ದಕ್ಷಿಣ ಕನ್ನಡ

ಮದ್ಯ ಅಕ್ರಮ ಸಂಗ್ರಹ: ಆರೋಪಿ ಸೆರೆ

Published On :

ಬೆಳ್ತಂಗಡಿ: ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿಟ್ಟ ಮದ್ಯವನ್ನು ಇಲ್ಲಿನ ಅಬಕಾರಿ ನಿರೀಕ್ಷಕರು ಪತ್ತೆ ಹಚ್ಚಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೆಳಾಲು ಗ್ರಾಮದ ಕೃಷ್ಣಪ್ಪ ಗೌಡ ತಮ್ಮ ಮನೆಯಲ್ಲಿ ಶನಿವಾರ, ಅಕ್ರಮವಾಗಿ ಮಾರಾಟದ ಉದ್ದೇಶಕ್ಕಾಗಿ 9.0 ಲೀಟರ್ ಮದ್ಯ ದಾಸ್ತಾನಿರಿಸಿದ್ದರು ಎಂದು ಆರೋಪಿಸಲಾಗಿದೆ.
ಬೆಳ್ತಂಗಡಿ ವಲಯದ ಅಬಕಾರಿ ನಿರೀಕ್ಷಕ ಅಶೋಕ್ ಎಚ್. ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ವಲಯದ ಅಬಕಾರಿ ಉಪ ನಿರೀಕ್ಷಕರಾದ ತುಕಾರಾಮ ಹಾಗೂ ರಕ್ಷಕರಾದ ಸೈಯದ್ ಶಬೀರ್, ಸಂಜೀವ ನಾಯ್ಕ ಮತ್ತು ವಾಹನ ಚಾಲಕರಾದ ವೀರೇಂದ್ರ ಭಾಗವಹಿಸಿದ್ದರು.
ತುಳು ಭಾಷೆ ಸೇರ್ಪಡೆಗೆ ರಾಜಕಾರಣಿಗಳ ಪ್ರೋತ್ಸಾಹ ಇಲ್ಲ: ಪುನರೂರು ಆರೋಪ
ಮಂಗಳೂರು: ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಕ್ರಿಯೆಯಲ್ಲಿ ರಾಜಕಾರಣಿಗಳು ನಾಟಕವಾಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಆರೋಪಿಸಿದ್ದಾರೆ.
ಭಾನುವಾರ, ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ 'ಬಿಸು ಪರ್ಬ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕುರಿತು ತುಳು ಅಕಾಡೆಮಿ ಸಾಕಷ್ಟು ಹೋರಾಟ ನಡೆಸಿದರೂ, ರಾಜಕಾರಣಿಗಳ ಪ್ರೋತ್ಸಾಹ ಇಲ್ಲದ ಪರಿಣಾಮ ದೆಹಲಿಯಲ್ಲಿ ಪ್ರಕ್ರಿಯೆ ನಿಧಾನವಾಗುತ್ತಿದೆ. ರಾಜಕಾರಣಿಗಳ ಹೋರಾಟದಲ್ಲಿ ವಸ್ತುನಿಷ್ಠತೆ ಇಲ್ಲ ಎಂದರು.
ತುಳುನಾಡನ್ನು ಕೈಗಾರಿಕೆಗಳು ಕಬಳಿಸುತ್ತಿದ್ದು, ಜನತೆ ಒಟ್ಟಾಗಿ ಇದರ ವಿರುದ್ಧ ಹೋರಾಟ ಮಾಡಬೇಕಾಗಿದೆ ಸರ್ಕಾರ ಜಿಲ್ಲೆಯ ಜನರನ್ನು ಶೋಷಿಸಿ ಕೈಗಾರಿಕೆ ನಿರ್ಮಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಪೆಟ್ರೋಲ್ ಸಂಗ್ರಹಣೆಗಾಗಿ ಪಾದೂರು ಬಳಿಯ 500 ಎಕರೆ ಜಾಗ ವಶಪಡಿಸುವ ಚಿಂತನೆ ನಡೆಯುತ್ತಿದೆ. ನದಿ, ಸಮುದ್ರಗಳಿಗೆ ಕೈಗಾರಿಕೆಯ ತ್ಯಾಜ್ಯ ಬಿಡುತ್ತಿದ್ದು, ವಿಷಕಾರಿ ಮೀನುಗಳ ಸೇವನೆಯಿಂದ ಜನತೆ ವಿವಿಧ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.
ರತ್ನವರ್ಮ ಪ್ರಶಸ್ತಿ: ತುಳುಕೂಟದ ವತಿಯಿಂದ ತುಳು ನಾಟಕಗಳಿಗೆ ನೀಡಲಾಗುವ ರತ್ನವರ್ಮ ಪ್ರಶಸ್ತಿಯನ್ನು ನವನೀತ್ ಶೆಟ್ಟಿ, ಉಜಿರೆ ಕೆ.ಜೆ. ಕೊಕ್ರಾಡಿ, ಹಳೆಯಂಗಡಿ ಶಕುಂತಳಾ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಪವಿತ್ರಾ ಕಿನ್ನಿಗೋಳಿ ಮತ್ತು ತಿತೀಕ್ಷಾ ಅವರನ್ನು ಗೌರವಿಸಲಾಯಿತು.
ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಘೋಷಕ ಮುದ್ದು ಮೂಡುಬೆಳ್ಳೆ, ಮಂಜುಳಾ ಶೆಟ್ಟಿ, ಜೆ. ತಿಮ್ಮಪ್ಪ ಪೂಜಾರಿ, ಅರವಿಂದ ಬಿಜೈ, ಹಿರಿಯ ಪತ್ರಕರ್ತ ಮಲಾರ್ ಜಯರಾಮ್ ರೈ, ಕುದ್ರಪ್ಪಾಡಿ ಜಗನ್ನಾಥ್ ಆಳ್ವ ಅವರು ಬಿಸು ಪರ್ಬ ಕುರಿತು ಪವನ ವಾಚಿಸಿದರು.
ತುಳುಕೂಟದ ಸದಸ್ಯರಾದ ಶಶಿಧರ್ ಶೆಟ್ಟಿ, ದಾಮೋದರ ನಿಸರ್ಗ, ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ಗಣೇಶ್ ಅಮೀನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.