ಆಧಾರ್ ಕಾರ್ಡ್ಗೆ ನೂಕು ನುಗ್ಗಲು
ಮೂಲ್ಕಿ: ಇಲ್ಲಿನ ಸಮೀಪದ ಕಿಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಮೊಯಿಲೊಟ್ಟು ಶಾಲೆಯಲ್ಲಿ ಸ್ಥಳೀಯರಿಗೆ ಏಪ್ರಿಲ್ 13ರಿಂದ 15ರವರೆಗೆ ಆಧಾರ್ ಗುರುತಿನ ಕಾರ್ಡ್ ಪಡೆಯಲು ವ್ಯವಸ್ಥೆ ಮಾಡಿದ್ದು, ಶನಿವಾರ ಬೆಳಗ್ಗೆಯಿಂದ ಜನರು ಆಧಾರ್ ಗುರುತಿನ ಕಾರ್ಡ್ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆದರೆ, ಅಧಿಕಾರಿಗಳು ಮಧ್ಯಾಹ್ನದ ಬಳಿಕ ಬಂದಿದ್ದರಿಂದ ಬಳಿಕ ಗುರುತಿನ ಕಾರ್ಡ್ನ ನೋಂದಣಿ ಆರಂಭವಾಯಿತು. ಭಾನುವಾರ ರಜಾ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ನೂಕು ನುಗ್ಗಲು ಉಂಟಾಯಿತು. ಬಳಿಕ ಸ್ಥಳೀಯ ಪಂಚಾಯಿತಿ ಸದಸ್ಯ ಮನೋಹರ್ ಕೋಟ್ಯಾನ್ ಆಗಮಿಸಿ ಜನರು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಅಶ್ರಫ್ಗೆ ಫ್ರಾಂಕ್ಲಿನ್ ತಿರುಗೇಟು
ಮಂಗಳೂರು: ಜಿಲ್ಲೆಯ ನಗರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಛಿದ್ರ ಮಾಡಿ ನಿರಂತರ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎನ್. ಯೋಗಿಶ್ ಭಟ್ ಅವರ ಸಾಧನೆಯನ್ನು ಕಾಂಗ್ರೆಸ್ನವರಿಗೆ ಮೇ 5ರ ಚುನಾವಣೆಯಲ್ಲಿ ತೋರಿಸಲಾಗುವುದು ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಫ್ರಾಂಕ್ಲಿನ್ ಮೊಂತೆರೋ ಹೇಳಿದ್ದಾರೆ. ಯೋಗಿಶ್ ಭಟ್ ಅವರು 20 ವರ್ಷಗಳ ರಾಜಕೀಯ ಅವಧಿಯಲ್ಲಿ ಸಮಾಜ ಎಲ್ಲಾ ವರ್ಗಗಳ ಜನತೆಯೊಂದಿಗೆ ಬೆರೆತು, ರಾಜಕೀಯದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಬೆಳೆದು ಬಂದಿದ್ದಾರೆ. ಅವರ ಸಾಧನೆ ಕೇಳುವ ಬದಲು ಅಶ್ರಫ್ ತಾವು ನಡೆದುಕೊಂಡ ಬಗ್ಗೆ ಆಲೋಚಿಸಬೇಕಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

