ದಕ್ಷಿಣ ಕನ್ನಡ

ಸುಬ್ರಹ್ಮಣ್ಯ: ಕುಮಾರಧಾರದಲ್ಲಿ ಕೊಚ್ಚಿಹೋದ ಯಾತ್ರಿಕ

Published On :

ಸುಬ್ರಹ್ಮಣ್ಯ: ಮಂಜೇಶ್ವರದ ಪಾವೂರು ಕೊಪ್ಪಳ ಗ್ರಾಮದ ಬೆಳ್ಯಂಗೋಡಿ ನಿವಾಸಿ ದಿ. ಕುಂಞಪ್ಪ ಬೆಳ್ಚಡ ಇವರ ಪುತ್ರ ಸಚಿನ್(43)ಸೋಮವಾರ ಬೆಳಗ್ಗೆ ಕುಮಾರಧಾರ ಸ್ನಾನಘಟ್ಟದಲ್ಲಿ ತೀರ್ಥಸ್ನಾನ ಮಾಡುತ್ತಿರುವಾಗ ನೀರಿನ ಸೆಳೆತಕ್ಕೆ ಸಿಕ್ಕಿ ನೀರು ಪಾಲಾಗಿದ್ದಾರೆ.
ಇವರ ಕುಟುಂಬಸ್ಥರು ಅಷ್ಟಮಂಗಲದ ಬಳಿಕ ವಿವಿಧ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ ಸೋಮವಾರ ಮುಂಜಾನೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗ ದೋಷ ಪರಿಹಾರಕ್ಕಾಗಿ ಸೇವೆ ಸಲ್ಲಿಸಲು ಬಂದಿದ್ದರು. ತೀರ್ಥ ಸ್ನಾನ ಮಾಡಲೆಂದು ಕುಟುಂಬದವರು ಹಾಗೂ ಬಂದು ಮಿತ್ರರೊಂದಿಗೆ ಕುಮಾರಧಾರ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋದರು.
ಸಚಿನ್ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಅವನ ರಕ್ಷಣೆಗಾಗಿ ಹಗ್ಗ, ಟೈಯರ್ ಹಾಗೂ ಮುಳುಗು ತಜ್ಞರು ಕೂಡ ಯಾರು ಅಲ್ಲಿರಲಿಲ್ಲ. ಇದ್ದ ಒಬ್ಬ ಹೋಂಗಾರ್ಡ್‌ನಲ್ಲಿ ವಿಚಾರಿಸಿದಾಗ ಹಗ್ಗ, ಟೈಯರ್ ಇರುವ ಕೋಣೆಗೆ ಬೀಗ ಜಡಿದಿತ್ತು. ಕೀ ತರಲು ಹೋಗಿ ಬಂದಾಗ ಎಲ್ಲವೂ ಮುಗಿದಿತ್ತು. ಪೊಲೀಸ್ ಸಿಬ್ಬಂದಿ ಕೂಡ ಯಾರೂ ಇರಲಿಲ್ಲ. ಘಟನೆ ಬೆಳಗ್ಗೆ ನಡೆದಿದ್ದು ಮಧ್ಯಾಹ್ನದ ವೇಳೆ ಅಗ್ನಿಶಾಮಕದಳ ಬಂದು ದೋಣಿಯಲ್ಲಿ ಸಂಜೆ ತನಕ ಹುಡುಕಾಟ ನಡೆಸಿದ್ದರೂ ಮುಳುಗು ತಜ್ಞರಿಲ್ಲದ ಕಾರಣ ಶವ ಪತ್ತೆಯಾಗಿಲ್ಲ.
ಇದು ಆಡಳಿತದ ವೈಫಲ್ಯವಾಗಿದೆ. ಸಾವಿರಾರು ಭಕ್ತರು ಬಂದು ತೀರ್ಥಸ್ನಾನ ಮಾಡುವ ಕುಮಾರಧಾರ ನದಿ ದಡೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಬೇಸರವಾಗಿದೆ ಎಂದು ಸಚಿನ್ ಮಿತ್ರ ಕಣ್ಣಾರೆ ನೋಡಿದ ಮಂಗಳೂರು ವಿಜಯ ಬ್ಯಾಂಕಿನ ನಿವೃತ ಮ್ಯಾನೇಜರ್ ಟಿ. ಮೋನಪ್ಪ ಶೆಟ್ಟಿಯವರು ಪತ್ರಿಕೆಗೆ ತಿಳಿಸಿದರು.
ನಮ್ಮದು ಅಗ್ನಿಶಾಮಕ ದಳ ತುರ್ತು ಸಂದರ್ಭದಲ್ಲಿ ನಿಂತ ನೀರಿನ ಕೆರೆ, ಬಾವಿಗಳಲ್ಲಿ ಶೋಧ ನಡೆಸಿ ರಕ್ಷಣೆಗೆ ಇಲ್ಲವೇ ಶವ ಶೋಧ ಮಾಡುತ್ತೇವೆ. ಹರಿಯುವ ನದಿಗಳಲ್ಲಿ ಶೋಧ ನಡೆಸುತ್ತೇವೆ. ಆದರೆ ನಮ್ಮಲ್ಲಿ ಮುಳುಗುವ ತಜ್ಞ ಸಿಬ್ಬಂದಿಗಳಿಲ್ಲದಿರುವುರಿಂದ ಶವ ಪತ್ತೆ ಮಾಡಲು ಕಷ್ಟಸಾಧ್ಯವಾಗಿದೆ ಎಂದು ಸುಳ್ಯ ಅಗ್ನಿ ಶಾಮಕ ಠಾಣಾಧಿಕಾರಿ ಲೋಕೇಶ್ ಪತ್ರಿಕೆಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.