ರಿಯಲ್ ಎಸ್ಟೇಟ್ ಉದ್ಯಮಿ ಅಸಹಜ ಸಾವು
ಮಂಗಳೂರು: ನೀರುಮಾರ್ಗ ಪಡು ಬೊಂಡಂತಿಲ ಬಳಿ ರಿಯಲ್ ಎಸ್ಟೇಟ್ ಉದ್ಯಮಿ ಅಸಹಜವಾಗಿ ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಕೆಳರಾಯ್ ನಿವಾಸಿ ಕೃಷ್ಣಪ್ಪ ಭಂಡಾರಿ (56) ಮೃತಪಟ್ಟವರು. ಶವದ ಬಳಿ ಸಾರಾಯಿ ಬಾಟಲಿ ಜತೆಗೆ ವಿಷದ ಬಾಟಲಿ ಪತ್ತೆಯಾಗಿದೆ. ಮರಣೋತ್ತರ ತನಿಖೆಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಯಿಂದ ಕೃಷ್ಣಪ್ಪರ ಸಾವಿಗೆ ಕಾರಣ ತಿಳಿಯಲಿದೆ.
ಕಾರು ಸ್ವಲ್ಪದೂರದಲ್ಲಿತ್ತು. ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಮನೆಯವರು ಒಪ್ಪುತ್ತಿಲ್ಲ. ಕೃಷ್ಣಪ್ಪರ ಗೆಳೆಯಲು ಲಕ್ಷಾಂತರ ರೂ. ಸಾಲ ಪಡೆದಿದ್ದಾರೆ. ಯಾರೊ ಆಗದವರು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎನ್ನುವುದು ಮನೆಯವರು ಆರೋಪ.
ಭಾನುವಾರ ಸಂಜೆ ಕೃಷ್ಣಪ್ಪರು ಮನೆಗೆ ಬಾರದೆ ಇದ್ದಾಗ ಆತಂಕ ಶುರುವಾಗಿತ್ತು. ಭಾನುವಾರ ಸಂಜೆ ಕರೆ ಬಂದ ತಕ್ಷಣ ಬೊಲೆರೋ ಕಾರ್ನಲ್ಲಿ ಹೋದವರು ವಾಪಸ್ ಬಂದಿಲ್ಲ. ಯಾರು ಕರೆ ಮಾಡಿದ್ದಾರೆ ಎಂದು ತಿಳಿದಿಲ್ಲ ಎನ್ನುತ್ತಾರೆ ಸಂಬಂಧಿಕರು. ಮರಣೋತ್ತರ ವರದಿ ಮತ್ತು ಪೊಲೀಸರ ತನಿಖೆಯಿಂದ ಸಾವಿನ ಸತ್ಯ ಹೊರಬರಲಿದೆ. ಉಡುಪಿ ಮತ್ತು ಮಂಗಳೂರಲ್ಲಿ ಜಾಗ ವ್ಯವಹಾರ ನಡೆಸುತ್ತಿದ್ದರು. 6 ವರ್ಷಗಳ ಹಿಂದೆ ಉಜಿರೆಯಲ್ಲಿದ್ದ ತನ್ನ ತರಕಾರಿ ಮಳಿಗೆ ಮತ್ತು ಸೆಲೂನ್ 1.25 ಲಕ್ಷಕ್ಕೆ ಮಾರಾಟ ಮಾಡಿದ ಬಳಿಕ ರಿಯಲ್ ಎಸ್ಟೇಟ್ ದಂದೆಗೆ ಇಳಿದಿದ್ದರು. ಈಗ ಸುಮಾರು 1.5 ಕೋಟಿ ಜಾಗ ಮಾರಾಟ ವ್ಯಹವಾರದಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ.
ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

