ದಕ್ಷಿಣ ಕನ್ನಡ

ವಿಜಯಕುಮಾರ್ ಶೆಟ್ಟಿ ಬಂಡಾಯ ಸ್ಪರ್ಧೆ?

Published On :

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ವಿಜಯಕುಮಾರ್ ಶೆಟ್ಟಿ ನಿರ್ಧರಿಸಿದ್ದಾರೆ.
 ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಪಕ್ಷೇತರನಾಗಿ ಎರಡು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಕೊನೆ ಹಂತದಲ್ಲಿ ಆದರೂ ಟಿಕೆಟ್ ನೀಡಬಹುದು ಎಂಬ ಆಸೆಯಿಂದ ಶೆಟ್ಟರು ಈ ನಡೆ ಇಟ್ಟಿದ್ದಾರೆ. ಎಐಸಿಸಿ ವೀಕ್ಷಕ ಕೇರಳ ಇಡುಕ್ಕಿ ಸಂಸದ ಪಿ.ಟಿ. ಥಾಮಸ್ ವಿಜಯ ಕುಮಾರ್ ಶೆಟ್ಟಿ ಮನವೊಲಿಸಲು ಮಾತುಕತೆ ನಡೆಸಿದ್ದಾರೆ. ಶೆಟ್ಟರ ರಾಜಕೀಯ ಗುರು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕೂಡಾ ದಿಲ್ಲಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದಾರೆ.  
 'ನನಗೆ ಅನ್ಯಾಯ ಆಗಿದೆ. ಸುರತ್ಕಲ್ ವಿಭಾಗ ಕಾಂಗ್ರೆಸ್ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಸಹಿತ ಎಲ್ಲರೂ ನನ್ನ ಜತೆಯಲ್ಲಿಯೇ ಇದ್ದಾರೆ. ಅವರ ಇಚ್ಚೆಯಂತೆ ನಾನು ಕಾಂಗ್ರೆಸಿಗನಾಗಿಯೇ ಸ್ಪರ್ಧಿಸುತ್ತೇನೆ' ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಮೂರು ಬಾರಿಯೂ ಮೂರು ತಂಡದಲ್ಲಿ ಪ್ರತ್ಯೇಕವಾಗಿ ಬಂದ ವೀಕ್ಷಕರು ಪ್ರಚಾರ ಕಾರ್ಯ ಶುರು ಮಾಡು ಎಂದು ಹೇಳಿದ್ದರು. ಇಷ್ಟಿದ್ದರೂ ಟಿಕೆಟ್ ತಪ್ಪಿಸಿದರು. ಸ್ಥಳೀಯರು ಎಲ್ಲರೂ ನನ್ನನ್ನು ಬೆಂಬಲಿಸಿದ್ದಾರೆ. ಹೀಗಾಗಿ ಸ್ಪರ್ಧೆ ಖಚಿತ ಎಂದು ಹೇಳಿದ್ದಾರೆ.

ಮುಸ್ಲಿಂ ಅಭ್ಯರ್ಥಿ ಬೆಂಬಲಿಸದ
ಮುಸ್ಲಿಂ ಸಂಘಟನೆ!
ಎಲ್ಲೆಡೆ ಜಾತ್ಯತೀತವಾದ ಪಕ್ಷವಾದ ಕಾಂಗ್ರೆಸ್‌ನ್ನು ಮುಸ್ಲಿಂ ಸಂಘಟನೆ ಬೆಂಬಲಿಸುತ್ತವೆ. ಆದರೆ ಸುರತ್ಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್, ವ್ಯಾಪಾರಿಗೆ ಟಿಕೆಟ್ ನೀಡಿದ್ದು, ಅಲ್ಲಿ ಜಾತ್ಯತೀತ ವ್ಯಕ್ತಿ ಸ್ಪರ್ಧಿಸಿದರೆ ಅವರನ್ನು ಬೆಂಬಲಿಸುವುದಾಗಿಡಿಕೆ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ಎಂಬ ಸಂಘಟನೆ ಪತ್ರಿಕಾ ಪ್ರಕಟಣೆ ನೀಡಿದೆ.  ಸುರತ್ಕಲ್‌ನಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರೂ ಈ ಸಂಘಟನೆ ವಿರೋಧಿಸಿದ್ದು ಅಚ್ಚರಿ ಮೂಡಿಸಿದೆ.  
ಬಾವ ನಾಮಪತ್ರ: ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊಯ್ದಿನ್ ಬಾವ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.