ಡಯಾಲಿಸಿಸ್ ಚಿಕಿತ್ಸೆಗೆ ಧನ ಸಹಾಯ
ಉಡುಪಿ: ಎಸ್.ವಿ.ಪಿ. ಫೌಂಡೇಶನ್ ತಂಡದ ವತಿಯಿಂದ ಕಿಡ್ನಿ ಹಾಗೂ ಹೈಪರ್ ಟೆನ್ಶನ್ನಿಂದ ನರಳುತ್ತಿರುವ ಪೂರ್ಣಿಮಾ ಶೆಟ್ಟಿಗಾರ್ ಅವರಿಗೆ ಡಯಾಲಿಸಿಸ್ ಚಿಕಿತ್ಸೆಗೆ ಸಹಾಯವಾಗಿ ರು. 5 ಸಾವಿರ ಧನ ಸಹಾಯವನ್ನು ಇತ್ತೀಚೆಗೆ ನೀಡಲಾಯಿತು. ಈ ಸಂದರ್ಭದಲ್ಲಿ ಡೊನಾಲ್ಡ್ ಸಲ್ದಾನ, ಮ್ಯಾಕ್ಸಿಂ ಸ್ಟೀಫನ್, ಶ್ರೀನಿವಾಸ ರಾವ್, ಸೀಮಾ ಸಲ್ದಾನ ಇದ್ದರು. ಪೂರ್ಣಿಮಾ ಅವರ ತಂದೆ ಶಂಕರ ಶೆಟ್ಟಿಗಾರ್ ಅವರಿಗೆ ಸಂಸಾರದೊಂದಿಗೆ ಮಗಳ ಡಯಾಲಿಸ್ ಚಿಕಿತ್ಸೆಗೆ ಇದುವರೆಗೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ, ಸಾಲದ ಕೂಪಕ್ಕೆ ಬಿದ್ದು ಹೆಣಗಾಡುತ್ತಿದ್ದಾರೆ. ಮಗಳ ಕಷ್ಟವನ್ನು ಕಂಡು ಸಹೃದಯವಂತರಿಂದ ಧನ ಸಹಾಯ ನಿರೀಕ್ಷಿಸುತ್ತಿದ್ದಾರೆ. ಯಾರಾದರೂ ಸಹಾಯ ಮಾಡಲಿಚ್ಚಿಸುವವರು ಶಂಕರ ಶೆಟ್ಟಿಗಾರ, ಮೊ. 9900357245 ಅಥವಾ ಎಸ್.ವಿ.ಪಿ. ಫೌಂಡೇಶನ್ನ್ನು ಮೊ. 9845354336 , 9449615253 ಮೂಲಕ ಸಂಪರ್ಕಿಸಬಹುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಟಕಲ್ಲು ದೇವಳಕ್ಕೆ ಸೊರಕೆ ಭೇಟಿ
ಉಡುಪಿ: ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಶಿರ್ವ ಸಮೀಪದ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಆಗಮಿಸಿ, ಪುಷ್ಪಪೂಜಾ ಸೇವೆಯನ್ನು ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರ ಪಿ. ವಿಶ್ವನಾಥ ನಾಯಕ್ ಸಚಿವರನ್ನು ಸನ್ಮಾನಿಸಿದರು. ವೇದ ಮೂರ್ತಿ ಸುಧೀಂದ್ರ ಭಟ್, ಶ್ರೀ ದೇವಳದ ಆಡಳಿತ ಮಂಡಳಿಯ ಸದಸ್ಯರಾದ ಜಯರಾಮ ಪ್ರಭು ಗಂಪದಬೈಲು, ಉಮೇಶ ಪ್ರಭು ಪಾಲಮೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಐಡಾ ಗಿಬ್ಬ ಡಿ' ಸೋಜ, ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಗೀತಾ ವಾಗ್ಲೆ, ಶಿರ್ವ ಗ್ರಾಮ ಪಂಚಾಯಿ ಸದಸ್ಯ ಕೆ.ಆರ್. ಪಾಟ್ಕರ್, ಕಟಪಾಡಿ ಗ್ರಾಮ ಪಂಚಾಯಿ ಅಧ್ಯಕ್ಷ ವಿನಯ ಬಲ್ಲಾಳ್, ತಾಲೂಕು ಪಂಚಾಯಿತಿ ಸದಸ್ಯ ಶ್ರೀಕರ ಅಂಚನ್, ಕರ್ನಾಟಕ ಬ್ಯಾಂಕ್ ಪ್ರಬಂಧಕ ವಿಠಲ ವಾಗ್ಲೆ, ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಆಲ್ವಿನ್ ಸಲ್ಡಾನ್ನಾ, ಶಂಕರ ಕೋಟ್ಯಾನ್ ಇದ್ದರು.
