ಸಂಪಾಜೆ-ಮಾಣಿ ಹೆದ್ದಾರಿ: ಬಸ್ಬೇ ಜಾಗ ಎಲ್ಲಿರೀ...?
-ಆತ್ಮಭೂಷಣ್
ಮಂಗಳೂರು: ಸಂಪಾಜೆ-ಮಾಣಿ ರಾಜ್ಯ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗುತ್ತಿರುವಂತೆಯೇ ಅವಶ್ಯಕವಾದ ಬಸ್ಬೇ ನಿರ್ಮಾಣವಾಗಿಲ್ಲ. ಬಸ್ಬೇ ನಿರ್ಮಾಣಕ್ಕೆ ಬೇಕಾದ ಅಗತ್ಯ ಸ್ಥಳಾವಕಾಶವನ್ನೂ ಕಾಮಗಾರಿ ವೇಳೆ ಒದಗಿಸಿಲ್ಲ. ಬಸ್ಬೇ ನಿರ್ಮಾಣಕ್ಕೂ ಮೊದಲೇ ಟೋಲ್ಗೇಟ್ ಸ್ಥಾಪಿಸಿ ಶುಲ್ಕ ಸಂಗ್ರಹಕ್ಕೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ(ಕೆಆರ್ಡಿಸಿಎಲ್) ಮುಂದಾಗಿದೆ.
28 ಕಡೆ ಬಸ್ಬೇ: ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿದಿಲ್ಲ, ಕಾಮಗಾರಿ ವೇಳೆ ರಸ್ತೆಯನ್ನು ಬೇಕಾದಷ್ಟು ಅಗಲಗೊಳಿಸಿಲ್ಲ. ಆದರೂ ರಸ್ತೆಯ ಇಕ್ಕೆಲಗಳಲ್ಲಿ ಬಸ್ಬೇ (ಬಸ್ ನಿಲುಗಡೆ ಜಾಗ) ನಿರ್ಮಿಸುವ ಗೋಜಿಗೆ ಮುಂದಾಗಿಲ್ಲ.
ಕೆಆರ್ಡಿಸಿಎಲ್ ಪ್ರಕಾರ ಸಂಪಾಜೆ-ಮಾಣಿ ಮಾರ್ಗದಲ್ಲಿ 28 ಬಸ್ಬೇ ನಿರ್ಮಿಸುವುದಾಗಿ ಹೇಳಿದೆ. ಇದರಲ್ಲಿ ರಸ್ತೆ ಎಡಭಾಗದಲ್ಲಿ 16 ಹಾಗೂ ಬಲಭಾಗದಲ್ಲಿ 12 ಬಸ್ಬೇ ನಿರ್ಮಿಸಲಿದೆ.
ಪ್ರಸ್ತುತ ಬೇಕಾಬಿಟ್ಟಿ ಡಾಂಬರೀಕರಣ ಮಾಡಿರುವುದರಿಂದ ಬಸ್ಬೇ ಸ್ಥಳ ಎಲ್ಲಿ ಎಂದು ಹುಡುಕಬೇಕಾಗಿದೆ. ಉದಾಹರಣೆಗೆ ಪೆರ್ನಾಜೆ ಬಳಿ ಇಳಿಜಾರು ತಿರುವಿನಲ್ಲಿ ರಸ್ತೆಯಂಚಿನ ವರೆಗೆ ಡಾಂಬರೀಕರಣ ಮಾಡಲಾಗಿದೆ. ಆದರೆ ಅದು ಬಸ್ಬೇ ನಿರ್ಮಿಸಲು ಪ್ರಶಸ್ತ ಸ್ಥಳ ಅಲ್ಲ. ಇಂಥ ಅವೈಜ್ಞಾನಿಕ ಕಾಮಗಾರಿ ಮಾಣಿ-ಸಂಪಾಜೆಯುದ್ದಕ್ಕೂ ಕಾಣಬಹುದು.
ಪುತ್ತೂರು ನಗರ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ಅಗಲ 9 ಮೀಟರ್, ಸುಳ್ಯ ನಗರದಲ್ಲಿ 11 ಮೀಟರ್ ಅಗಲ ಮತ್ತು ಸಂಪ್ಯದಿಂದ ಮುರ ವರೆಗೆ 4 ಪಥ ರಸ್ತೆಯಾಗಿ ಮಾರ್ಪಡಿಸಲಾಗುತ್ತಿದೆ.
