ಮರಳು ಅಕ್ರಮ ಸಾಗಾಟ
ಬಂಟ್ವಾಳ: ಇಲ್ಲಿನ ತುಂಬೆ ನೇತ್ರಾವತಿ ನದಿಗೆ ನಿರ್ಮಾಣ ಹಂತದಲ್ಲಿರುವ ನೂತನ ವೆಂಟೆಡ್ ಡ್ಯಾಂಗೆ ಮರಳು ಸಾಗಿಸುವ ನೆಪದಲ್ಲಿ ತಲಪಾಡಿ ನೇತ್ರಾವತಿ ತೀರದಿಂದ ಯಾಂತ್ರೀಕೃತವಾಗಿ ಮರಳು ಅಕ್ರಮ ಸಾಗಟಕ್ಕೆ ಯತ್ನಿಸಿರುವುದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಶುಕ್ರವಾರ ಮುಂಜಾನೆ ಪತ್ತೆ ಹಚ್ಚಿದ್ದಾರೆ.
ಈ ಸಂಬಂಧವಾಗಿ ಮರಳು ಸಾಗಾಟಕ್ಕೆ ಬಳಸಲು ತಂದಿದ್ದ 2 ಟಿಪ್ಪರ್, ಡ್ರೆಜ್ಜಿಂಗ್ ಯಂತ್ರ, 3 ನಾಡ ದೋಣಿ ಹಾಗೂ 1 ಯಾಂತ್ರಿಕ ದೋಣಿಯನ್ನು ವಶಪಡಿಸಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆಯಲಾಗಿರುವ ಚುನಾವಣಾ ಕಂಟ್ರೋಲ್ ರೂಂಗೆ ಬಂದಿದ್ದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹರ್ಷಗುಪ್ತ ಅವರ ನಿರ್ದೇಶನದ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮೋಹನ್ ಅವರ ನೇತೃತ್ವದ ತಂಡ ಹಾಗೂ ಬಂಟ್ವಾಳ ನಗರ ಠಾಣೆಯ ಎಸೈ ನಾಗೇಶ್ ಮತ್ತು ಅವರ ಸಿಬ್ಬಂದಿ ಜಂಟಿಯಾಗಿ ದಾಳಿ ಕಾರ್ಯಚರಣೆ ನಡೆಸಿದ್ದಾರೆ.
ಮೈಸೂರಿನ ವಿಜಯಲಕ್ಷ್ಮೀ ಕನ್ಟ್ರಕ್ಷನ್ ಎಂಬ ಸಂಸ್ಥೆ ತುಂಬೆಯ ನೂತನ ವೆಂಟೆಡ್ ಡ್ಯಾಂ ನಿರ್ಮಾಣದ ಗುತ್ತಿಗೆಯನ್ನು ವಹಿಸಿದ್ದು, ಡ್ಯಾಂ ನಿರ್ಮಾಣಕ್ಕೆ ಮರಳು ಉಪಯೋಗಿಸಲು ಸಂಸ್ಥೆಯ ಮುಖ್ಯಸ್ಥರು ಕಾರ್ಮಿಕರಿಗೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಇದರ ನೆಪದಲ್ಲಿ ಅಕ್ರಮವಾಗಿ ಮರಳನ್ನು ಯಂತ್ರದ ಮೂಲಕ ಮರಳನ್ನು ಕೊರೆದು, ಟಿಪ್ಪರ್ ಲಾರಿಗಳಲ್ಲಿ ಸಾಗಿಸುವ ದಂಧೆಯನ್ನು ಸ್ಥಳೀಯ ಕೆಲವರು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