ನಾಳೆ ವರಮಹಾಲಕ್ಷ್ಮೀ ವ್ರತ
ಗಂಗೊಳ್ಳಿ: ಇಲ್ಲಿನ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಮಹಿಳಾ ಮಂಡಳಿ ವತಿಯಿಂದ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ 16ರಂದು ಗಂಗೊಳ್ಳಿ ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿದೆ.
ನಾಳೆ ಅಹವಾಲು ಸ್ವೀಕಾರ
ಮಣಿಪಾಲ: ಸಂಸದ ಜಯಪ್ರಕಾಶ್ ಹೆಗ್ಡೆ ಅವರು 16ರಂದು ಬೆಳಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ತಮ್ಮ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದು ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ನಾಳೆ ಹಿರಿಯ ನಾಗರಿಕರ ವೇದಿಕೆಯಿಂದ ಧರಣಿ
ಉಡುಪಿ: ಹಿರಿಯ ನಾಗರಿಕರಿಗೆ 'ಹಿರಿಯರ ಮನೆ' ಮತ್ತು ಡೇಕೇರ್ ಸೆಂಟರ್ ಪ್ರಾರಂಭಿಸಲು ಎನ್ಜಿಒಗಳಿಗೆ ಆರ್ಥಿಕ ನೆರವು, ಮಾಸಿಕ ಪಿಂಚಣಿ ಹೆಚ್ಚಳ, ರಸ್ತೆ ದಾಟುವ ಸಹಾಯದ ವ್ಯವಸ್ಥೆ, ಪಾಕಿಂರ್ಗ್ ವ್ಯವಸ್ಥೆ, ಸಮಾಜ ಘಾತುಕ ವ್ಯಕ್ತಿಗಳಿಂದ ಹಿರಿಯ ನಾಗರಿಕರಿಗೆ ಪೊಲೀಸರ ರಕ್ಷಣೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಆ.16ರಂದು ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಹಿರಿಯ ನಾಗರಿಕರ ವೇದಿಕೆಯ ಕಾರ್ಯದರ್ಶಿ ಸಿ. ಎಸ್. ರಾವ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಜ್ಜರಕಾಡಿನ ಹಿರಿಯ ನಾಗರಿಕರ ಕಚೇರಿಯಿಂದ ಮೆರವಣಿಗೆ ಮೂಲಕ ತೆರಳಿ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗಾಗಿಯೇ ಜಾರಿಗೊಳಿಸಿದ ಮಾತಾಪಿತರ ಸಂರಕ್ಷಣಾ ಕಾಯಿದೆಯನ್ನು ಇನ್ನೂ ರಾಜ್ಯ ಸರ್ಕಾರಗಳು ಸರಿಯಾಗಿ ಪ್ರಚಾರಗೊಳಿಸಿಲ್ಲ, ಅನುಸರಿಸುತ್ತಲೂ ಇಲ್ಲ. ಕಾನೂನಿನಿಂದ ಬಂದ ರಕ್ಷಣೆ ಮರೀಚಿಕೆಯಾಗಿದೆ. ಆದ್ದರಿಂದ ಅವುಗಳ ಪರಿಹಾರಕ್ಕಾಗಿ ತಾವು ಧರಣಿ ನಡೆಸಬೇಕಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಪಾಂಗಾಳ ರಬೀಂದ್ರ ನಾಯಕ್, ಖಜಾಂಚಿ ವಿಶ್ವನಾಥ ಹೆಗ್ಡೆ, ಉಪಾಧ್ಯಕ್ಷ ಎ.ಪಿ. ಕೊಡಂಚ. ಜಂಟಿ ಕಾರ್ಯದರ್ಶಿ ಟಿ.ಆರ್. ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