ಮಳೆಗಾಲ ಮೊದಲು ಒಂದು ಹಂತದ ಕಾಮಗಾರಿ ಮುಗಿಯುವುದರಿಂದ ಬಸ್ಗಳು ಎಲ್ಲಿ ನಿಲುಗಡೆ ಮಾಡಬೇಕು ಎಂಬ ಪ್ರಶ್ನೆಗೆ ಕೆಆರ್ಡಿಸಿಎಲ್ ಉತ್ತರಿಸುತ್ತಿಲ್ಲ. ಕಾಮಗಾರಿ ವೇಳೆಯೇ ಬಸ್ಬೇ ಜಾಗ ಕಾದಿರಿಸುವ ಉಪಕ್ರಮಕ್ಕೆ ಮುಂದಾಗದಿರುವುದು ಯಕ್ಷಪ್ರಶ್ನೆ.
40.67 ಕೋಟಿ ಪಾವತಿ: ಮೈಸೂರು-ಕುಶಾಲನಗರ ವರೆಗಿನ ಪ್ರಥಮ ಹಂತದ ಕಾಮಗಾರಿ 2009 ಏ.30ಕ್ಕೆ ಮುಗಿದಿದೆ. ಕುಶಾಲನಗರ-ಸಂಪಾಜೆ ಕಾಮಗಾರಿ 2012 ಮಾ.31ಕ್ಕೆ ಮುಕ್ತಾಯಗೊಂಡಿದೆ. 3ನೇ ಹಂತದಲ್ಲಿ ಸಂಪಾಜೆ-ಮಾಣಿ ಕಾಮಗಾರಿ 2010 ಜ.27ರಿಂದ ಶುರುವಾಗಿದ್ದು, 2012 ಜೂ.20ರಂದು ಮುಗಿಯಬೇಕಿತ್ತು. ಈ ಅವಧಿಯನ್ನು ಮತ್ತೆ ವಿಸ್ತರಿಸುವಂತೆ ಗುತ್ತಿಗೆದಾರರು ಕೆಆರ್ಡಿಸಿಎಲ್ನ್ನು ಕೋರಿದ್ದಾರೆ. ಗುತ್ತಿಗೆದಾರರಿಗೆ ನಿಗಮ ಈ ವರೆಗೆ ರು. 40.67 ಕೋಟಿ ಪಾವತಿಸಿದೆ ಎಂದು ಪುತ್ತೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಡಿ.ಕೆ.ಭಟ್ಗೆ ಕೆಆರ್ಡಿಸಿಎಲ್ ತಿಳಿಸಿದೆ.
ಟೋಲ್ಗೆ ಸಿದ್ಧತೆ?: ಮೈಸೂರು-ಕುಶಾಲನಗರ ಕಾಮಗಾರಿ ಮುಗಿದು 4 ವರ್ಷ ಕಳೆದಿದೆ. ಅಲ್ಲಿ ಈವರೆಗೆ ಟೋಲ್ ಸಂಗ್ರಹ ಮಾಡಿಲ್ಲ. ಕುಶಾಲನಗರ-ಸಂಪಾಜೆ ರಸ್ತೆ ಕಾಮಗಾರಿ ಕಳೆದ ವರ್ಷವಷ್ಟೆ ಮುಗಿದಿದೆ. ಮಾಣಿ-ಸಂಪಾಜೆ ಕಾಮಗಾರಿ ಮಳೆಗಾಲಕ್ಕೆ ಮುನ್ನ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಹಾಗಿರುವಾಗ ಕನಿಷ್ಠ 4 ವರ್ಷ ವರೆಗೆ ಮೈಸೂರು-ಮಾಣಿ ರಾಜ್ಯ ಹೆದ್ದಾರಿಗೆ ಟೋಲ್ ಸಂಗ್ರಹ ಮಾಡಬಾರದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಡಿ.ಕೆ.ಭಟ್ ಕೆಆರ್ಡಿಸಿಎಲ್ಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಮೈಸೂರು-ಬಂಟ್ವಾಳ ಸೇರಿದಂತೆ 10 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ಗೇಟ್ ಸಂಗ್ರಹಕ್ಕೆ 2012 ನ.29ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಡಿ.ಕೆ.ಭಟ್ ಕೆಆರ್ಟಿಸಿಎಲ್ಗೆ ಪತ್ರ ಬರೆದಿದ್ದರು. ಆದರೆ ಕೆಆರ್ಡಿಸಿಎಲ್ ಅಧಿಕಾರಿಗಳು ಟೋಲ್ಗೇಟ್ ಸಂಗ್ರಹ ವಿಚಾರ ತಮಗೆ ಗೊತ್ತೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಹೊಸ ರಸ್ತೆ, ಸೇತುವೆ ರಚನೆಯಾದಲ್ಲಿ 60 ಕಿ.ಮೀ ಅಂತರದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

