ಸೌದಿಯಲ್ಲಿ ಇಬ್ಬರು ಕನ್ನಡಿಗರ ಸಾವು
ಬಂಟ್ವಾಳ/ಮೂಲ್ಕಿ: ಸೌದಿ ಅರೇಬಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಇತ್ತೀಚೆಗೆ ಮೃತಪಟ್ಟಿದ್ದು, ಒಬ್ಬ ಅಪಘಾತದಿಂದ ಹಾಗೂ ಮತ್ತೊಬ್ಬ ಹೃದಯಾಘಾತದಿಂದ ಅಸುನೀಗಿದ್ದಾರೆ. ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ನಂದಾವರದ ಅಬ್ದುಲ್ ಹಮೀದ್ ಎಂಬವರ ಪುತ್ರ ಮುಹಮ್ಮದ್ ಇರ್ಶಾದ್ (23) ಅಪಘಾತದಲ್ಲಿ ಹಾಗೂ ಮೂಲ್ಕಿ ತಾಲೂಕಿನ ಹಳೆಯಂಗಡಿಯ ಅಬ್ದುಲ್ ಖಾದರ್ ಮತ್ತು ಬಿ.ಫಾತಿಮಾ ದಂಪತಿ ಪುತ್ರ ಮಹಮ್ಮದ್ ಆಶ್ರಫ್ (27) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಗಸ್ಟ್ 5ರಂದು ಇರ್ಶಾದ್ ತಾನು ಕೆಲಸ ಮಾಡುತ್ತಿದ್ದ ಸರಕು ಸಾಗಣೆ ವಾಹನದಲ್ಲಿ ತೆರಳಿದ್ದು ಬಳಿಕ ನಾಪತ್ತೆಯಾಗಿದ್ದ. ಈತನ ಮೊಬೈಲ್ ಕೂಡ ಸ್ತಬ್ಧಗೊಂಡಿತ್ತು. ರಂಜಾನ್ ಹಬ್ಬದ ಅಂಗವಾಗಿ ಕಂಪೆನಿಗೂ ರಜೆ ಇದ್ದ ಹಿನ್ನೆಲೆಯಲ್ಲಿ ಕಂಪೆನಿಯನ್ನು ಸಂಪರ್ಕಿಸಲೂ ಸಾಧ್ಯವಾಗಿರಲಿಲ್ಲ. ರಂಜಾನ್ ಮುಗಿದು ಕಳೆದ ಸೋಮವಾರ ಕಂಪೆನಿ ಕಚೇರಿಗೆ ಬಂದಿದ್ದ ಫ್ಯಾಕ್ಸ್ವೊಂದರಲ್ಲಿ ಅಪಘಾತವಾದ ಮಾಹಿತಿ ಇತ್ತು. ಇದನ್ನು ಆಧರಿಸಿ ಅಪಘಾತದ ಸ್ಥಳ ಪರಿಶೀಲಿಸಿದಾಗ ಇರ್ಶಾದ್ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಮೃತ ಇರ್ಶಾದ್ನ ಮೃತ ದೇಹವನ್ನು ಊರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಆತನ ಕುಟುಂಬ ತಿಳಿಸಿದೆ.
ಜಿದ್ದಾದಲ್ಲಿದ್ದ ಆಶ್ರಫ್: ಕಳೆದ ಶುಕ್ರವಾರ ಈದ್ನಂದು ನಮಾಜ್ ಮುಗಿಸಿ ಮನೆಗೆ ಬಂದು ಮಲಗಿದ ಆಶ್ರಫ್ ಹೃದಯಾಘಾತದಿಂದ ಮೃತಪಟ್ಟಿರುವುದು ಮಾರನೇ ದಿನ ಆತಸ ಸಹೋದ್ಯೋಗಿಗಳಉ ಬಂದು ನೋಡಿದಾಗ ಬೆಳಕಿಗೆ ಬಂದಿದೆ. ನಿಮಯಗಳನ್ನು ಪೂರೈಸಿ ಕಳೇಬರವನ್ನು ಸ್ವದೇಶಕ್ಕೆ ತರಲು ಸುಮಾರು 15 ದಿನಗಳು ತಗಲುವ ಕಾರಣದಿಂದ ಮೃತನ ಸಹೋದರ ಹಾಗೂ ಆತನ ಸಹೋದರರು ಅಲ್ಲಿಯೇ ಧಪನ್ ಕಾರ್ಯವನ್ನು ಮುಗಿಸಿದ್ದಾರೆಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

