ದಕ್ಷಿಣ ಕನ್ನಡ

ಜಾನುವಾರುಗಳ ಅಕ್ರಮ ಸಾಗಾಟ; ಮೂವರ ಬಂಧನ

Published On :

ಉಪ್ಪಿನಂಗಡಿ: ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಮೂರು ದನಗಳು ಹಾಗೂ ಮೂವರನ್ನು ವಾಹನದೊಂದಿಗೆ ವಶಕ್ಕೆ ತೆಗೆದುಕೊಂಡಿದ್ದಾರೆ.  ಬುಧವಾರ ರಾತ್ರಿ ಚಿಕ್ಕಮಗಳೂರಿನ ಕಳಸದಿಂದ ಕೇರಳದ ಕಸಾಯಿಖಾನೆಗೆ ಪಿಕಪ್ ವಾಹನದಲ್ಲಿ ಮೂರು ದನಗಳನ್ನು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ಅಕ್ರಮ ಸಾಗಾಟವೆಂದು ಖಚಿತ ಪಡಿಸಿದ ಬಳಿಕ ವಶಕ್ಕೆ ತೆಗೆದುಕೊಂಡರು. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಸುರೇಶ್, ಬೆಳ್ತಂಗಡಿ ತಾಲೂಕಿನ ಕಿಲ್ಲೂರು ನಿವಾಸಿ ವಿಶ್ವನಾಥ, ಮೂಡಿಗೆರೆ ನಿವಾಸಿ ರಮೇಶ ಎಂಬವರು ಬಂಧಿತರು. ಕಾರ್ಯಾಚರಣೆ ವೇಳೆ ಈಶ್ವರಮಂಗಲ ಮೂಲದ ಹನೀಫ್ ಎಂಬಾತ ಪರಾರಿಯಾಗಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.