ಅನ್ಯಕೋಮಿನ ಮಹಿಳೆಗೆ ಕಾರು ಡಿಕ್ಕಿ: ಉಳ್ಳಾಲದಲ್ಲಿ ಲಾಠಿ ಪ್ರಹಾರ
ಕ.ಪ್ರ.ವಾರ್ತೆ ,ಮಂಗಳವಾರ ,ಏ.21
ಉಳ್ಳಾಲ ಬೀಚ್ಗೆ ಬಂದಿದ್ದ ಭಿನ್ನ ಕೋಮಿನ ಮಹಿಳೆಗೆ ಕಾರು ಡಿಕ್ಕಿಯೊಡೆದ ಪರಿಮಾಮ, ಅದನ್ನು ಪ್ರಶ್ನಿಸಿ ಘರ್ಷಣೆ ಸಂಭವಿಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಮಾಸ್ತಿಕಟ್ಟೆ ನಿವಾಸಿ ಗಣೇಶ್ ಎಂಬವರು ತಮ್ಮ ಇಂಡಿಕಾ ಕಾರಿನಲ್ಲಿ ಮೊಗವೀರ ಪಟ್ಣ ಬಳಿ ಬೀಚಿಗೆ ಬಾಡಿಗೆಗೆ ಬಂದಿದ್ದರು. ವಾಪಸ್ ಹೋಗುತ್ತಿದ್ದಾಗ ಮದನಿ ನಗರದ ಖತೀಜಮ್ಮ(62)ಎಂಬವರಿಗೆ ಕಾರು ಡಿಕ್ಕಿ ಹೊಡೆದಿತ್ತು. ಇದರಿಂದ ಆಕ್ರೋಶಗೊಂಡ ಯುವಕರ ತಂಡ ಗಣೇಶ್ಗೆ ಹಲ್ಲೆ ನಡೆಸಿತ್ತು. ಎರಡೂ ಕೋಮಿನ ತಂಡ ಉಳ್ಳಾಲ ಪೊಲೀಸ್ ಠಾಣೆ ಎದುರು ಜಮಾಯಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿತ್ತು. ಕೆಲವರು ಪ್ರತಿಭಟನೆ ನಡೆಸಿದಾಗ ಪೊಲೀಸರು ಚಿತ್ರೀಕರಿಸಿದ್ದನ್ನು ವಿರೋಧಿಸಿ ಇಬ್ಬರು ಯುವಕರು ಕ್ಯಾಮರಾ ಎಳೆದು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿತು. ಸ್ಥಳದಲ್ಲಿ ಉದ್ವಿಗ್ನತೆ ನೆಲೆಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ತಂಡವನ್ನು ಚದುರಿಸಿದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿ ಬೆಳ್ಮದ ಮುಸ್ತಾಫ ಹಾಗೂ ಹನೀಫ್ ಎಂಬಿಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಸ್ಸಿಗೆ ಕಲ್ಲು ತೂರಾಟ: ಇದೇ ಸಂದರ್ಭ ಬಳಸಿಕೊಂಡ ದುಷ್ಕರ್ಮಿಗಳು ಮುಕ್ಕಚೇರಿಯಲ್ಲಿ 44 ನಂಬರಿನ ಅಶ್ವಿನಿ ಟ್ರಾವೆಲ್ಸ್ ಬಸ್ಸಿಗೆ ಕಲ್ಲೆಸೆದು ಹಾನಿ ಮಾಡಿದ್ದಾರೆ. ಉಳ್ಳಾಲ ಭಗವತೀ ನಗರದಲ್ಲಿ ಗುಂಪೊಂದು ಶ್ರೀದುರ್ಗಾ ಟ್ರಾವೆಲ್ಸ್ ಬಸ್ಸಿಗೆ ಕಲ್ಲೆಸೆದು ಹಾನಿ ಮಾಡಿದೆ. ಘಟನೆಯಲ್ಲಿ ಬಸ್ಸಿನ ಚಾಲಕರಿಗೆ ಹಾಗೂ ಮಹಿಳೆಯರಿಬ್ಬರಿಗೆ ಗಾಯವಾಗಿದೆ. ಗಾಯಾಳು ಖತೀಜಮ್ಮ, ಕಾರು ಚಾಲಕ ಗಣೇಶ್, ಹಬೀಬ್, ಬಸ್ ಚಾಲಕರಾದ ಲೋಕನಾಥ ಮತ್ತು ಇಕ್ಬಾಲ್ರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

