ರೈ ಅವರ ಹೃದಯದ ಬೈಪಾಸ್ ಸರ್ಜರಿಗೆ ಹಾಗೂ 9 ಮಂದಿಯ ವಿವಾಹಕ್ಕೆ ಸಹಾಯಧನ ವಿತರಿಸಲಾಯಿತು.
ಬಂಟರ ಸಂಘದ ಕಾರ್ಯದರ್ಶಿ ಜೆ.ಕೆ ವಸಂತಕುಮಾರ್ ರೈ, ಕೋಶಾಧಿಕಾರಿಯಾಗಿ ಶಶಿಕುಮಾರ್ ರೈ ಬಾಳ್ಯೊಟ್ಟು, ಚಿಕ್ಕಪ್ಪ ನಾಯಕ್ ಅರಿಯಡ್ಕ, ಅರಂತನಡ್ಕ ಬಾಲಕೃಷ್ಣ ಶೆಟ್ಟಿ, ಲಕ್ಷ್ಮೀನಾರಾಯಣ ರೈ, ಸುಂದರ ರೈ ಸವಣೂರು, ಯಮುನಾ ಎಸ್ ರೈ, ದಯಾನಂದ ರೈ , ನಿರಂಜನ ರೈ ಮಠಂತಬೆಟ್ಟು ಮತ್ತಿತರರು ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.