ರಾಮೋತ್ಸವಕ್ಕೆ ಭವ್ಯ ಶ್ರೀರಾಮಂದಿರ ಪ್ರತಿಕೃತಿ ನಿರ್ಮಾಣ
ಮಂಗಳೂರು: ನಗರದ ಕೇಂದ್ರ ಮೈದಾನದಲ್ಲಿ ಏ.19ರಿಂದ 21ರವರೆಗೆ ನಡೆಯುವ ಶ್ರೀರಾಮೋತ್ಸವಕ್ಕೆ ಭವ್ಯ ರಾಮಮಂದಿರ ನಿರ್ಮಾಣಗೊಂಡಿದೆ.
ಗರ್ಭಗುಡಿ, ತಿರ್ಥ ಮಂಟಪ, ಪೌಳಿ, ಬಾವಿ ಸಹಿತ ಭವ್ಯ ರಾಮಮಂದಿರ ನಿರ್ಮಾಣಗೊಂಡಿದೆ. ಪರಂಪರಾಗತ ದೇವಸ್ಥಾನದ ಶೈಲಿಯಲ್ಲಿ ಸುವರ್ಣ ಆರ್ಟ್ಸ್ ನಿರ್ಮಿಸಿದೆ ಎಂದು ವಿಹಿಂಪ ಪ್ರಾಂತ ಸಂಘಟನೆ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಮಂಡಳಿ, ದುರ್ಗಾವಾಹಿನಿ ಮತಶ್ರೀರಾಮೋತ್ಸವ ಸಮಿತಿ ಕಾರ್ಯಕ್ರಮ ಆಯೋಜಿಸಿದೆ. ಯಕ್ಷಗಾನ ಶೈಲಿಯಲ್ಲಿ ನಿರ್ಮಿಸಲಾದ ಸುಮಾರು 25 ಅಡಿ ಉದ್ದದ ರಾವಣ ಪ್ರತಿಕೃತಿಯನ್ನು ರಾಮೋತ್ಸವ ಕೊನೆ ದಿನ ದಹಿಸಲಾಗುವುದು. ದಿಲ್ಲಿ ರಾಮಲೀಲಾ ಮಾದರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. 25 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುವರು.
ಭಜನೆ ಸ್ಪರ್ಧೆ: ಭಜನೆ ಸ್ಪರ್ಧೆಯಲ್ಲಿ 18 ತಂಡಗಳು ಭಾಗವಹಿಸುತ್ತಿದ್ದು, ಎಲ್ಲ ತಂಡಗಳಿಗೆ 1 ಸಾವಿರ ಪ್ರೋತ್ಸಾಹಕ ಬಹುಮಾವಿದೆ. ವಿಜೇತ ತಂಡಕ್ಕೆ ಕ್ರಮವಾಗಿ 10, 5, 3 ಸಾವಿರ ನೀಡಲಾಗುವುದು. ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ ಸ್ಪರ್ಧೆ ಆರಂಭಗೊಳ್ಳಲಿದೆ.
ಪ್ರತಿದಿನ ಸಾಮೂಹಿಕ ವಿಜಯ ಮಹಾ ಮಂತ್ರಪಠಣ ನಡೆಯಲಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಿರಂತರವಾಗಿ ಜರಗಲಿದೆ. ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿಗಳು ಆಶೀರ್ವಚನ ನೀಡುವರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮೋತ್ಸವ ಸಮಿತಿ ಅಧ್ಯಕ್ಷ ಪುಷ್ಪರಾಜ್ ಜೈನ್, ಗೌರವ ಸಲಹೆಗಾರ ಡಾ.ಪಿ.ಅನಂತಕೃಷ್ಣ ಭಟ್, ಪ್ರಧಾನ ಕಾರ್ಯದರ್ಶಿ ಶಿವಾನಂದ ಮೆಂಡನ್, ಕಾರ್ಯದರ್ಶಿ ಗೋಪಾಲ ಕುತ್ತಾರ್, ಕೋಶಾಧಿಕಾರಿ ಜಿತೇಂದ್ರ ಎಸ್.ಕೊಟ್ಟಾರಿ, ಹಣಕಾಸು ಸಮಿತಿ ಸಂಚಾಲಕ ಜಗದೀಶ ಶೇಣವ, ಪ್ರಚಾರ ಸಮಿತಿ ಸಂಚಾಲಕ ಶರಣ್ ಪಂಪ್ವೆಲ್ ಇದ್ದರು.
---
ಪಕ್ಷೇತರ ಅಭ್ಯರ್ಥಿಗೆ ಎರಡು ಕಡೆ ಮತ !
ಮಂಗಳೂರು: ಪಕ್ಷೇತರ ಅಭ್ಯರ್ಥಿ ಕಬೀರ್ ಉಳ್ಳಾಲ ಹರೇಕಳ ಪಾವೂರು ಮತ್ತು ಉಳ್ಳಾಲ ಪಂಚಾಯ್ತಿ ವ್ಯಾಪ್ತಿಯಲ್ಲಿ ಎರಡು ಕಡೆ ಮತದಾರ ಪಟ್ಟಿಯಲ್ಲಿ ಹೆಸರಿದೆ.
ಹರೇಕಳ ಮತದಾರ ಪಟ್ಟಿಯಿಂದ ಹೆಸರು ತೆಗೆಯುವಂತೆ ಅರ್ಜಿ ಸಲ್ಲಿಸಿದ್ದರೂ ಪಟ್ಟಿಯಿಂದ ಹೆಸರು ತೆಗೆಯದೆ ಇರುವುದು ಕಬೀರ್ಗೆ ತೊಡಕಾಗಿ ಪರಿಣಮಿಸಿದೆ. ಎರಡು ಮತಾದರ ಪಟ್ಟಿಯಲ್ಲಿರುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಕಬೀರ್ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

