ದಕ್ಷಿಣ ಕನ್ನಡ

ಪುರಾತತ್ವಜ್ಞ ಡಾ.ಅ. ಸುಂದರಗೆ ಗುರುರಾಜ ಭಟ್ ಪ್ರಶಸ್ತಿ ಪ್ರದಾನ

Published On :

ಉಡುಪಿ: ವಿದ್ವತ್ ಪ್ರಪಂಚದಲ್ಲಿ ಸಂಶೋಧನೆಗಳು ನಡೆದಾಗ ತಪ್ಪಾಗುವುದು ಸಹಜ. ಪ್ರತಿ ದಿನ ಸಂಶೋಧನೆಯಲ್ಲಿ ಬದಲಾವಣೆಗಳಾಗುತ್ತಿರುತ್ತವೆ. ಹಾಗೆಂದು ಒಮ್ಮೆ ನಡೆದ ಸಂಶೋಧನೆಗಳು ಮತ್ತೆ ಮುಂದುವರಿದಾಗ ಬದಲಾವಣೆಗಳನ್ನು ಕಂಡರೆ ಮೊದಲನೆಯವರು ಮಾಡಿದ ಸಂಶೋಧನೆಯನ್ನು ಅಲ್ಲಗೆಳೆಯುವುದು ಸಾಧ್ಯವಿಲ್ಲ ಎಂದು ಖ್ಯಾತ ಪುರಾತತ್ವಜ್ಞ ಡಾ.ಅ. ಸುಂದರ ಹೇಳಿದರು.
ಅವರು ಶನಿವಾರ ಇಲ್ಲಿನ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಡಾ. ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ 'ಡಾ. ಪಾದೂರು ಗುರುರಾಜ ಭಟ್ ಪ್ರಶಸ್ತಿ'ಯನ್ನು ಸ್ವೀಕರಿಸಿ ಮಾತನಾಡಿದರು.
ಹಳ್ಳಿಗಳಲ್ಲಿ ಕಂಡು ಹಿಡಿದ ಅನೇಕ ಸಂಶೋಧನೆಗಳನ್ನು ನಮ್ಮದು ಎಂದು ಕೆಲವರು ವಾದಿಸುತ್ತಾರೆ. ಆದರೆ, ಅವರು ಸಂಶೋಧನೆ ಮಾಡುವ ಮೊದಲು ಅಲ್ಲಿನ ಹಳ್ಳಿಯವರಿಗೆ ಅದು ತಿಳಿದಿರುತ್ತದೆ. ಅದರ ಐತಿಹಾಸಿಕ ವಿಚಾರಗಳು ಅದರಲ್ಲಿಯೂ ಕಾಲ ನಿಷ್ಕರ್ಷೆ ಅವರಿಗೆ ಗೊತ್ತಿರುವುದಿಲ್ಲ ಅಷ್ಟೇ ಎಂದು ಹೇಳಿದರು.
 ಕೇಂದ್ರ 14ನೇ ಹಣಕಾಸು ಆಯೋಗದ ಸದಸ್ಯ ಡಾ.ಎಂ. ಗೋವಿಂದ ರಾವ್ ಅವರು ರು. 50 ಸಾವಿರ ನಗದನ್ನು ಒಳಗೊಂಡಿರುವ ಈ ಪ್ರಶಸ್ತಿಯನ್ನು ಡಾ.ಅ. ಸುಂದರ ಅವರಿಗೆ ಪ್ರದಾನ ಮಾಡಿದರು. ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಎ. ಅನಂತಕಷ್ಣ ಅತಿಥಿಯಾಗಿದ್ದರು. ಬೆಂಗಳೂರಿನ ಐಎಸ್‌ಇಸಿ ಸಂಸ್ಥೆಯ ನಿರ್ದೇಶಕ ಡಾ.ಆರ್.ಎಸ್. ದೇಶಪಾಂಡ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿಯ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸುರೇಂದ್ರ ರಾವ್ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಡಾ. ಪಾದೂರು ಗುರುರಾಜ ಭಟ್ಟರ ಪತ್ನಿ ಪಾರ್ವತಿ ಅಮ್ಮ ಇದ್ದರು. ಟ್ರಸ್ಟಿನ ಅಧ್ಯಕ್ಷ ಪ್ರೊ. ಶ್ರೀಪತಿ ತಂತ್ರಿ ಸ್ವಾಗತಿಸಿ ಮಾತನಾಡಿದರು. ಪಾದೂರು ವಿಶ್ವನಾಥ ಭಟ್ ಪ್ರಶಸ್ತಿ ಪತ್ರ ವಾಚಿಸಿದರು. ಪರಶುರಾಮ ಭಟ್ ವಂದಿಸಿ, ಡಾ. ಶಾರ್ವರಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.