ದಕ್ಷಿಣ ಕನ್ನಡ

ಧರೆ ಕುಸಿದು ಶೆಡ್‌ಗೆ ಹಾನಿ

Published On :

ಸುಬ್ರಹ್ಮಣ್ಯ: ಇಲ್ಲಿನ ಪರ್ವತಮುಖಿ ಕೃಷಿಕ ರಾಮಣ್ಣ ಎಂಬವರ ತೋಟದಲ್ಲಿದ್ದ ಶೆಡ್‌ನ ಮೇಲೆ ಶನಿವಾರ ಸುರಿದ ಮಳೆಗೆ ಶೆಡ್‌ನ ಮೇಲೆ ಧರೆ ಕುಸಿದು ಶೆಡ್‌ನ ಶೀಟ್‌ಗಳು ಧ್ವಂಸವಾಗಿದೆ. ನಿರಂತರವಾದ ಮಳೆಗೆ ಹಂತಹಂತವಾಗಿ ಮಣ್ಣು ಕುಸಿಯುತ್ತಾ ಬಂದು, ಶನಿವಾರ ಶೆಡ್‌ನ ಶೀಟ್‌ನ ಮೇಲೇಯೇ ಮಣ್ಣು ಬಿತ್ತು. ಇದರಿಂದಾಗಿ 20- 30 ಶೀಟ್‌ಗಳು ಧ್ವಂಸವಾಗಿದೆ. ಸುಮಾರು ರು. 20 ಸಾವಿರ ನಷ್ಟ ಸಂಭವಿಸಿದೆ.

ವಿದ್ಯುತ್ ಆಘಾತ: ವ್ಯಕ್ತಿ ಸಾವು
ಹೆಬ್ರಿ: ಇಲ್ಲಿನ ಕಳ್ತೂರು ಗ್ರಾಮದ ಗಾಣದಬೆಟ್ಟು ಎಂಬಲ್ಲಿ ಕೇರಳದ ಕಾರ್ಮಿಕರೊಬ್ಬರು ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಮೃತರು ಮೋನಚ್ಚನ್ ಥಾಮಸ್, ಮೂಲತಃ ಕೇರಳದ ಇಡುಕ್ಕಿ ಗ್ರಾಮದ ವುಡಮಂಜೋಲ ತಾಲೂಕಿನ ತೆಕೆಡ್ತು ಎಂಬಲ್ಲಿನ ನಿವಾಸಿ, ಗಾಣದಬೆಟ್ಟು ಎಂಬಲ್ಲಿನ ಜೋಯ್ ಎಂಬವರ ರಬ್ಬರ್ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ. ಭಾನುವಾರ ಸಂಜೆ ರಬ್ಬರ್ ತೋಟದ ಪಂಪ್ ಶೆಡ್ಡಿನ ಎಲೆಕ್ಟ್ರಿಕ್ ಮೀಟರ್ ಬೋರ್ಡನ್ನು ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಆಘಾತದಿಂದ ಕೆಳಗೆ ಬಿದ್ದುಬಿಟ್ಟರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಹೆಬ್ರಿ ರಾಘುವೇಂದ್ರ ಅಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದ. ಈ ಬಗ್ಗೆ ಆತನ ಜೊತೆಗೆ ಕೆಲಸ ಮಾಡುತ್ತಿದ್ದ ಸುಭಾಶ್ ಟಿ.ಎನ್ ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಲಾರು ವ್ಯಕ್ತಿ ಆತ್ಮಹತ್ಯೆ
ಕಾಪು: ಇಲ್ಲಿನ ಮಲ್ಲಾರು ಗ್ರಾಮದ ಕಲ್ಲಾಪು ಎಂಬಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಮೃತರು ಗುರುರಾಜ ಆಚಾರ್ಯ (46), ಅವರಿಗೆ ವಿಪರೀತ ಕುಡಿಯುವ ಚಟವಿದ್ದು, ಇತ್ತೀಚಿನ ದಿನಗಳಲ್ಲಿ ಕೆಲಸ ಇಲ್ಲದೇ ಕುಡಿಯಲು ಹಣದ ಅಡಚಣೆಯಿಂದ ಮನನೊಂದು ಭಾನುವಾರ ಪತ್ನಿ ಶಾರದಾ ತವರು ಮನೆಗೆ ಹೋಗಿದ್ದು, ರಾತ್ರಿ ತಮ್ಮ ಬಾಡಿಗೆ ಮನೆಯ ಮಾಡಿಗೆ ಹೆಂಡತಿಯ ಚೂಡಿದಾರದ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಾರದಾ ಅವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಸ್ಕೆಟ್‌ಬಾಲ್ ಆಡುವಾಗ ಕುಸಿದು ವಿದ್ಯಾರ್ಥಿ ಸಾವು
ಮಣಿಪಾಲ: ಇಲ್ಲಿನ ಎಂಐಟಿಯ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಬಾಸ್ಕೆಟ್‌ಬಾಲ್ ಆಡುವಾಗ ಕೆಳಗೆ ಬಿದ್ದು ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಮೃತ ವಿದ್ಯಾರ್ಥಿ ರಿಷಿ ಬಲಸಾರಿಯಾ(17) ಎಂಐಟಿಯ ಪ್ರಥಮ ವರ್ಷದ ಬಿಟೆಕ್ ವಿದ್ಯಾರ್ಥಿ, ಮಹಾರಾಷ್ಟ್ರ ರಾಜ್ಯದ ನಾಗ್ಪುರದ ನಿವಾಸಿ. ಈತ ಜು.28ರಂದು ಸಂಜೆ 5.30ಕ್ಕೆ ಎಂ.ಐ.ಟಿಯ ಬಾಸ್ಕೆಟ್ ಬಾಲ್ ಗ್ರೌಂಡ್ಸ್‌ನಲ್ಲಿ ಬಾಸ್ಕೆಟ್‌ಬಾಲ್ ಆಡುವಾಗ ಆಯತಪ್ಪಿ ಕೆಳಗೆ ಬಿದ್ದು, ತಲೆಗೆ ಬಲವಾಗಿ  ಕೂಡಲೇ ಕ್ಯಾಂಪಸ್ ಪೆಟ್ರೋಲಿಂಗ್ ಗಾಡಿಯಲ್ಲಿ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ 8 ಗಂಟೆಗೆ ಮೃತಪಟ್ಟಿದ್ದಾನೆ. ಈ ಬಗ್ಗೆ ಆತನ ಸಹೋದರ ದೇವೇಂದ್ರ ಬಲಸಾರಿಯಾ ಅವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.