ಬತ್ತದ ನಾಟಿಗೆ ಮಾನವ ಚಾಲಿತ ಉಪಯುಕ್ತ ಯಂತ್ರ
ಬೆಳ್ತಂಗಡಿ: ಕರಾವಳಿಯಲ್ಲಿ ಹೆಚ್ಚುತ್ತಿರುವ ಕೃಷಿ ಕೂಲಿ ಕಾರ್ಮಿಕರ ಕೊರತೆ ಹಾಗೂ ಹೆಚ್ಚುತ್ತಿರುವ ಕೃಷಿ ಉತ್ಪಾದನಾ ವೆಚ್ಚಗಳಿಗೆ ಪರಿಹಾರೋಪಾಯವಾಗಿ ಬತ್ತದ ಕೃಷಿಯಲ್ಲಿ ಯಂತ್ರದ ಬಳಕೆ ಮಾಡುವುದು ಅನಿವಾರ್ಯವಾಗಿದೆ. ಬತ್ತದ ನಾಟಿಯಲ್ಲಿ ಪ್ರಸ್ತುತ ಉಪಯೋಗಿಸುವ ಇಂಧನ ಚಾಲಿತ ನಾಲ್ಕು ಹಾಗೂ ಎಂಟು ಸಾಲಿನ ನಾಟಿ ಯಂತ್ರದ ಜೊತೆಯಲ್ಲಿ ಸಣ್ಣ ಹಿಡುವಳಿಗೆ ಉಪಯುಕ್ತವಾಗುವ ಸಣ್ಣ ಯಂತ್ರಗಳ ಅವಶ್ಯಕತೆ ರೈತರ ಬೇಡಿಕೆಯಾಗಿದೆ.
ಮಾನವ ಚಾಲಿತ ಬತ್ತದ ನಾಟಿ ಯಂತ್ರ ಕೈಯಿಂದಲೇ ಎಳೆಯುವ ಮಾದರಿಯ ಬತ್ತದ ನಾಟಿಯಂತ್ರವಾಗಿದ್ದು ಈವರೆಗೆ ಸೆಲ್ಕೊ ಫೌಂಡೇಶನ್, ಉಜಿರೆ ಕೈಗೊಂಡ ಪ್ರಾತ್ಯಕ್ಷಿಕೆಗಳಿಂದ ಕಂಡುಕೊಂಡಂತೆ ಉತ್ತಮವಾಗಿ ಸಿದ್ಧಗೊಳಿಸಿದ ಗದ್ದೆಗಳಲ್ಲಿ ಎಕರೆ ಒಂದಕ್ಕೆ 8 ಆಳುಗಳು ಮಾಡಬಹುದಾದ ನಾಟಿ ಕೆಲಸವನ್ನು ಈ ಮಾನವ ಚಾಲಿತ ಬತ್ತದ ನಾಟಿ ಯಂತ್ರ ಉಪಯೋಗಿಸಿ 2 ಆಳುಗಳು ಸುಲಭವಾಗಿ ಮಾಡಬಹುದು.
ಒಂದೂವರೆ ಪಟ್ಟು ವೇಗ: ಸರಿಯಾಗಿ ಸಿದ್ಧಗೊಳಿಸದ ಗದ್ದೆಗಳಲ್ಲಿ ಅಂದರೆ ಮಣ್ಣಿನಲ್ಲಿ ಹೆಂಟೆಗಳು, ಬೇರುಗಳು ಹೆಚ್ಚಾಗಿದ್ದು ಕೆಸರು ಬೇಕಾದಷ್ಟು ಆಳವಾಗಿಲ್ಲದಿದ್ದಲ್ಲಿ ಮಾನವ ಚಾಲಿತ ಬತ್ತದ ನಾಟಿ ಯಂತ್ರ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ನೀಡದೇ ಇರಬಹುದು. ಆದರೂ ಇಂತಹ ಬತ್ತದ ಗದ್ದೆಗಳಲ್ಲಿಯೂ ಈ ಯಂತ್ರ ಎಕರೆ ಒಂದಕ್ಕೆ ಕೈಯಿಂದ ನಾಟಿ ಮಾಡುವುದಕ್ಕಿಂತ ಒಂದೂವರೆ ಪಟ್ಟು ವೇಗವಾಗಿ ನಾಟಿ ಕೆಲಸವನ್ನು ಮಾಡುತ್ತದೆ.
ಬೆಳಾಲಿನ ಶರ್ಮರ ಗದ್ದೆಯಲ್ಲಿ ಮತ್ತು ಮಲೆಜೋಡಿಯ ಡೊಂಬನ್ನ ಅವರ ಗದ್ದೆಯಲ್ಲಿ ಪ್ರಾಯೋಗಿಕವಾಗಿ ಮಾನವ ಚಾಲಿತ ಬತ್ತದ ಯಂತ್ರದ ಮೂಲಕ ಉಳುಮೆ ಮಾಡಿದಾಗ ಕಂಡು ಬಂದುದೇನೆಂದರೆ ಸಾಮಾನ್ಯ ಪದ್ಧತಿಯಲ್ಲಿ ಒಬ್ಬ ವ್ಯಕ್ತಿ ಒಂದು ನಿಮಿಷಕ್ಕೆ 10 ಚದರ ಅಡಿ ಉಳುಮೆ ಮಾಡಿದರೆ ಮಾನವ ಚಾಲಿತ ಬತ್ತದ ನಾಟಿ ಯಂತ್ರದ ಮೂಲಕ ಒಬ್ಬ ವ್ಯಕ್ತಿ ಒಂದು ನಿಮಿಷಕ್ಕೆ 26ರಿಂದ 34 ಚದರ ಅಡಿ ಉಳುಮೆ ಮಾಡಬಹುದು.
ಈ ಯಂತ್ರದ ಮೂಲಕ 2 ಆಳುಗಳು ಸರಿಯಾಗಿ ಸಿದ್ಧಗೊಳಿಸದ ಗದ್ದೆಗಳಲ್ಲಿಯೂ ದಿನವೊಂದಕ್ಕೆ ಸುಮಾರು ಒಂದು ಎಕರೆಯಷ್ಟು ನಾಟಿ ಮಾಡಬಹುದು.
ಈ ಬರುವ ಸುಗ್ಗಿಯ ಸಮಯದಲ್ಲಿ ಈ ಯಂತ್ರದ ಪ್ರಯೋಜನ ಪಡೆಯಲು ಸೆಲ್ಕೊ ಫೌಂಡೇಶನ್, ಉಜಿರೆ ತಮ್ಮ ಸಹಾಯ ಹಸ್ತ ನೀಡುತ್ತಿದೆ. ಆಸಕ್ತ ರೈತರು ಈ ಯಂತ್ರವನ್ನು ನಾಟಿ ಕೆಲಸಕ್ಕೆ ಉಪಯೋಗಿಸಿ ಸಂಸ್ಥೆಗೆ ಹಿಂದಿರುಗಿಸಬಹುದು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬಹುದಾದ ವಿಳಾಸ: ರವಿರಾಜ್, ಕಾರ್ಯಕ್ರಮ ಸಂಯೋಜಕರು, ಸೆಲ್ಕೊ ಫೌಂಡೇಶನ್, ಎಸ್.ಡಿ.ಎಮ್. ಐ.ಟಿ. 4ನೇ ಮಹಡಿ, ಉಜಿರೆ, ದ. ಕ. ಫೋನ್, 9900074425, 9379404344 .
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

