ಆರ್. ಶಂಕರ್ ಪುತ್ಥಳಿ ಸಾಗಾಟಕ್ಕೆ 25ರಂದು ಮಂಗಳೂರಲ್ಲಿ ಚಾಲನೆ
ಮಂಗಳೂರು: ಕೇರಳದ ಪ್ರಥಮ ಮುಖ್ಯಮಂತ್ರಿ ದಿ. ಆರ್. ಶಂಕರ್ ಅವರ ಕಂಚಿನ ಪುತ್ಥಳಿ ಸಾಗಾಟಕ್ಕೆ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಆ.25ರಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡಲಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಬೆಳಗ್ಗೆ 9.30ಕ್ಕೆ ಕುದ್ರೋಳಿಯಲ್ಲಿ ಚಾಲನೆ ಸಿಗಲಿದ್ದು, ಕೇರಳ ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಿಲ ಸೇರಿದಂತೆ ಪ್ರದೇಶ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಸಚಿವರು, ಶಾಸಕರು, ಸಂಸದರು ಹಾಜರಿರುವರು. ನಂತರ ಮೆರವಣಿಗೆಯಲ್ಲಿ ಕಾಸರಗೋಡು ಮಾರ್ಗವಾಗಿ ಪುತ್ಥಳಿಯನ್ನು ತ್ರಿವೆಂಡ್ರಂಗೆ ಸಾಗಲಿದೆ. ದಾರಿಯುದ್ದಕ್ಕೂ ಪುತ್ಥಳಿಗೆ ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಹನ್ನೆರಡುವರೆ ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಕೇರಳದಲ್ಲಿ ನಿರ್ಮಿಸಲಾಗಿದ್ದು, ಶಂಕರ್ರವರು ನಾರಾಯಣಗುರುವಿನ ಭಕ್ತರು. ಕುದ್ರೋಳಿ ಕ್ಷೇತ್ರವನ್ನು ನಾರಾಯಣಗುರುಸ್ಥಾಪಿಸಿದ್ದಲ್ಲದೆ, ಶಂಕರ್ ನಾರಾಯಣಗುರು ಸೇವಾ ಬಳಗದ ಸ್ಥಾಪಕರಲ್ಲೊಬ್ಬರು. ಈ ಹಿನ್ನಲೆಯಲ್ಲಿ ಪುತ್ಥಳಿಯನ್ನು ಇಲ್ಲಿಗೆ ತಂದು ಮತ್ತೆ ಕೇರಳಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದರು.
ಸೆ.7 ಸೋನಿಯಾ ಅನಾವರಣ: ಮಾಜಿ ಸಿಎಂ ಶಂಕರ್ ಪ್ರತಿಮೆಯನ್ನು ಸೆ.7ರಂದು ಪಾಲಯಂನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅನಾವರಣಗೊಳಿಸುವರು. ಈ ಪ್ರತಿಮೆ ನಿರ್ಮಾಣ ಹೊಣೆಯನ್ನು ಕೇರಳ ಕಾಂಗ್ರೆಸ್ ವಹಿಸಿತ್ತು ಎಂದರು.
ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಸುಬ್ಬಯ್ಯ ರೈ, ಶಿವರಾಮ ಆಳ್ವ, ನಝೀರ್, ಐವನ್ ಡಿಸೋಜ, ಪದ್ಮನಾಭ ನರಿಂಗಾನ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

