ಗೋಕಳ್ಳರ ವಿರುದ್ಧ ಗೂಂಡಾಕಾಯ್ದೆ ವಿಧಿಸಿ: ಮಂಜುನಾಥ್ ಒತ್ತಾಯ
ಮಂಗಳೂರು: ಗೋಹತ್ಯೆ, ಗೋ ಕಳವು ಮತ್ತು ದರೋಡೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಗೂಂಡಾ ಕಾಯ್ದೆ ಹೇರಬೇಕು ಎಂದು ಬಜರಂಗದಳದ ಪ್ರಾಂತೀಯ ಸಂಚಾಲಕ ಮಂಜುನಾಥ ಮಂಡ್ಯ ಹೇಳಿದ್ದಾರೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ವಿಫಲ ಆಗಿರುವ ಬಗ್ಗೆ ಹಾಗೂ ಬಲಿಷ್ಠ ಗೋರಕ್ಷಣಾ ಕಾನೂನು ಜಾರಿಗೆ ಆಗ್ರಹಿಸಿ ಜನಜಾಗೃತಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯೆದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಹಿಂದೂಗಳ ಭಾವನೆಗಳಿಗೆ ಧಕ್ಕೆ ಆದರೆ ಸಹಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಜನಜಾಗೃತಿ ಸಮಿತಿ ಅಧ್ಯಕ್ಷ ವಿದ್ಯಾಧರ ಹೆಗ್ಡೆ ಮಾತನಾಡಿದರು. 30ಕ್ಕೂ ಅಧಿಕ ದನಗಳೊಂದಿಗೆ ಹೈನುಗಾರಿಕೆ ವೃತ್ತಿ ಮಾಡಿಕೊಂಡಿರುವ ತನ್ನ ಮನೆಯಿಂದ ಮೂರು ಹಸುಗಳನ್ನು ಕೊಟ್ಟಿಗೆಯಿಂದ ಕಳುವಾಗಿದೆ. ಇದರ ನಂತರ ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಉಳಿದ ದನಗಳನ್ನು ಕಾಯುತ್ತಾ, ಆತಂಕದಿಂದ ದಿನ ಕಳೆಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಮಿತಿ ಸಂಚಾಲಕ ದಿನೇಶ್ ಪೈ ಮಾತನಾಡಿ, ಹಾಡಹಗಲೇ ಕಳ್ಳತನ ಮಾತ್ರವಲ್ಲದೇ, ಅಕ್ರಮ ಕಸಾಯಿಖಾನೆಗಳ ಮೂಲಕ ಗೋ ಹತ್ಯೆ ನಡೆಯುತ್ತಿರುವುದ ಆತಂಕಕಾರಿ. ಕುದ್ರೋಳಿ ಕಸಾಯಿಖಾನೆ ಮುಚ್ಚದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಕರ್ನಾಟಕ ಗೋಹತ್ಯೆ ನಿಷೇಧ ಹಾಗೂ ಜಾನುವಾರು ಸಂರಕ್ಷಣೆ ತಿದ್ದುಪಡಿ ಮಸೂದೆ 2012ಕ್ಕೆ ತಕ್ಷಣ ಸಹಿ ಹಾಕಿ ಅದನ್ನು ಜಾರಿಗೊಳಿಸಬೇಕು. ಸೂಕ್ತ ಪರವಾನಗಿ ಇಲ್ಲದ, ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಮಂಗಳೂರು ಮಹಾನಗರ ಪಾಲಿಕೆಯ ಒಡೆತನದ ಕುದ್ರೋಳಿ ಕಸಾಯಿಖಾನೆ ಮುಚ್ಚಬೇಕು. ಗೋವು ಕಳೆದುಕೊಂಡವರಿಗೆ ರು. 50 ಸಾವಿರ ಪರಿಹಾರ ನೀಡಬೇಕು. ಕೃಷಿಕರಿಗೆ ರಕ್ಷಣೆ ಹಾಗೂ ಗೋಕಳ್ಳರಿಂದ ರಕ್ಷಣೆಗೆ ಕೋವಿ ಪರವಾನಗಿ ನೀಡಬೇಕು. ಗೋಕಳ್ಳತನವನ್ನು ನಿಗ್ರಹಿಸಲು ಜಿಲ್ಲಾಮಟ್ಟದ ವಿಶೇಷ ಪೊಲೀಸ್ ಪಡೆ ರಚಿಸಬೇಕು ಎಂದು ಮನವಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಿ. ವಾಮನ್ ಶೆಣೈ, ಮೋನಪ್ಪ ಭಂಡಾರಿ, ಸಮಿತಿ ಕಾರ್ಯದರ್ಶಿ ವಿಜಯ ಗೌಡ, ಕಿಶೋರ್ ಕುಮಾರ್, ಬಜರಂಗದಳದ ಶರಣ್ ಪಂಪವೆಲ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

