ಕಾಂಗ್ರೆಸ್ ಬಂಡಾಯ ಸ್ಪರ್ಧೆಗೆ ಶೆಟ್ಟರಿಗೆ ಕಾರ್ಯಕರ್ತರ ಆಗ್ರಹ
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ವಿಜಯಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಆಕ್ರೋಶಿತ ಮಹಾನಗರ ಪಾಲಿಕೆಯ ನಾಲ್ವರು ಕಾಂಗ್ರೆಸ್ ಕಾರ್ಪೊರೇಟರ್ಗಳು, ಸುರತ್ಕಲ್ ವಿಭಾಗದ ಕಾಂಗ್ರೆಸ್ ಪದಾಧಿಕಾರಿಗಳು, ವಾರ್ಡ್ ಅಧ್ಯಕ್ಷರು, ಕಾರ್ಯಕರ್ತರು, ಜನಪ್ರತಿನಿಧಿಗಳು ಪ್ರತಿಭಟಿಸಿದರು. ಕೆಪಿಸಿಸಿ ಮತ್ತು ಎಐಸಿಸಿ ವೀಕ್ಷಕರು ಬಂದು ನಮ್ಮೆಲ್ಲರ ಅಭಿಪ್ರಾಯ ಕೇಳಿದ್ದರು. ನಾವೆಲ್ಲ ಒಕ್ಕೊರಲಿಂದ ವಿಜಯಕುಮಾರ್ ಶೆಟ್ಟಿ ಅವರ ಹೆಸರು ಹೇಳಿದ್ದೇವೆ. ವ್ಯತಿರಿಕ್ತವಾಗಿ ಮೊಯ್ದಿನ್ ಬಾವಗೆ ಟಿಕೆಟ್ ನೀಡಿರುವುದು ಸರಿಯಲ್ಲ. ಕಾರ್ಯಕರ್ತರ ಅಭಿಪ್ರಾಯಕ್ಕೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದರು.
ನೀತಿ ಸಂಹಿತೆ: 105 ಮಂದಿ ಬಂಧನ
ಮಂಡ್ಯ: ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಕಳೆದ ಮಾರ್ಚ್ 20 ರಿಂದ ಫೆ.14 ರವರೆಗೆ ಒಟ್ಟು 105 ವ್ಯಕ್ತಿಗಳನ್ನು ಬಂಧಿಸಿ, 134 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಒಟ್ಟು ಪ್ರಕರಣಗಳಲ್ಲಿ 1293.445 ಲೀಟರ್ ಮದ್ಯ, 374.450 ಲೀಟರ ಬಿಯರ್ ಹಾಗೂ 8.640 ಲೀಟರ್ ವೈನ್ ಹಾಗೂ ಒಂದು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಡ್ಯ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಹೆಚ್.ಎನ್. ಆನಂದ್ ತಿಳಿಸಿದ್ದಾರೆ.
1.980 ಲೀಟರ್ ಮದ್ಯ ವಶ
ಮಂಡ್ಯ: ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಕರಲಕಟ್ಟೆ ಗೇಟ್ ಬಳಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಪೆಟ್ಟಿಗೆ ಅಂಗಡಿಯಲ್ಲಿ ದಾಳಿ ನಡೆಸಿ 1.980 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಮೊಕದ್ದಮೆ ದಾಖಲಿಸಲಾಗಿದೆ. ಮಳವಳ್ಳಿ ತಾಲೂಕಿನ ಟಿ.ಕೆ. ಹಳ್ಳಿ ಗ್ರಾಮ ಪಂಚಾಯ್ತಿ ಚಿಲ್ಲಾಪುರ ಕೃಷ್ಣಪ್ಪ ಎಂಬುವರಿಗೆ ಸೇರಿದ ಎಸ್.ಎಲ್.ವಿ. ಬಿಂದಾಸ್ ಪ್ಯಾರಡೈಸ್ ಫ್ಯಾಮಿಲಿ ದಾಬಾದ ಮೇಲೆ ದಾಳಿ ಮಾಡಿ 900 ಲೀ. ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಮೊಕದ್ದಮೆ ದಾಖಲಿಸಲಾಗಿದೆ. ಮಂಡ್ಯ ಕಾವೇರಿ ನಗರ ಚಂದ್ರದರ್ಶನ ಕಲ್ಯಾಣ ಮಂಟಪದ ಹಿಂಭಾಗದ ಚಂದ್ರು ಎಂಬುವರಿಗೆ ಸೇರಿದ ಪೆಟ್ಟಿಗೆ ಅಂಗಡಿ ಮೇಲೆ ದಾಳಿ ಮಾಡಿ 1.260 ಲೀ. ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
6 ಲಕ್ಷ ನಗದು ವಶ
ಟಿ. ನರಸೀಪುರ: ಹನೂರಿನಿಂದ ಮೈಸೂರಿಗೆ ವಾಹನವೊಂದರಲ್ಲಿ ಸಾಗಿಸಲಾಗುತ್ತಿದ್ದ 5.99 ಲಕ್ಷಗಳನ್ನು ಚುನಾವಣಾ ಜಾಗೃತ ದಳದ ಅಧಿಕಾರಿ ರವೀಂದ್ರ ಮತ್ತು ತಂಡದವರು ವಶಪಡಿಸಿಕೊಂಡಿದ್ದಾರೆ. ಆದರೆ, ವಾಹನದಲ್ಲಿ ಹಣ ಸಾಗಣಿಕೆಗೆ ಸಂಬಂಧಿಸಿದಂತೆ ಯಾವುದೇ ಪೂರಕ ದಾಖಲಾತಿ ದೊರೆತಿಲ್ಲ.
ಜಾತೀಯತೆ ಇಂದಿಗೂ ಜೀವಂತ: ವಿಷಾದ
ಮೈಸೂರು: ಇಂದಿಗೂ ದೇಶದಲ್ಲಿ ಜಾತೀಯತೆ ಹಾಗೂ ಅಸ್ಪೃಶ್ಯತೆ ಜೀವಂತವಾಗಿದೆ ಎಂದು ಚಿಂತಕ ಡಾ. ಆನಂದ ತೇಲ್ತುಂಬ್ಡೆ ವಿಷಾದಿಸಿದರು. ಸೋಮವಾರ ಡಾ.ಬಿ.ಆರ್ ಅಂಬೇಡ್ಕರ್ ಅವರ 122ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಶೇ.70ರಷ್ಟು ಗ್ರಾಮಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಕಾಣಬಹುದಾಗಿದೆ. ಅಂತೆಯೇ ನಗರ ಪ್ರದೇಶದ ವಿದ್ಯಾವಂತರಲ್ಲೂ ಜಾತೀಯತೆ ಹೆಚ್ಚಾಗುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

